೨೦೦ ಕೋಟಿ ಡೋಸ್ ಲಸಿಕೆ ಪೂರ್ಣ

ಹೊಸಮೈಲಿಗಲ್ಲು

ನವದೆಹಲಿ,ಜು.೧೭- ದೇಶದಲ್ಲಿ ಕೊರೊನಾ ಸೋಂಕಿಗೆ ಲಸಿಕೆ ಹಾಕುವ ಅಭಿಯಾನ ಆರಂಭವಾದಾಗಿನಿಂದ ಇದುವರೆಗೆ ೨೦೦ ಕೋಟಿ ಡೋಸ್ ಲಸಿಕೆ ನೀಡುವ ಮೂಲಕ ಭಾರತ ಹೊಸ ಮೈಲುಗಲ್ಲು ಸ್ಥಾಪಿಸಿದೆ.

ನಿನ್ನೆ ಸಂಜೆವರೆಗೆ ೧೯೯,೯೮,೮೯,೦೯೭ ಡೋಸ್ ಲಸಿಕೆ ನೀಡಿದ್ದ ದೇಶದಲ್ಲಿ ಮದ್ಯಾಹ್ನದ ವೇಳೆಗೆ ೨೦೦ ಕೋಟಿ ಡೋಸ್ ಲಸಿಕೆ ಪೂರೈಸಿ ಸೋಂಕು ತಡೆಗೆ ಮಹತ್ವದ ಹೆಜ್ಜೆ ಇರಿಸಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.ದೇಶದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಸಂಖ್ಯೆ ಅಧಿಕವಾಗುತ್ತಿದೆ. ಕಳೆದ ಹಲವು ದಿನಗಳಿಂದ ಸತತ ೨೦ ಸಾವಿರ ಗಡಿ ದಾಟಿ ದಾಖಲಾಗುತ್ತಿರುವುದು ಆತಂಕ ಮೂಡಿಸಿದೆ.ಇದುವರೆಗೂ ೨೦೦,೦೦,೧೫ ,೬೩೧ ಡೋಸ್ ಲಸಿಕೆ ನೀಡಲಾಗಿದ್ದು ಈ ಪೈಕಿ ೧೦೧,೯೦,೭೩,೮೯೧ ಡೋಸ್ ಮೊದಲ ಡೋಸ್, ೯೨,೫೯,೨೬,೮೮೦ ಮಂದಿಗೆ ಎರಡನೇ ಡೋಸ್ ಹಾಗು ೫,೫೦,೧೪,೮೬೦ ಮಂದಿಗೆ ಹೆಚ್ಚುವರಿ ಡೋಸ್ ನೀಡಿ ಸಾಧನೆ ಮಾಡಿದೆ.ಕಳೆದ ೨೪ ಗಂಟೆಗಳ ಅವಧಿಯಲ್ಲಿ ೨೦,೫೨೮ ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು ೪೯ ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಜೊತೆಗೆ ಇದೇ ಅವಧಿಯಲ್ಲಿ ೧೭,೭೯೦ ಮಂದಿ ಸೋಂಕಿತರು ಚೇತರಿಸಿಕೊಂಡು ಬಿಡುಗಡೆಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ನಿತ್ಯ ಏರುಮುಖದಲ್ಲಿದ್ದು ಸದ್ಯ ಈ ಪ್ರಮಾಣ ೧,೪೩,೧೪೯ ಮಂದಿಗೆ ಏರಿಕೆಯಾಗಿದೆ. ಜೊತೆಗೆ ಕಳೆದ ೨೪ ಗಂಟೆಗಳ ಅವಧಿಯಲ್ಲಿ ೨೫,೫೯,೮೧೦ ಡೋಸ್ ಲಸಿಕೆ ನೀಡಿದ್ದು ಇಲ್ಲಿಯ ತನಕ ಲಸಿಕೆ ಪಡೆದವರ ಸಂಖ್ಯೆ ಹೆಚ್ಚಳವಾಗಿದೆ.ಹೊಸದಾಗಿ ದಾಖಲಾಗಿರುವ ಸೋಂಕು ಸಂಖ್ಯೆ ಸೇರಿದಂತೆ ಇಲ್ಲಿಯ ತನಕ ಒಟ್ಟು ಸೋಂಕಿತರ ಸಂಖ್ಯೆ ೪.೩೪ ಕೋಟಿಗೆ ಏರಿಕೆಯಾಗಿದ್ದು ಇದವರೆಗೂ ಚೇತರಿಸಿಕೊಂಡು ಬಿಡುಗಡೆಯಾದವರ ಸಂಖ್ಯೆ ೪,೩೦,೮೧೪೪ಕ್ಕೆ ಏರಿಕೆಯಾಗಿದೆ. ಅಲ್ಲದೆ ೫.೨೫,೭೦೦ ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಒಟ್ಟಾರೆ ಪಾಸಿಟಿವಿ ಪ್ರಮಾಣ ಶೇ.೦.೩೩ ರಷ್ಟು ಇದ್ದು ದಿನದ ಪಾವಿಟಿ ಪ್ರಮಾಣ ಶೇ.೫.೨೩ ಹಾಗು ದಿನದ ಪಾಸಿಟಿ ಶೇ.೪.೫೫ ರಷ್ಟು ಇದೆ. ಸೋಂಕು ಸಂಖ್ಯೆ ಏರಿಕೆ ಹಿನ್ನೆಲೆಯಲ್ಲಿ ಒಟ್ಟಾರೆ ಚೇತರಿಕೆ ಪ್ರಮಾಣ ಗಣನೀಯವಾಗಿ ಕುಸಿತ ಕಂಡಿದ್ದು ಸದ್ಯ ಈ ಪ್ರಮಾಣ ಶೇ.೯೮.೪೭ ರಷ್ಟು ಇದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.