೨೦ಕ್ಕೂ ಹೆಚ್ಚು ಗಣ್ಯರ ಹೆಸರು ಬಾಯ್ಬಿಟ್ಟ ನಶೆ ರಾಣಿಯರು

ಬೆಂಗಳೂರು, ಸೆ.೧೩- ಮಾದಕ ವಸ್ತು ಜಾಲ ಪ್ರಕರಣದಲ್ಲಿ ಬಂಧಿತರಾಗಿರುವ ನಶೆ ರಾಣಿಯರು ವಿಚಾರಣೆ ವೇಳೆ ೨೦ ಕ್ಕೂ ಅಧಿಕ ಗಣ್ಯಾತಿಗಣ್ಯರು,ಪ್ರಮುಖರ ಹೆಸರು ಬಾಯಿ ಬಿಟ್ಟಿದ್ದಾರೆ ಎನ್ನುವ ಸಂಗತಿ ಜಾಲದಲ್ಲಿ ಸಿಲುಕಿದವರಿಗೆ ನಡುಕ ಹುಟ್ಟಿಸಿದೆ.

ಪ್ರಭಾವಿಗಳ ಮಕ್ಕಳ ಹೆಸರು ಬಾಯಿ ಬಿಟ್ಟಿರುವ ಹಿನ್ನೆಲೆಯಲ್ಲಿ ಅವರಿಗೂ ನಡುಕ ಉಂಟಾಗಿದೆ.
ನಟಿಯರಾದ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾಣಿ ನೀಡಿರುವ ಮಾಹಿತಿ ಆಧರಿಸಿ ಸಾಕ್ಷಗಳನ್ನು ಕಲೆಹಾಕುವ ಕೆಲಸದಲ್ಲಿ ಸಿಸಿಬಿ ಅಧಿಕಾರಿಗಳು ನಿರತರಾಗಿದ್ದಾರೆ. ನಟಿಯರು ಹೇಳಿದ ಮಾಹಿತಿಗೂ ಕಲೆಹಾಕುವ ಸಾಕ್ಷಗಳಿಗೆ ತಾಳೆ ಆದರೆ ಎಲ್ಲರಿಗೂ ನೋಟಿಸ್ ನೀಡುವ ಸಾಧ್ಯತೆಗಳಿವೆ.

ಮಾದಕ ವಸ್ತು ಸೇವನೆ ಹಾಗೂ ಸರಬರಾಜು ಜಾಲ ಪ್ರಕರಣದ ಸಾಕ್ಷ್ಯ ನಾಶ ಮಾಡಿದ್ದ ಇಬ್ಬರೂ ನಟಿಯರು ಡಿಲೀಟ್ ಮಾಡಿದ್ದ ಮಾಹಿತಿಯನ್ನು ರೀಟ್ರೀಟ್ ಮಾಡಿದ್ದಾರೆ. ಅಸಲಿ ಸಂಗತಿ ಬೆಳಕಿಗೆ ಬರುತ್ತಿದ್ದಂತೆ ಮುಚ್ಚಿಟ್ಟರೆ ಪ್ರಯೋಜನ ಇಲ್ಲ ಎಂದು ಅನಿವಾರ್ಯವಾಗಿ ಜಾಲ ಪ್ರಕರಣದಲ್ಲಿ ಯಾರೆಲ್ಲಾ ಭಾಗಿಯಾಗಿದ್ದಾರೆ ಎನ್ನುವ ಮಾಹಿತಿ ಹೊರ ಹಾಕಿದ್ದಾರೆ ಎನ್ನಲಾಗಿದೆ.

ಪ್ರಮುಖ ವ್ಯಕ್ತಿಗಳ ಹೆಸರನ್ನು ವಿಚಾರಣೆಯ ವೇಳೆ ಇಬ್ಬರು ನಟಿಯರು ಬಹಿರಂಗಪಡಿಸಿದ್ದಾರೆ ಎನ್ನಲಾದ ಹಿನ್ನೆಲೆಯಲ್ಲಿ ಮಡಿವಾಳದ ಎಫ್ ಎಸ್ ಎಲ್ ಕೇಂದ್ರದಲ್ಲಿ ಮತ್ತಷ್ಟು ವಿಚಾರಣೆಗೆ ಒಳಪಡಿಸಿದ್ದಾರೆ.

