
ನವದೆಹಲಿ,ಮೇ.೧೮- ವಿವಾದದ ನಡುವೆಯೂ ದಿ ಕೇರಳ ಸ್ಟೋರಿ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ೨೦೦ ಕೋಟಿ ಕ್ಲಬ್ ಸೇರಲು ಸಜ್ಜಾಗಿದೆ. ದಿನದಿಂದ ದಿನಕ್ಕೆ ಬಾಕ್ಸ್ ಆಫೀಸ್ ಕಲೆಕ್ಷನ್ ಹೆಚ್ಚಿಸಿಕೊಳ್ಳುತ್ತಲೇ ಇದೆ ನಟಿ ಅದಾ ಶರ್ಮಾ ನಟನೆಯ ‘ದಿ ಕೇರಳ ಸ್ಟೋರಿ’ ಭಾರತದಲ್ಲಿ ಮಾತ್ರವಲ್ಲ, ವಿದೇಶದಲ್ಲೂ ಅದು ತನ್ನ ಹವಾ ಮುಂದುವರೆಸುತ್ತಿದೆ.
ಪಶ್ಚಿಮ ಬಂಗಾಳ ಸೇರಿದಂತೆ ಹಲವು ರಾಜ್ಯಗಳಲ್ಲಿ ಚಿತ್ರಕ್ಕೆ ಅಡೆತಡೆ ಮಾಡಿದ್ದರೂ, ಇತರ ರಾಜ್ಯಗಳು ದಿ ಕೇರಳ ಸ್ಟೋರಿಗೆ ಕೈ ಹಿಡಿದಿವೆ.
ನಿನ್ನೆವರೆಗೂ ಕೇರಳ ಸ್ಟೋರಿ ಗಳಿಸಿದ ಒಟ್ಟು ಹಣ ೧೬೮ ಕೋಟಿ ರೂಪಾಯಿ ಎಂದು ಸಿನಿ ಪಂಡಿತರು ಲೆಕ್ಕ ಹಾಕಿದ್ದಾರೆ.ಸಿನಿಮಾ ಮೊದಲ ದಿನ ಸಾಧಾರಣ ಓಪನಿಂಗ್ ಪಡೆದುಕೊಂಡಿದ್ದರೂ, ಮುಂದಿನ ದಿನಗಳಲ್ಲಿ ಅಚ್ಚರಿ ಎನ್ನುವಂತೆ ದುಡ್ಡು ಬಾಕ್ಸ್ ಆಫೀಸಿಗೆ ಹರಿದು ಬಂದಿದೆ.
ಮೊದಲ ದಿನ ೮.೦೩ ಕೋಟಿ ರೂ. ಎರಡನೇ ದಿನ ೧೧.೨೨ ಕೋಟಿ ರೂ. ಮೂರನೇ ದಿನ ೧೬ ಕೋಟಿ ನಾಲ್ಕನೇ ದಿನ ೧೦.೦೭ ಕೋಟಿ ರೂ. ಮಂಗಳವಾರ ೧೧.೧೪ ಕೋಟಿ ರೂ. ಬುಧವಾರ ೧೨ ಕೋಟಿ ರೂ. ಶುಕ್ರವಾರ ಕೂಡ ೧೨.೩೫ ಕೋಟಿ ರೂಪಾಯಿ ಗಳಿಸಿತ್ತು.ಶನಿವಾರ ೧೯.೫೦ ಕೋಟಿ ರೂಪಾಯಿ, ರವಿವಾರ ೨೩.೭೫ ಕೋಟಿ ರೂಪಾಯಿ, ಸೋಮವಾರ ೧೦.೩೦ ಕೋಟಿ ರೂಪಾಯಿ, ಮಂಗಳವಾರ ೯.೬೫ ಕೋಟಿ ರೂಪಾಯಿ, ಬುಧವಾರ ಕೂಡ ೧೨ ಕೋಟಿಗೂ ಅಧಿಕ ಗಳಿಕೆ ಮಾಡಿದೆ.ದಿ ಕೇರಳ ಸ್ಟೋರಿ ಇದೀಗ ವಿದೇಶದಲ್ಲೂ ರಿಲೀಸ್ ಆಗಿದೆ. ಆಸ್ಟ್ರೇಲಿಯಾ ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿ ಚಿತ್ರ ಬಿಡುಗಡೆಯಾಗಿದ್ದು, ಆಸ್ಟ್ರೇಲಿಯಾದಲ್ಲಿ ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. ಅನೇಕ ಕಡೆ ಅಘೋಷಿತ ನಿಷೇಧ ಹೇರಿದ್ದರೂ, ಸ್ವತಃ ಕೇರಳದಲ್ಲೇ ಸಿನಿಮಾ ಪ್ರದರ್ಶನಕ್ಕೆ ನಾನಾ ಅಡತಡೆಗಳನ್ನು ಒಡ್ಡಿದ್ದರೂ ಅದು ಹೇಗೆ ಈ ಪ್ರಮಾಣದಲ್ಲಿ ಕಲೆಕ್ಷನ್ ಆಗೋಕೆ ಸಾಧ್ಯ ಎಂದು ಹಲವರು ಪ್ರಶ್ನಿಸಿದ್ದಾರೆ.