೨೦೨೪ರಲ್ಲಿ ದೇಶಕ್ಕೆ ನರೇಂದ್ರ ಮೋದಿಯವರು ಅನಿವಾರ್ಯ: ಭಗವಂತ ಖೂಬಾ

ಬೀದರ:ಜು.೨:ಕೇಂದ್ರ ಸರ್ಕಾರದ ೯ ವರ್ಷಗಳ ಸಾಧನೆಗಳು ಜನತೆಗೆ ನೆನಪಿಸುವ ಉದ್ದೇಶ ಹಾಗೂ ದೇಶವು ಈ ಒಂಬುತ್ತು ವರ್ಷಗಳಲ್ಲಿ ಕೈಗೊಂಡಿರುವ ಹಲವಾರು ನಿರ್ಣಯಗಳು, ಈ ನಿರ್ಣಯಗಳಿಂದ ಆದ ಲಾಭವನ್ನು ತಿಳಿಸುವ ಉದ್ದೇಶದಿಂದ ಇಂದು ಫಲಾನುಭವಿಗಳ ಸಮಾವೇಶ ಹಮ್ಮಿಕೊಳ್ಳಲಾಗಿದೆ, ತಾವೇಲ್ಲರೂ ನಮ್ಮ ಸರ್ಕಾರದ ಲಾಭಾರ್ಥಿಗಳಾಗಿದ್ದಿರಿ, ನಿಮ್ಮ ಆಶಿರ್ವಾದ ನಮ್ಮ ಮೋದಿ ಸರ್ಕಾರದ ಮೇಲೆ ಸದಾಕಾಲವಿರಬೇಕು ಎಂದು ಕೇಂದ್ರ ಸಚಿವರಾದ ಭಗವಂತ ಖೂಬಾರವರು, ಮನ್ನಾಏಖೇಳಿ ಗ್ರಾಮದಲ್ಲಿ ಆಯೋಜಿಸಲಾದ, ಫಲಾನುಭವಿಗಳ ಸಮಾವೇಶದಲ್ಲಿ ನುಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ೨೦೦೪ ರಿಂದ ೨೦೧೪ರವರೆಗೆ ದೇಶದ ಅರ್ಥ ವ್ಯವಸ್ಥೆ ಕುಸಿದಿತ್ತು, ದುರಾಡಳಿತ, ಭ್ರಷ್ಟಾಚಾರ ತಾಂಡವವಾಡುತಿತ್ತು, ಮಹಿಳೆಯರ ಆತ್ಮಭಿಮಾನಕ್ಕೆ ಬೆಲೆಯಿರಲಿಲ್ಲಾ, ಅನೇಕ ಸಮಸ್ಯೆಗಳಿಂದ ದೇಶವು ನಲುಗಿ ಹೊಗಿತ್ತು, ಇಂತಹ ಸಂಧರ್ಭದಲ್ಲಿ ೨೦೧೪ರಲ್ಲಿ ದೇಶದ ಜನತೆಯ ಆಶೀರ್ವಾದದೊಂದಿಗೆ, ದೇಶದ ಪ್ರಧಾನಮಂತ್ರಿಯಾಗಿ ಶ್ರೀ ನರೇಂದ್ರ ಮೋದಿಜಿಯವರ ಸರ್ಕಾರ ಆಡಳಿತಕ್ಕೆ ಬಂತು.
೨೦೧೪ ರಿಂದ ಇಂದಿನವರೆಗೆ ಭಾರತ ದೇಶವು ಆರ್ಥಿಕವಾಗಿ ಸಧೃಢವಾಗಿದೆ, ಜಿ.ಡಿ.ಪಿ ಹೆಚ್ಚಾಗಿದೆ, ಹಣದುಬ್ಬರ ನಿಯಂತ್ರಣದಲ್ಲಿದೆ, ನಿರುದ್ಯೋಗ ಸಮಸ್ಯೆ ಕಡಿಮೆಯಾಗಿದೆ, ಪ್ರತಿ ಕ್ಷೇತ್ರದಲ್ಲಿ ಭಾರತ ಬೆಳವಣಿಗೆಯಾಗುತ್ತಿದೆ, ಭಾರತದಲ್ಲಿ ಪ್ರತಿಯೊಬ್ಬರು ಮೋದಿಜಿ ಸರ್ಕಾರದ ಯಾವೂದಾದರೊಂದು ಯೋಜನೆಯ ಲಾಭಾರ್ಥಿಗಳಾಗಿದ್ದಿರಿ.
