೨ನೇ ಡೋಸ್ ಲಸಿಕೆಗೆ ಕೇಂದ್ರ ಸೂಚನೆ


ನವದೆಹಲಿ, ಜೂ.೧೧- ಆರೋಗ್ಯ ಮತ್ತು ಮುಂಚೂಣಿ ಕಾರ್ಯಕರ್ತರಿಗೆ ಎರಡನೇ ಡೋಸ್ ಲಸಿಕೆ ನೀಡುವ ಕಡೆ ಗಮನಹರಿಸಬೇಕೆಂದು ಎಲ್ಲ ರಾಜ್ಯಗಳಿಗೆ ಕೇಂದ್ರ ಸರ್ಕಾರ ಸಲಹೆ ಮಾಡಿದೆ. ದೇಶದಲ್ಲಿ ಮೂರನೇ ಅಲೆ ಎದುರಾಗಲಿದ್ದು, ಇದು ಮಕ್ಕಳ ಮೇಲೆ ಪರಿಣಾಮ ಬೀರುವ ಬಗ್ಗೆ ಆರೋಗ್ಯ ತಜ್ಞರು ಎಚ್ಚರಿಕೆ ನೀಡಿದ್ದಾರೆ.ಇದರ ಬೆನ್ನಲ್ಲೇ ಮುಂಚೂಣಿ ಮತ್ತು ಆರೋಗ್ಯ ಕಾರ್ಯರ್ಕರಿಗೆ ಎರಡನೇ ಡೋಸ್ ಬಗ್ಗೆ ಗಮನಹರಿಸುವಂತೆ ಸೂಚನೆ ನೀಡಿದ್ದಾರೆ.ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆ ನಡೆಯಿತು. ಲಸಿಕೆ ನೀಡುವ ವೇಗ ಕಡಿಮೆ ಪ್ರಮಾಣದಲ್ಲಿ ಸಾಗಿರುವ ಪ್ರಮುಖವಾಗಿ ಪ್ರಸ್ತಾಪವಾಯಿತು. ಲಸಿಕೆಗಾಗಿ ನೋಂದಣಿ ಮಾಡಿಕೊಳ್ಳಲು ಸಿದ್ಧಪಡಿಸಿರುವ ಕೋವಿನ್ ಆಪ್‌ನಲ್ಲಿ ಕೆಲವೊಂದು ಮಾರ್ಪಾಡುಗಳನ್ನು ಮಾಡಬೇಕೆಂಬ ಸಲಹೆಗಳು ಕೆಲ ರಾಜ್ಯಗಳಿಂದ ಬಂದವು.
ಆರೋಗ್ಯ ಮತ್ತು ಮುಂಚೂಣಿ ಕಾರ್ಯಕರ್ತರಗಿ ಎರಡನೇ ಡೋಸ್ ಲಸಿಕೆ ನೀಡುವ ಪ್ರಮಾಣವನ್ನು ತ್ವರಿತವಾಗಿ ಹೆಚ್ಚಿಸಬೇಕೆಂದು ಎಲ್ಲ ರಾಜ್ಯಗಳಿಗೂ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಭೆಯಲ್ಲಿ ಸೂಚನೆ ನೀಡಲಾಯಿತು. ಈ ಕಾರ್ಯಕರ್ತರಿಗಾಗಿಯೇ ಲಸಿಕೆ ನೀಡುವ ಸಲುವಾಗಿ ವಿಶೇಷ ಸಮಯ ನಿಗದಿ ಮಾಡುವಂತೆಯೂ ನಿರ್ದೇಶನ ನೀಡಿದರು.
ರಾಷ್ಟ್ರೀಯ ಸರಾಸರಿ ಅನುಸಾರ ಶೇ.೮೨ ರಷ್ಟು ಆರೋಗ್ಯ ಕಾರ್ಯಕರ್ತರಿಗೆ ಶೇ. ೮೨ರಷ್ಟು ಮಾತ್ರ ಮೊದಲ ಡೋಸ್ ಲಸಿಕೆ ನೀಡಲಾಗಿದೆ. ಅದೇ ರೀತಿ ರಾಷ್ಟ್ರೀಯ ಸರಾಸರಿ ಅನುಸಾರ ಎರಡನೇ ಡೋಸ್ ಶೇ ೫೬ ರಷ್ಟಿದೆ. ಪಂಜಾಬ್, ಮಹಾರಾಷ್ಟ್ರ, ಹರಿಯಾಣ, ತಮಿಳುನಾಡು, ನವದೆಹಲಿ ಅಸ್ಸಾಂ ಸೇರಿದಂತೆ ೧೮ ರಾಜ್ಯಗಳು ರಾಷ್ಟ್ರೀಯ ಸರಾಸರಿಗಿಂತ ಕಡಿಮೆಯಿದೆ.
ಹೆಚ್ಚುವರಿಯಾಗಿ ಕೋವಿನ್ ಫ್ಲಾಟ್‌ಫಾರಂ ಪ್ರಸ್ತುತ ೧೨ ಭಾಷೆಗಳಲ್ಲಿ ಲಭ್ಯವಿದೆ. ಈ ವೇದಿಕೆಯಲ್ಲಿ ಆಧಾರ್ ಕಾರ್ಡ್ ಮೂಲಕ ನೋಂದಣಿ ಮಾಡಿಕೊಳ್ಳಬೇಕಾಗಿದೆ.
ಕೋವಿನ್ ಆಪ್ ಮೂಲಕ ಯಾವ ಲಸಿಕೆ ಬೇಕು,ಲಸಿಕೆಯ ನಿರ್ದಿಷ್ಟ ದಿನದ ದಾಖಲೆಯನ್ನು ದಾಖಲು ಮಾಡುವಂತಿಲ್ಲ. ಬದಲಿಗೆ ಜಿಲ್ಲಾ ರೋಗ ನಿರೋಧಕ ಅಧಿಕಾರಿಗಳಿಂದಲೂ ಬದಲಾವಣೆ ಮಾಡಿಕೊಳ್ಳಲು ಅವಕಾಶವಿದೆ.