೧೮ ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಿ ಕೇಂದ್ರಕ್ಕೆ ಐಎಂಎ ಪತ್ರ


ನವದೆಹಲಿ,ಏ.೬- ಹದಿನೆಂಟು ವರ್ಷ ಮೇಲ್ಪಟ್ಟ ಎಲ್ಲ ವಯೋಮಾನದವರಿಗೂ ಕೊರೊಲಾ ಲಸಿಕೆ ನೀಡಬೇಕು ಎಂದು ಭಾರತೀಯ ವೈದ್ಯಕೀಯ ಸಂಘ (ಐಎಂಎ) ಪ್ರಧಾನಿ ನರೇಂದ್ರಮೋದಿ ಅವರಿಗೆ ಸಲಹೆ ಮಾಡಿದೆ.
ಕೊರೊನಾ ಸೋಂಕು ವ್ಯಾಪಕವಾಗಿ ಹೆಚ್ಚಳವಾಗುತ್ತಿರುವ ಹಿನ್ನಲೆಯಲ್ಲಿ ವೈರಾಣು ತಡೆಗೆ ಸಿನಿಮಾ, ಸಭೆ, ಸಮಾರಂಭಗಳನ್ನು ಬಂದ್ ಮಾಡುವಂತೆಯೂ ಸಲಹೆ ನೀಡಿದೆ.
ದೇಶಾದ್ಯಂತ ಕೊರೊನಾ ೨ನೇ ಅಲೆ ಶರವೇಗದಲ್ಲಿ ಹಬ್ಬುತ್ತಿರುವುದು ತೀವ್ರ ಭೀತಿಗೆ ಕಾರಣವಾಗಿದೆ. ಈಗಾಗಲೇ ದೇಶದಲ್ಲಿ ಸೋಂಕಿತರ ಸಂಖ್ಯೆ ಲಕ್ಷ ಗಡಿ ದಾಟಿದೆ. ಅದರಲ್ಲೂ ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ ತ್ವರಿತವಾಗಿ ಏರಿಕೆಯಾಗುತ್ತಿದೆ.
೪೫ ವರ್ಷಗಳ ವಯೋಮಾನದ ಪ್ರತಿಯೊಬ್ಬರಿಗೂ ಲಸಿಕೆ ನೀಡಲಾಗುತ್ತಿದೆ. ಆದರೆ, ಸೋಂಕು ಮಾತ್ರ ನಿಯಂತ್ರಣ ತಪ್ಪುತ್ತಿದೆ.
ಈ ಹಿನ್ನೆಯಲ್ಲಿ ೧೮ ವರ್ಷ ಮೇಲ್ಪಟ್ಟ ಎಲ್ಲ ವಯೋಮಾನದವರಿಗೂ ಲಸಿಕೆ ಸಿಗಬೇಕು ಎಂದು ಐಎಂಎ ಕೇಂದ್ರ ಸರ್ಕಾರಕ್ಕೆ ಸಲಹೆ ಮಾಡಿದೆ.
ಸೋಂಕು ವೇಗವಾಗಿ ಹಬ್ಬುತ್ತಿದ್ದು, ಅನ್ನು ನಿಯಂತ್ರಿಸಲು ಲಸಿಕೆ ಅಭಿಯಾನವನ್ನು ಮತ್ತಷ್ಟು ಚುರುಕುಗೊಳಿಸುವತ್ತ ಕೇಂದ್ರ ಸರ್ಕಾರ ಗಮನ ಹರಿಸಲಿ ಎಂದು ಐಎಂಎ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಿದೆ.
ಜನವರಿ ತಿಂಗಳಿನಲ್ಲೇ ವಿಶ್ವದಲ್ಲೇ ಅತಿದೊಡ್ಡ ಲಸಿಕೆ ಅಭಿಯಾನಕ್ಕೆ ದೇಶದಲ್ಲಿ ಚಾಲನೆ ನೀಡಲಾಗಿತ್ತು. ಮೊದಲು ಆರೋಗ್ಯ ಕಾರ್ಯಕರ್ತರಿಗೆ, ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ ನೀಡಲಾಗಿತ್ತು, ೨ನೇ ಹಂತದಲ್ಲಿ ೬೦ ವರ್ಷ ಮೇಲ್ಪಟ್ಟ ವೃದ್ಧರು ಹಾಗೂ ೪೫ ವರ್ಷ ಮೇಲ್ಪಟ್ಟ ವಿವಿಧ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಲಸಿಕೆ ನೀಡಲು ಅವಕಾಶ ಕಲ್ಪಿಸಲಾಗಿತ್ತು. ಆನಂತರ ಏ. ೧ ರಿಂದ ೪೫ ವರ್ಷ ಮೇಲ್ಪಟ್ಟ ವಯೋಮಾನದವರಿಗೂ ಲಸಿಕೆ ನೀಡುವ ಕಾರ್ಯ ಆರಂಭಿಸಲಾಗಿದೆ.
ದೇಶದಲ್ಲಿ ಇದುವರೆಗೆ ೮ ಕೋಟಿ ಮಂದಿಗೆ ಲಸಿಕೆ ನೀಡಲಾಗಿದೆ. ಈ ಪೈಕಿ ೧ ಕೋಟಿ ಜನರು ೨ ಡೋಸ್‌ಗಳನ್ನು ಪಡೆದಿದ್ದಾರೆ.
ಮಕ್ಕಳೂ ಸೇರಿದಂತೆ ಇತರರಲ್ಲೂ ಸೋಂಕು ಕಾಣಿಸಿಕೊಳ್ಳುತ್ತಿರುವುದರಿಂದ ೧೮ವರ್ಷ ಮೇಲ್ಪಟ್ಟವರಿಗೂ ಲಸಿಕೆ ನೀಡುವ ಒತ್ತಾಯ ವ್ಯಾಪಕವಾಗಿ ಕೇಳಿ ಬರುತ್ತಿದೆ.