ಜಾತಿ ಮತ ನೊಡದೆ ನಮ್ಮ ಸರ್ಕಾರದಿಂದ ದೇಶದ ಪ್ರತಿಯೊಬ್ಬರಿಗೂ ಕೋವಿಡ್ ಲಸಿಕೆ ಉಚಿತವಾಗಿ ನೀಡಿದ್ದೇವೆ, ಮಾತೃವಂದನಾ ಯೋಜನೆಯಡಿ ಗರ್ಭಿಣಿಯರ ಸಂರಕ್ಷಣೆ ಮಾಡುತ್ತಿದ್ದೇವೆ, ಆವಾಸ್ ಯೋಜನೆಯಡಿ ಮನೆಗಳು ಮಹಿಳೆಯರ ಹೆಸರಿನ ಮೇಲೆ ನೀಡುತ್ತಿದ್ದೇವೆ, ೫ ಕೆ.ಜಿ ಅಕ್ಕಿ ನೀಡುತ್ತಿರುವುದು ನರೇಂದ್ರ ಮೋದಿಯವರ ಸರ್ಕಾರ, ಬಡ ಕುಟುಂಬಗಳಿಗೆ, ಪ್ರತಿ ಕುಟುಂಬಕ್ಕೆ ೫ ಲಕ್ಷದವರೆಗೆ ಆಯುಷ್ಮಾನ ಭಾರತ ಯೋಜನೆಯಡಿ ಉಚಿತ ಚಿಕಿತ್ಸೆ, ೪೦ ಕೋಟಿ ಜನರಿಗೆ ಮುದ್ರಾ ಯೋಜನೆಯಡಿ ಸಾಲ ನೀಡಿದ್ದೇವೆ, ಇದರಲ್ಲಿ ೨೭.೫ ಕೋಟಿ ಮಹಿಳೆಯರು ಸ್ವಯಂ ಉದ್ಯಮಿಗಳಾಗಿದ್ದಾರೆ. ಕಿಸಾನ್ ಸಮ್ಮಾನ ಯೊಜನೆಯಡಿ ರೈತರಿಗೆ ೬೦೦೦ ಪ್ರೋತ್ಸಾಹಧನ ಮತ್ತು ಫಸಲ್ ಬಿಮಾ ಯೋಜನೆಯಡಿ ೭ ವರ್ಷಗಳಿಂದ, ನೊಂದಣಿ ಮತ್ತು ಪರಿಹಾರ ಪಡೆದುಕೊಳ್ಳುವುದರಲ್ಲಿ ದೇಶಕ್ಕೆ ಬೀದರ ನಂ.೧ ಆಗಿದೆ.
ಜಿಲ್ಲೆಯಲ್ಲಿ ೨೦೧೪ಕ್ಕಿಂತ ಮೊದಲು ಒಂದೆ ಒಂದು ಹೈವೆ ಇತ್ತು, ಇಂದು ೧೨ ಹೈವೆಗಳು ಇವೆ, ಪಿ.ಎಮ್.ಜಿ.ಎಸ್.ವೈ ಅಡಿಯಲ್ಲಿ ಗ್ರಾಮೀಣ ರಸ್ತೆಗಳು ಮಾಡಲಾಗಿದೆ, ಜಲ ಜೀವನ ಮಿಷನ್ ಯೋಜನೆಯಡಿ ಪ್ರತಿ ಮನೆಗೆ ಶುದ್ಧ ಕುಡಿಯುವ ನೀರು ಒದಗಿಸಲಾಗುತ್ತಿದೆ, ೧೫ನೇ ಹಣಕಾಸು ಯೋಜನೆಯಡಿ ಕೇಂದ್ರ ಸರ್ಕಾರದಿಂದ ಪ್ರತಿ ಗ್ರಾಮ ಪಂಚಾಯತಗೆ ನೀಡುತ್ತಿದ್ದೇವೆ.
