೧೮ ವರ್ಷ ನಿರಂತರ ಪತ್ರಿಕಾ ಸೇವೆಗೊಲಿದ ರಾಜ್ಯ ಪ್ರಶಸ್ತಿ

ಮಾನ್ವಿ,ಜ.೧೯- ಕಳೆದ ೧೮ ವರ್ಷಗಳಿಂದ ನಿರಂತರವಾಗಿ ಪತ್ರಿಕಾ ಸೇವೆಯಲ್ಲಿ ಎಲ್ಲ ರೀತಿಯ ವರದಿಗಳನ್ನು ಮಾಡಿ ಅತ್ಯುತ್ತಮ ವರದಿಗಾರಾಗಿ ವೃತ್ತಿನಿರತ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿರುವ ಹಿರಿಯರಾದ ಬಸವರಾಜ ಬೋಗವತಿ ಇವರಿಗೆ ಫೆ. ೪-೫ ರಂದು ವಿಜಯಪುರದಲ್ಲಿ ನಡೆಯುವ ಕಾರ್ಯನಿರತ ಪತ್ರಕರ್ತರ ರಾಜ್ಯ ಸಮ್ಮೇಳನದಲ್ಲಿ ರಾಜ್ಯಮಟ್ಟದ ಸಣ್ಣುಮಂಡ ಶ್ರೀನಿವಾಸ ಚಂಗಪ್ಪ ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದ್ದು, ರಾಯಚೂರು ಜಿಲ್ಲಾ ಸೇರಿದಂತೆ ಮಾನ್ವಿ ತಾಲೂಕಿನ ಪತ್ರಿಕಾ ಪ್ರಿಯರಿಗೆ ತುಂಬಾ ಸಂತೋಷವನ್ನುಂಟು ಮಾಡಿದೆ.
ಹಿರಿಯ ಪತ್ರಕರ್ತ ಬಸವರಾಜ ಬೋಗವತಿ ಇವರು ಈಗಾಗಲೇ ೨೦೧೩/೧೪ ರಲ್ಲಿ ಜಿಲ್ಲಾ ಮಟ್ಟದ ಉತ್ತಮ ಪತ್ರಕರ್ತ, ೨೦೧೮ ರಲ್ಲಿ ಉತ್ತಮ ರಾಜಕೀಯ ವರದಿಗಾಗಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಸಂಪಾದಕರು ಹಾಗೂ ವರದಿಗಾರರ ಸಂಘದಿಂದ ವಿಪಿ ಸಿಂಗ್ ರಾಜ್ಯ ಪ್ರಶಸ್ತಿ ಸೇರಿದಂತೆ ಮಾನ್ವಿ ತಾಲೂಕಿನ ಅನೇಕ ವಿಶೇಷ ವರದಿಗಳನ್ನು ಬರೆದು ಜನರ ಮನೆಮಾತಾಗಿದ್ದಾರೆ. ಇನ್ನೂ ಮುಂದೆಯೂ ಕೂಡ ಅತ್ಯುತ್ತಮ ವರದಿಗಳನ್ನು ಪಡೆದು ರಾಷ್ಟ್ರೀಯ ಮಟ್ಟದ ಪ್ರಶಸ್ತಿಯನ್ನು ಪಡೆಯಲಿ ಎಂದು ಸಾರ್ವಜನಿಕರು ಹಾರೈಸಿದ್ದಾರೆ.