೧.೫ ಡಿಗ್ರಿ ದಾಟಿದ ಜಾಗತಿಕ ತಾಪಮಾನ

ನವದೆಹಲಿ,ಜೂ.೧೬- ಜಗತ್ತಿನಲ್ಲಿ ಇದೇ ಮೊದಲ ಬಾರಿಗೆ ಜೂನ್ ಮೊದಲಾರ್ಧದಲ್ಲಿ ಜಾಗತಿಕ ತಾಪಮಾನ ೧.೫ ಡಿಗ್ರಿ ಸೆಲ್ಸಿಯಸ್ ದಾಟಿದೆ.
ಜಾಗತಿಕ ಸರಾಸರಿ ತಾಪಮಾನ ೧.೫ ಡಿಗ್ರಿ ಸೆಲ್ಸಿಯಸ್ ಮಾರ್ಕ್ ಅನ್ನು ಉಲ್ಲಂಘಿಸಿದೆ. ಭೂಮಿಯ ಮೇಲಿನ ಹವಾಮಾನ ಅಡೆತಡೆ ತಡೆಯಲು ವಿಶ್ವಸಂಸ್ಥೆ ನಿಗದಿಪಡಿಸಿದ ಗುರಿಯಾಗಿದೆ. ಜಾಗತಿಕ ತಾಪಮಾನ ಹಿಂದೆ ಹಲವಾರು ಬಾರಿ ಕೈಗಾರಿಕಾ ಪೂರ್ವದ ದಾಖಲೆಯನ್ನು ಹಿಂದಿಕ್ಕಿದೆ. ಚಳಿಗಾಲ ಮತ್ತು ಬೇಸಿಗೆಗಾಲದಲ್ಲಿ ಮಾತ್ರ ಸಂಭವಿಸಿದೆ,
“ಜೂನ್ ಮೊದಲ ದಿನಗಳಲ್ಲಿ ಜಾಗತಿಕ ಸರಾಸರಿ ತಾಪಮಾನ ೧.೫ ಡಿಗ್ರಿ ಮಿತಿ ಮೀರಿದೆ. ಹವಾಮಾನ ಬಿಕ್ಕಟ್ಟಿನ ಹೆಚ್ಚು ತೀವ್ರವಾದ ಪರಿಣಾಮ ತಪ್ಪಿಸಲು ಹಲವು ಕ್ರಮಗಳನ್ನು ಕೈಗೊಂಡ ನಡುವೆಯೇ ದಾಖಲೆ ಹಂತಕ್ಕೆ ತಲುಪಿದೆ ಎಂದು
ಹವಾಮಾನ ಮುನ್ಸೂಚನೆಯ ಯುರೋಪಿಯನ್ ಕೇಂದ್ರ ಟ್ವೀಟ್ ಮಾಡಿದೆ.
ಈ ಮಿತಿ ಮೊದಲು ೨೦೧೫ರ ಡಿಸೆಂಬರ್ ನಲ್ಲಿ ದಾಟಿತ್ತು. ಇದೀಗ ೮ ವರ್ಷಗಳ ನಂತ ಮತ್ತೊಮ್ಮೆ ದಆಟಿದೆ. ೨೦೧೬ ರಲ್ಲಿ ಜಾರಿಗೆ ಬಂದ ಪ್ಯಾರಿಸ್ ಒಪ್ಪಂದದಲ್ಲಿ ಅನಿಲ ಹೊರಸೂಸುವಿಕೆ ಕಡಿಮೆ ಮಾಡಲು ಮತ್ತು ಈ ಶತಮಾನದಲ್ಲಿ ಜಾಗತಿಕ ತಾಪಮಾನ ಹೆಚ್ಚಳವನ್ನು ೨ ಡಿಗ್ರಿಗಳಿಗೆ ಸೀಮಿತಗೊಳಿಸಲು ದೇಶಗಳಿಗೆ ಮಾರ್ಗದರ್ಶನ ನೀಡಲು ದೀರ್ಘಾವಧಿಯ ಗುರಿಗಳನ್ನು ನಿಗದಿಪಡಿಸಿದೆ.
ಪ್ಯಾರಿಸ್ ಒಪ್ಪಂದದಲ್ಲಿ ಉಲ್ಲೇಖಿಸಲಾದ ಗುರಿಗಳು ದೀರ್ಘಾವಧಿಯ ತಾಪಮಾನ ಮಾತ್ರ ಉಲ್ಲೇಖಿಸುತ್ತವೆ, ಅಂದರೆ ಸರಾಸರಿ ೨೦ ರಿಂದ ೩೦ ವರ್ಷಗಳ ಅವಧಿಯಲ್ಲಿ ಜಾಗತಿಕ ತಾಪಮಾನ. ದೈನಂದಿನ ಅಥವಾ ವಾರ್ಷಿಕ ಜಾಗತಿಕ ತಾಪಮಾನದ ಬಗ್ಗೆ ಎಲ್ಲಿಯೂ ಉಲ್ಲೇಖಿಸಿಲ್ಲ ಎಂದು ವಿಶ್ವ ಹವಾಮಾನ ಸಂಸ್ಥೆ ವರದಿ ತಿಳಿಸಿದೆ,
೨೦೨೩ರಿಂದ ೨೦೨೭ರಲ್ಲಿ ವಾರ್ಷಿಕ ಸರಾಸರಿ ಜಾಗತಿಕ ತಾಪಮಾನ ಕನಿಷ್ಠ ಒಂದು ವರ್ಷದವರೆಗೆ ೧.೫ ಸೆಲ್ಸಿಯಸ್ ಗಿಂತ ಹೆಚ್ಚು ಹೆಚ್ಚು ಹೋಗುವ ಸಾಧ್ಯತೆ ಎತ್ತಿ ತೋರಿಸಿದೆ.
ಭವಿಷ್ಯದ ಹಸಿರುಮನೆ ಅನಿಲ ಹೊರಸೂಸುವಿಕೆ ಆಧರಿಸಿದ ಹವಾಮಾನ ಬದಲಾವಣೆಯ ಹವಾಮಾನ ಪ್ರಕ್ಷೇಪಗಳ ಮೇಲೆ ವಿಶ್ವಸಂಸ್ಥೆ ಗಮನ ಹರಿಸಿದ್ದು ಇದರ ಕಡಿವಾಣಕ್ಕೆ ಹಲವು ಕ್ರಮ ಕೈಗೊಂಡಿದೆ.