೨೦೨೩ರ ಚುನಾವಣೆಯಲ್ಲಿ ಬಿಜೆಪಿ ಗೆಲುವಿಗಾಗಿ ಶ್ರಮಿಸೋಣ

ಸಿರವಾರ,ಜ.೮ – ಮುಂಬರುವ ೨೦೨೩ರ ವಿಧಾನ ಸಭಾ ಚುನಾವಣೆಯಲ್ಲಿ ಮಾನ್ವಿ ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಯ ಗೆಲುವಿಗಾಗಿ ಪಕ್ಷದ ಪ್ರತಿಯೊಬ್ಬರು ಒಗ್ಗಟ್ಟಿನಿಂದ ಶ್ರಮಿಸೋಣ ಎಂದು ಬಿಜೆಪಿಯ ಮಂಡಲ ಅಧ್ಯಕ್ಷರಾದ ಮಲ್ಲಿಕಾರ್ಜುನ ಜಕ್ಕಲದಿನ್ನಿ ಕರೆ ನೀಡಿದರು.
ಪಟ್ಟಣದ ಸಿರವಾರ ಪಟ್ಟಣದ ಬಸವೇಶ್ವರ ಕಾಲೇಜಿನಲ್ಲಿ ನಡೆದ ಜಿಲ್ಲಾ ಪಂಚಾಯತ್ ಮಟ್ಟದ ಬೂತ್ ವಿಜಯ ಅಭಿಯಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಪ್ರತಿಯೊಂದು ಜನಪರ ಕಾರ್ಯಕ್ರಮಗಳನ್ನು ಮನೆ ಮನೆಗೆ ಕೊಂಡೊಯ್ಯುವುದರ ಜೊತೆಗೆ ನಮ್ಮ ಪಕ್ಷದ ಅಭ್ಯರ್ಥಿಯ ಗೆಲುವಿಗಾಗಿ ನಾವೆಲ್ಲರೂ ಒಂದಾಗಿ ಶ್ರಮಿಸೋಣ ಎಂದು ತಿಳಿಸಿದರು.ನಂತರ ಮಾಜಿ ಶಾಸಕ ಗಂಗಾಧರ ನಾಯಕ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ನರಸಿಂಹರಾವ್ ಕುಲಕರ್ಣಿ ಮಾತನಾಡಿದರು.
ಈ ಸಂದರ್ಭದಲ್ಲಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಅಮರೇಶ ಹೆಚ್.ಕೆ, ಪಕ್ಷದ ಹಿರಿಯ ಮುಖಂಡರಾದ ಉಮೇಶ ಸಜ್ಜನ್, ದೇವರಾಜ ಗೌಡ, ರಾಮನಗೌಡ ಗವಿಗಟ್, ಕೆ.ನಾಗಲಿಂಗಸ್ವಾಮಿ, ಎಸ್.ಟಿ ಮೋರ್ಚಾದ ರಾಜ್ಯ ಕಾರ್ಯಕರ್ಣಿ ಸದಸ್ಯರಾದ ವಿರೇಶ ನಾಯಕ ಬೆಟ್ಟದೂರು, ಮಂಡಲ ಪ್ರಧಾನ ಕಾರ್ಯದರ್ಶಿ ಭೀಮಣ್ಣ ನಾಯಕ ಹರವಿ, ಗುರುಸಿದ್ದಪ್ಪ ಗೌಡ ಕಣ್ಣೂರು, ಸುರೇಶ ನವಲಕಲ್, ಮಾನಪ್ಪ ನಾಯಕ, ಎಸ್.ಟಿ ಮೋರ್ಚಾ ಜಿಲ್ಲಾಧ್ಯಕ್ಷ ಅಯ್ಯಪ್ಪ ನಾಯಕ, ಹನುಮಂತ್ರಾಯ ನಾಯಕ, ಶ್ರೀಕಾಂತ ಪಾಟೀಲ ಗೂಳಿ, ವೆಂಕಟೇಶ ನಾಯಕ ಚಿಕ್ಕಕೊಟ್ನೇಕಲ್, ವೆಂಕಟೇಶ ಕೋನಾಪುರಪೇಟೆ, ಸುಭಾಷ್ ಚಂದ್ರ, ರಂಗನಾಥ ನಾಯಕ ಜಗೀರಪನ್ನೂರು, ಲಕ್ಷ್ಮಣ, ಮಲ್ಲಪ್ಪ ಕಜ್ಜಿ, ಕೃಷ್ಣ ನಾಯಕ, ರಾಮಣ್ಣ ಬೈನೇರ್ ಸೇರಿದಂತೆ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.