ಮುಂಬೈ,ಜೂ.೮- ದೇಶದಲ್ಲಿ ೨ ಸಾವಿರ ಮುಖಬೆಲೆಯ ನೋಟುಗಳ ಚಲಾವಣೆ ರದ್ದು ಮಾಡಿದ ಹಿನ್ನೆಲೆಯಲ್ಲಿ ಬ್ಯಾಂಕ್‌ಗಳಲ್ಲಿ ಠೇವಣಿ ಮತ್ತು ವಿನಿಮಯಕ್ಕೆ ಅವಕಾಶ ಮಾಡಿಕೊಟ್ಟ ಹಿನ್ನೆಲೆಯಲ್ಲಿ ಇದುವರೆಗೂ ೧.೮ ಲಕ್ಷ ಕೋಟಿ ಮೊತ್ತದ ೨ ಸಾವಿರ ನೋಟುಗಳು ಬ್ಯಾಂಕ್‌ಗೆ ಮರಳಿ ಬಂದಿವೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದೆ.
ದೇಶದಲ್ಲಿ ಚಲಾವಣೆಯಲ್ಲಿದ್ದ ೨ ಸಾವಿರ ನೋಟುಗಳ ಪೈಕಿ ಶೇ. ೮೫ ರಷ್ಟು ೨ ಸಾವಿರ ನೋಟುಗಳು ವಾಪಸ್ ಬಂದಿವೆ ಎಂದು ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ತಿಳಿಸಿದ್ದಾರೆ.ಭಾರತೀಯ ರಿಸರ್ವ್ ಬ್ಯಾಂಕ್‌ನ ಹಣಕಾಸು ನೀತಿಯ ಸಭೆಯ ಬಳಿಕ ವಿವರ ನೀಡಿದ ಅವರು, ಇಂದಿನವರೆಗೆ ೧.೮ ಲಕ್ಷ ಕೋಟಿ ರೂಪಾಯಿ ಮೌಲ್ಯದ ೨,೦೦೦ ರೂಪಾಯಿ ನೋಟುಗಳು ವ್ಯವಸ್ಥೆಗೆ ಮರಳಿದೆ. ಸೆಪ್ಟಂಬರ್ ೩೦ರ ವರೆಗೆ ಅವಕಾಶ ಇರುವುದರಿಂದ ಬಾಕಿ ನೋಟುಗಳು ಬಾಕಿ ಬರಲಿದೆ ಎಂದು ಹೇಳಿದೆ.
ಕಳೆದ ತಿಂಗಳು, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ವ್ಯವಸ್ಥೆಯಿಂದ ರೂ ೨೦೦೦ ಕರೆನ್ಸಿ ನೋಟುಗಳನ್ನು ಹಿಂತೆಗೆದುಕೊಳ್ಳುವುದಾಗಿ ಘೋಷಿಸಿತ್ತು. ೨೦೧೬ ರ ನವೆಂಬರ್ ನಲ್ಲಿ ಆರ್ ಬಿಐ ಕಾಯಿದೆ, ೧೯೩೪ ರ ಸೆಕ್ಷನ್ ೨೪ (೧) ಅಡಿಯಲ್ಲಿ ಎಲ್ಲಾ ರೂ ೫೦೦ ಮತ್ತು ರೂ ೧,೦೦೦ ಬ್ಯಾಂಕ್ ನೋಟುಗಳ ಚಲಾವಣೆ ರದ್ದು ಮಾಡಲಾಗಿತ್ತು.
ಆಗ ೨,೦೦೦ ಮುಖಬೆಲೆಯ ನೋಟು ಪರಿಚಯಿಸಲಾಯಿತು. ಆ ಸಮಯದಲ್ಲಿ ಪರಿಚಲನೆ. ೨,೦೦೦ ಮುಖಬೆಲೆಯನ್ನು ಪರಿಚಯಿಸುವ ಉದ್ದೇಶ ಮತ್ತು ಇತರ ಮುಖಬೆಲೆಯ ನೋಟುಗಳು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಾಗುವುದರೊಂದಿಗೆ, ೨೦೧೮-೧೯ರಲ್ಲಿ ೨,೦೦೦ ರೂಪಾಯಿಗಳ ನೋಟುಗಳ ಮುದ್ರಣವನ್ನು ನಿಲ್ಲಿಸಲಾಗಿತ್ತು ಎಂದು ಆರ್ ಬಿಐ ತಿಳಿಸಿದೆ.
ಊಹಾಪೋಹ ಬೇಡ
೨ ಸಾವಿರ ಮುಖ ಬೆಲೆಯ ನೋಟು ಹಿಂದೆ ಪಡೆದಿರುವರಿಂದ ಹೊಸದಾಗಿ ೫೦೦ ರೂ ನೋಟುಗಳನ್ನು ಹಿಂತೆಗೆದುಕೊಳ್ಳುವ ಅಥವಾ ೧,೦೦೦ ರೂ ಮುಖಬೆಲೆಯ ನೋಟುಗಳನ್ನು ಮರು ಪರಿಚಯಿಸುವ ಬಗ್ಗೆ ಯೋಚಿಸುತ್ತಿಲ್ಲ ಆರ್ ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ಧಾರೆ.