ಕಳೆದ ೧೧ದಿನಗಳಿಂದ ಪೊಲೀಸರ ವಶದಲ್ಲಿರುವ ನಟಿ ರಾಗಿಣಿ ಮತ್ತು ನಾಲ್ಕೈದು ದಿನಗಳಿಂದ ಪೊಲೀಸರ ವಶದಲ್ಲಿರುವ ನಟಿ ಸಂಜನಾ ಇದುವರೆಗೂ ವಿಚಾರಣೆಗೆ ಸೂಕ್ತವಾಗಿ ಸ್ಪಂದಿಸುತ್ತಿರಲಿಲ್ಲ ಆದರೆ ಅವರ ವಿಚಾರಣೆ ಕಾರಣವಾಗಲಿರುವ ಹಿನ್ನೆಲೆಯಲ್ಲಿ ಜೈಲಿಗೆ ಹೋಗುವ ಭೀತಿಯಿಂದ ಪ್ರಮುಖರು ಹಾಗೂ ಗಣ್ಯಾತಿಗಣ್ಯರ ಹೆಸರನ್ನು ಹೊರ ಹಾಕಿದ್ದಾರೆ ಎನ್ನಲಾಗಿದೆ.

ನಾಳೆ ಇವರಿಬ್ಬರ ಪೊಲೀಸ್ ವಿಚಾರಣಾ ಅವಧಿ ಪೂರ್ಣಗೊಳ್ಳಲಿರುವ ಹಿನ್ನೆಲೆಯಲ್ಲಿ ಅಷ್ಟರ ವೇಳೆಗೆ ಇನ್ನಷ್ಟು ಮಾಹಿತಿಯನ್ನು ಇಬ್ಬರಿಂದ ಬಾಯಿ ಬಿಡಿಸಿಕೊಳ್ಳಲು ಪೊಲೀಸರು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ.

ಆರಂಭದ ವಿಚಾರಣೆ ಸಮಯದಲ್ಲಿ ಈ ಪ್ರಕರಣಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಏನು ಗೊತ್ತಿಲ್ಲ ಎಂದು ಹೇಳುತ್ತಿದ್ದ ಈ ಇಬ್ಬರು ನಟಿಯರು ನಮಗೆ ಯಾವಾಗ ಜೈಲು ಎಲ್ಲಿ ಖಾಯಂ ಆಗುವುದು ಎನ್ನುವ ಭಯದಿಂದ ಎಲ್ಲ ವಿಷಯವನ್ನು ಒಂದೊಂದಾಗಿ ಬಾಯಿಬಿಟ್ಟಿದ್ದಾರೆ ಎನ್ನಲಾಗುತ್ತಿದೆ..

ನಟಿಯರಾದ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾಣಿ ಅವರು ಮಾಡಿರುವ ಪ್ರಮುಖರ ಹೆಸರುಗಳಲ್ಲಿ ಸಿನಿಮಾ ರಾಜಕೀಯ ಉದ್ಯಮ ಸೇರಿದಂತೆ ಗಣ್ಯರು ಹಾಗೂ ಅವರ ಮಕ್ಕಳು ಇದ್ದಾರೆ ಎನ್ನುವುದು ಸದ್ಯಕ್ಕಿರುವ ಕುತೂಹಲ.

ಆರೋಗ್ಯ ವಿಚಾರಣೆ:

ಈ ನಡುವೆ ಪ್ರಕರಣದ ಆರೋಪಿಗಳಾದ ವೀರೇನ್ ಖನ್ನಾ ,ರವಿಶಂಕರ್ ಆರೋಗ್ಯ ತಪಾಸಣೆ ನಡೆಸಲಾಗಿದೆ. ಜೊತೆಗೆ ಪ್ರತೀಕ್ ಶೆಟ್ಟಿ ಅವರಿ?ಎ ಕೆ.ಸಿ ಜನರಲ್ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸೆಣೆ ನಡೆಸಲಾಗಿದೆ.