೧.೫೯ ಕೋಟಿ ರೂ. ಕಾರು ಖರೀದಿಸಿದ ಸನ್ನಿ

ಬೆರಗಿನ ಲೋಕ ಸಿನಿಮಾದಲ್ಲಿ ಸ್ಟಾರ್ ಅಥವಾ ಸೆಲೆಬ್ರಟಿ ಆದವರಲ್ಲಿ ಒಂದು ರೂಢಿ ಇರುತ್ತದೆ.. ಅದು ಅವರಿಗಿಂತಲೂ ಅವರು ಬಂದಿಳಿಯುವ ಕಾರು ಹೆಚ್ಚು ಮೌಲ್ಯ ವುಳ್ಳದಾಗಿರಬೇಕು. ಇದೇ ಕಾರಣದಿಂದಲೇ ಇರಬೇಕು ಯಾವುದೇ ಸೆಲೆಬ್ರಟಿಯನ್ನು ಒಂದು ಚಿಕ್ಕ ಕಾರ್ಯಕ್ರಮಕ್ಕೆ ಕರೆದರೂ ಒಂದು ಅಥವಾ ಅದಕ್ಕಿಂತ ದೊಡ್ಡ ಕಾರನ್ನು ಸಂಘಟಕರು ಕಳುಹಿಸಿಕೊಡಬೇಕು.. ಈಗಿನ ಕಾಲದಲ್ಲಿ ಕಾರ್ ಶೋಕಿಯೇ ದೊಡ್ಡ ವಿಷಯ.. ಕನ್ನಡದ ಸ್ಟಾರ್ ನಟರೊಬ್ಬರಿಗೆ ಎಲ್ಲಾ ಬಗೆಯ ಕಾರನ್ನು ಕೊಂಡುಕೊಳ್ಳುವುದು ಒಂದು ಖಯಾಲಿ ಅಥವಾ ಫ್ಯಾಷನ್..
ಈ ವಿಷಯದಲ್ಲಿ ನಮ್ಮ ಬಾಲಿವುಡ್ ನೀಲಿ ಕನ್ಯೆ ಸನ್ನಿ ಲಿಯೋನ್ ಹಿಂದೆ ಬಿದ್ದಿಲ್ಲ; ಆಕೆ ಇಟಾಲಿಯನ್ ಆಟೋಮೊಬೈಲ್ ನ ನೂತನ ಮಾಡೆಲ್ ಮಸೆರಾಟಿ ಗ್ಹಿಬ್ಲಿ ಎಂಬ ನವನವೀನ ಬಿಳಿ ಬಣ್ಣದ ಕಾರನ್ನು ಕೊಂಡುಕೊಂಡಿರುವುದು ಸುದ್ದಿಯಾಗಿದೆ. ಒಂದು ರೀತಿಯಲ್ಲಿ ಆಕೆಯೇ ಸುದ್ದಿ ಮಾಡಿದ್ದಾಳೆ.. ಇಡೀ ಸಾಮಾಜಿಕ ಜಾಲ ತಾಣದಲ್ಲಿ ಚರ್ಚೆಗೆ ಒಳಪಟ್ಟ ಆ ಕಾರಿನ ಬೆಲೆ ಬರ್ರೋಬ್ಬರಿ ಒಂದು ಕೋಟಿ ಐವತ್ತೊಬ್ಬಂತು ಲಕ್ಷ ರೂಪಾಯಿ..
ಹುಟ್ಟಿದ ನಿರ್ವಾಣ ಕಾಣಿಸಿ
ಕೊಳ್ಳುವ ಸನ್ನಿಗೆ ಅದ್ಯಾವ ಲೆಕ್ಕ. ಆದರೆ ಆ ಕಾರು ತನ್ನ ಇರುವಿಕೆಯಿಂದಲೇ ಸನ್ನಿ ಯ ಆಕರ್ಷಣೆಯನ್ನು ಹೆಚ್ಚಿಸಿದೆಯಂತೆ..
ಹಾಗೆ ನೋಡಿದರೆ ಇದೇ ಬಗೆಯ ಎರಡು ಕಾರುಗಳು ಸನ್ನಿಯ ವಿಶಾಲ ಗ್ಯಾರೇಜ್ ನಲ್ಲಿ ಈಗಾಗಲೇ ಸ್ಥಾನ ಪಡೆದಿವೆಯಂತೆ.. ಒಂದು ಮಸೆರಾಟಿ ಕ್ವಾಟ್ರೊ ಪೊರ್ಟೆ ಮತ್ತೊಂದು ಇದೇ ಮಸೆರಾಟಿ ಗ್ಹಿಬ್ಲಿ ನೆರಿಸ್ಸಿಮ್ಮೋ..
ಸನ್ನಿಯ ಕಾರಿನ ವರಸೆಗೆ ಅಭಿಮಾನಿ ಬಳಗ ಶಾನೆ ಖುಷಿಯಾಗಿ; ಅದರ ಸೀಟು ಹಾಗೂ ಇನ್ನಿತರ ’ನಯಾ’ವಾದ ವಿಷಯಗಳು ಹೇಗಿರಬಹುದು ಎಂದು ಕನಸುತ್ತಿದೆಯಂತೆ..