೨ನೇ ಮಗುವಿಗೆ ಜನ್ಮನೀಡಿದ ರಜನಿ ಪುತ್ರಿ

ಚೆನ್ನೈ. ಸೆ ೧೨- ದಕ್ಷಿಣ ಭಾರತದ ಹಿರಿಯ ನಟ ರಜನಿಕಾಂತ್ ಪುತ್ರಿ ಸೌಂದರ್ಯ ಹಾಗೂ ವಿಶಾಗನ್ ದಂಪತಿಗೆ ಗಂಡುಮಗು ಜನನವಾಗಿದ್ದು, ಕುಟುಂಬದಲ್ಲಿ ಸಂತಸದ ವಾತಾವರಣ ಮನೆ ಮಾಡಿದೆ.

ಮಗುವಿಗೆ ‘ವೀರ್ ರಜನಿಕಾಂತ್ ವನಂಗಮುಡಿ’ ಎಂದು ನಾಮಕರಣ ಮಾಡಲಾಗಿದೆ. “ನಾನು ಮತ್ತು ವಿಶಾಗನ್ ದೇವರ ದಯೆ ಮತ್ತು ನಮ್ಮ ಹೆತ್ತವರ ಆಶೀರ್ವಾದದಿಂದ ವೇದ್ ಕೃಷ್ಣನ ಕಿರಿಯ ಸಹೋದರನನ್ನು ಸ್ವಾಗತಿಸುತ್ತೇವೆ. ವೈದ್ಯರಿಗೆ ಧನ್ಯವಾದಗಳು” ಎಂದು ಸೌಂದರ್ಯ ರಜನಿಕಾಂತ್ ಇನ್ಸ್ಟಾಗ್ರಾಮ್ ಮತ್ತು ಟ್ವಿಟರ್ನಲ್ಲಿ ಬರೆದಿದ್ದಾರೆ.

ಸೌಂದರ್ಯ ರಜನಿಕಾಂತ್ ಈ ಹಿಂದೆ ಉದ್ಯಮಿ ಅಶ್ವಿನ್ ಕುಮಾರ್ ಅವರನ್ನು ಮದುವೆಯಾಗಿದ್ದರು. ಮೊದಲ ಮಗುವಿಗೆ ವೇದಕೃಷ್ಣ ಎಂದು ಹೆಸರಿಟ್ಟಿದ್ದರು. ಆದರೆ, ಕಾರಣಾಂತರಗಳಿಂದ ವಿಚ್ಛೇದನ ಪಡೆದಿದ್ದರು. ನಂತರ ಸೌಂದರ್ಯ ರಜನಿಕಾಂತ್, ೨೦೧೯ ರಲ್ಲಿ ಉದ್ಯಮಿ ವಿಶಾಗನ್ ವನಂಗಮುಡಿ ಅವರನ್ನು ವಿವಾಹವಾಗಿದ್ದು, ಈಗ ಗಂಡು ಮಗುವಿಗೆ ಜನ್ಮ ಕೊಟ್ಟಿದ್ದಾರೆ

ಸಾಮಾಜಿಕ ಜಾಲತಾಣದಲ್ಲಿ ಪೋಟೋ ಶೇರ್ ಮಾಡಿದ್ದು, ಮೊದಲ ಕ್ಲೋಸಪ್ ಚಿತ್ರದಲ್ಲಿ, ಮಗು ವ್ಯಕ್ತಿಯ ಬೆರಳನ್ನು ಹಿಡಿದಿರುವುದು ಕಂಡುಬರುತ್ತದೆ. ಎರಡನೇ ಫೋಟೋದಲ್ಲಿ ಸೌಂದರ್ಯ ಅವರ ಫೋಟೋಶೂಟ್ ಸಮಯದಲ್ಲಿ ಇಡೀ ಕುಟುಂಬವಿದೆ. ಸೌಂದರ್ಯ ಅವರು ಗರ್ಭಿಣಿಯಾಗಿದ್ದಾಗಿನಿಂದ ಕಪ್ಪು ಬಿಳುಪು ಚಿತ್ರದಲ್ಲಿ ಪೋಸ್ ಕೊಟ್ಟಿದ್ದಾರೆ. ಕೊನೆಯ ಫೋಟೋದಲ್ಲಿ ಸೌಂದರ್ಯ ತನ್ನ ಮಗ ವೇದ್ ಜೊತೆ ಕಾಣಿಸಿಕೊಂಡಿದ್ದಾರೆ