೨ಡಿ ಮೀಸಲಾತಿ ಶೇಕಡಾ ೭ ಹೆಚ್ಚಳಕ್ಕೆ ಸಂತಸ

ಮಾನ್ವಿ,ಏ.೦೧- ಕಳೆದ ೨೩ ವರ್ಷಗಳ ನಿರಂತರ ಹೋರಾಟ ಹಾಗೂ ಹಲವಾರು ನಾಯಕರ ಶ್ರಮದಿಂದಾಗಿ ನಮ್ಮ ಲಾಳಗೊಂಡ ಸಮಾಜವನ್ನು ಜಾತಿ ಪಟ್ಟಿಗೆ ಸೇರಿಸಿದ್ದು, ಅಲ್ಲದೇ ನಮ್ಮ ಸಮುದಾಯಕ್ಕೆ ಶೇಕಡಾ ೦೭ ರಷ್ಟು ಮೀಸಲಾತಿಯನ್ನು ನೀಡಿದ್ದು, ಸಂತಸ ತಂದಿದೆ ಎಂದು ಲಾಳಗೊಂಡ ಜಿಲ್ಲಾಧ್ಯಕ್ಷ ವೀರಭದ್ರಪ್ಪ ಗೌಡ ಆಲ್ದಾಳ ಹೇಳಿದರು.
ಪಟ್ಟಣದ ಪತ್ರಿಕಾಗೋಷ್ಠಿಯಲ್ಲಿ ಮಾತಾನಾಡಿದ ಅವರು ಮಾನ್ವಿಯಲ್ಲಿ ಜಿಲ್ಲಾ ಲಾಳಗೊಂಡ ಜಿಲ್ಲಾ ಸಮಾವೇಶ ಹಾಗೂ ಕೊಪ್ಪಳದ ಸಂಸದ ಸಂಗಣ್ಣ ಕರಡಿ ಸೇರಿದಂತೆ ಅನೇಕ ಪ್ರಭಾವಿ ನಾಯಕರ ನಿರಂತರ ಶ್ರಮದಿಂದಾಗಿ ನಮ್ಮ ಬೇಡಿಕೆಯನ್ನು ಪೂರೈಕೆ ಮಾಡಿದ ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರ್ಕಾರಕ್ಕೆ ಅಭಿನಂದನೆಗಳು ಎಂದು ಪದಾಧಿಕಾರಿಗಳು ತಿಳಿಸಿದರು.
ಈ ಸಂದರ್ಭದಲ್ಲಿ ಲಾಳಗೊಂಡ ಸಮಾಜದ ಮುಖಂಡರಾದ ಮಹಾದೇವಪ್ಪ ಕಟಾಲಿ, ಶಶಿಧರಗೌಡ ಹರವಿ, ಚನ್ನಬಸವ ಬೆಟ್ಟದೂರು, ನೀಲಪ್ಪಗೌಡ, ಗುಂಡಪ್ಪಗೌಡ, ರವಿಕುಮಾರ್, ಅಮರೇಗೌಡ, ಸಿದ್ದಲಿಂಗಪ್ಪ ವಕೀಲರು ಸೇರಿದಂತೆ ಅನೇಕರು ಇದ್ದರು.