೧ ಕೋಟಿ ೩೦ ಲಕ್ಷಕ್ಕೂ ಹೆಚ್ಚು ಡೋಸ್ ಲಸಿಕೆ ವಿತರಣೆ

ವಾಷಿಂಗ್ಟನ್, ಜ. ೩- ಅಮೆರಿಕದಲ್ಲಿ ಕೊರೊನಾ ಸೋಂಕು ಮತ್ತು ಹೆಚ್ಚು ಸಾವು ಸಂಭವಿಸಿರುವ ಹಿನ್ನೆಲೆಯಲ್ಲಿ ೧ ಕೋಟಿ ೩೦ ಲಕ್ಷಕ್ಕೂ ಹೆಚ್ಚು ಡೋಸ್ ಲಸಿಕೆ ಹಾಕಲಾಗಿದೆ.

ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಮಡೇರ್ನಾ ಮತ್ತು ಫೈಜರ್ ಸಂಸ್ಥೆಯ ಲಸಿಕೆಯನ್ನು ಅಮೆರಿಕದಾದ್ಯಂತ ನೀಡಲಾಗುತ್ತದೆ. ಇದುವರೆಗೂ ೪೨,೨೫,೭೫೬ ಮಂದಿ ಮೊದಲ ಡೋಸ್ ಪಡೆದಿದ್ದಾರೆ.ಇದಿವರೆಗೂ ಒಟ್ಟಾರೆ ೧ ಕೋಟಿ,೩೦ ಲಕ್ಷ ೭೧ ಸಾವಿರದ ೯೨೫ ಡೋಸ್ ಲಸಿಕೆ ವಿತರಣೆ ಮಾಡಲಾಗಿದೆ

ಡಿಸೆಂಬರ್ ೩೦ರಂದು ಸರಿ ಸುಮಾರು ೨೮ ಲಕ್ಷ ಮೊದಲ ದೋಸ್ತ್ ಪಡೆದಿದ್ದರು ಇದೀಗ ಮತ್ತೆ ಒಂದು ಕೋಟಿ ೨೪ ಡೋಸ್ ವಿತರಣೆ ಮಾಡಲಾಗಿದೆ ಎಂದು ಅಮೆರಿಕಾದ ರೋಗ ನಿಯಂತ್ರಣ ಮತ್ತು ಮುನ್ನೆಚ್ಚರಿಕೆ ಕೇಂದ್ರ ತಿಳಿಸಿದೆ.

ಅಮೆರಿಕದಲ್ಲಿ ಜನರು ಲಸಿಕೆಯನ್ನು ಹಾಕಿಸಿಕೊಳ್ಳಲು ಮುಂದೆ ಬರುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚು ಹೆಚ್ಚು ಜನರಿಗೆ ಲಸಿಕೆ ಹಾಕಲು ಸಹಕಾರಿಯಾಗಿದೆ ಮುಂದಿನ ದಿನಗಳಲ್ಲಿ ಇನ್ನಷ್ಟು ಮಂದಿಗೆ ಟಿಕೆ ಹಾಕಲಾಗುವುದು ಎಂದು ತಿಳಿಸಲಾಗಿದೆ.

ಅಮೆರಿಕದಲ್ಲಿ ಪ್ರತಿನಿತ್ಯ ಸಾವು ಮತ್ತು ಸೋಂಕಿನ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅಮೆರಿಕದ ಎಲ್ಲ ಜನರಿಗೂ ಲಸಿಕೆಯನ್ನು ವಿತರಣೆ ಮಾಡಲು ಉದ್ದೇಶಿಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ.

ಅಮೇರಿಕಾದಲ್ಲಿ ಎಲ್ಲಾ ಜನರಿಗೆ ಲಸಿಕೆ ಹಾಕುವ ಗುರಿ ಹಾಕಿಕೊಂಡಿರುವುದಾಗಿ ಸಂಸ್ಥೆ ಮಾಹಿತಿ ನೀಡಿದೆ.