ದೇಶದಲ್ಲಿ ೮ ಕೋಟಿಗೂ ಅಧಿಕ ಮಂದಿಗೆ ಲಸಿಕೆ

ದೇಶಾದ್ಯಂತ ಕೊರೊನಾ ಸೋಂಕು ಸಂಖ್ಯೆ ನಿತ್ಯ ಏರಿಕೆಯಾಗುತ್ತಿರುವ ನಡುವೆಯೇ ಲಸಿಕೆ ಹಾಕುವ ಪ್ರಮಾಣವನ್ನು ಕೇಂದ್ರ ಸರ್ಕಾರ ಹೆಚ್ಚು ಮಾಡಿದೆ.
ದೇಶದಲ್ಲಿ ಇದುವರೆಗೂ ಕೋವಿಡ್ ತಡೆಗೆ ೮.೩೧ ಕೋಟಿಗೂ ಅಧಿಕ ಲಸಿಕೆ ಹಾಕಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.
ನೆನ್ನೆ ತನಕ ದೇಶದಲ್ಲಿ ೮,೩೧,೧೦,೯೨೬ ಮಂದಿಗೆ ಕೊರೊನಾ ಸೋಂಕಿನ ಲಸಿಕೆ ಹಾಕಲಾಗಿದೆ ಎಂದು ಸಚಿವಾಲಯ ತಿಳಿಸಿದೆ.
ಮಹಾರಾಷ್ಟ್ರ, ಗುಜರಾತ್ ,ರಾಜಸ್ಥಾನ ,ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ,ಕರ್ನಾಟಕ , ಮಧ್ಯಪ್ರದೇಶ, ಕೇರಳ ಸೇರಿ ಎಂಟು ರಾಜ್ಯಗಳು ೮ ಗಂಟೆ ತನಕ ಶೇಕಡ ೬೦ರಷ್ಟು ಲಸಿಕೆ ಹಾಕಲಾಗಿದೆ.
ಮಹಾರಾಷ್ಟ್ರ ,ಛತ್ತೀಸ್ ಗಡ, ಕರ್ನಾಟಕ ,ಉತ್ತರ ಪ್ರದೇಶ ,ದೆಹಲಿ, ತಮಿಳು,ಪಂಜಾಬ್ ಸೇರಿದಂತೆ ವಿವಿಧ ರಾಜ್ಯಗಳನ್ನು ಸೋಂಕು ಪ್ರಮಾಣ ನಿತ್ಯ ಏರಿಕೆಯಾಗುತ್ತದೆ.
ದೇಶದ ೧೨ ರಾಜ್ಯಗಳಲ್ಲಿ ದಿನನಿತ್ಯ ಸೋಂಕು ಪ್ರಮಾಣ ಗಣನೀಯವಾಗಿ ಏರಿಕೆಯಾಗುತ್ತಿರುವುದದಿಂದ ಮತ್ತು ರಾಜ್ಯ ಸರ್ಕಾರವನ್ನು ಮತ್ತಷ್ಟು ಆತಂಕಕ್ಕೆ ಸಿಲುಕಿಸಿದೆ ಹೀಗಾಗಿ ಲಸಿಕೆ ನೀಡಿಕೆ ಪ್ರಮಾಣವನ್ನು ಮತ್ತಷ್ಟು ಹೆಚ್ಚಳ ಮಾಡುವಂತೆ, ಕೇಂದ್ರ ಸರ್ಕಾರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಕ್ಕೆ ಸೂಚನೆ ನೀಡಿದೆ.