ಆದರೆ ವಿರೋಧ ಪಕ್ಷದವರು ದೇಶದ ಬೇಳವಣಿಗೆ ಸಹಿಸಲಾರದೆ, ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ, ಇಂತಹ ವಿರೋಧ ಪಕ್ಷದವರನ್ನು ದೂರವಿಡಿ, ಕಾಂಗ್ರೇಸ್ ಪಕ್ಷ ಹಾಗೂ ವಿರೋಧ ಪಕ್ಷಗಳಲ್ಲಿ ಕೇವಲ ಕುಟುಂಬದವರೇ ಆಳುತ್ತಿದ್ದಾರೆ, ಇಂತಹವರಿAದ ದೇಶ ನಡೆಸಲು ಸಾಧ್ಯವಿಲ್ಲ, ನಾವೆಲ್ಲರೂ ನರೇಂದ್ರ ಮೋದಿಜಿಯವರಿಗೆ ೨೦೨೪ರಲ್ಲಿ ಮತ್ತೋಮ್ಮೆ ಮೋದಿಯವರಿಗೆ ಪ್ರಧಾನಮಂತ್ರಿ ಮಾಡೋಣ ಎಂದು ಎಲ್ಲರಿಗೂ ತಿಳಿಸಿದರು.
ಶಾಸಕ ಶೈಲೇಂದ್ರ ಬೆಲ್ದಾಳೆಯವರು ಮಾತನಾಡಿ, ಕೇಂದ್ರ ಸರ್ಕಾರದ ಪ್ರತಿಯೊಂದು ಯೋಜನೆಗಳು ಮನೆ ಮನೆಗೆ ತಲುಪಿಸುವ ಜವಬ್ದಾರಿ ನಮ್ಮೇಲ್ಲರದ್ದಾಗಿದೆ, ಕಾಂಗ್ರೇಸ್ ನವರು ಸುಳ್ಳು ಗ್ಯಾರಂಟಿಗಳಿAದ ಅಧಿಕಾರಕ್ಕೆ ಬಂದಿದ್ದಾರೆ. ಮುಂಬರುವ ದಿನಗಳಲ್ಲಿ ತಾಲೂಕು ಪಂಚಾಯತ, ಜಿಲ್ಲಾ ಪಂಚಾಯತ ಹಾಗೂ ಲೋಕಸಭೆ ಚುನಾವಣೆಯಲ್ಲಿ ಗೆಲ್ಲಿಸುವ ಜವಬ್ದಾರಿ ನಮ್ಮೇಲ್ಲರದ್ದಾಗಿದೆ.
ನಮ್ಮ ದೇಶದ ೧೩೦ ಕೋಟಿ ಜನ ಸುರಕ್ಷಿತವಾಗಿರಬೇಕೆಂದರೆ ನಾವೇಲ್ಲರೂ ಮತ್ತೊಮ್ಮೆ ಮೋದಿಜಿಯವರನ್ನು ಪ್ರಧಾನಿ ಮಾಡಬೇಕಾಗಿದೆ, ವಿಶ್ವದಲ್ಲಿ ಭಾರತಕ್ಕೆ ಸಿಗುತ್ತಿರುವ ಗೌರವ ನಾವೆಲ್ಲರೂ ಗಮನಿಸಬೇಕಾಗಿದೆ, ಬರುವ ಚುನಾವಣೆಗಳಲ್ಲಿ ವಿಜಯ ಪತಾಕೆ ಹಾರಿಸೊಣ ಎಂದು ತಿಳಿಸಿದರು.
ಈ ಸಂಧರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಶಿವಾನಂದ ಮಂಠಾಳಕರ್, ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ, ಮಂಡಲ ಅಧ್ಯಕ್ಷರಾದ ರಾಜರೇಡ್ಡಿ ಶಾಬಾದಿ, ಮುಖಂಡರಾದ ಮಲ್ಲಿಕಾರ್ಜುನ ಕುಂಬಾರ, ಚಂದು ಪಾಟೀಲ್ , ವಿರು ದಿಗ್ವಾಲ್, ಸುರೇಶ ಮಾಶೇಟ್ಟಿ, ಹೆಮಾ ತುಕ್ಕಾರೆಡ್ಡಿ, ಚಂದ್ರಯ್ಯಾ ಸ್ವಾಮಿ ಇತರರು ಉಪಸ್ಥಿತರಿದ್ದರು.