೧೮ ವರ್ಷದೊಳಗಿನವರಿಗೆ ಉಚಿತ ಲಸಿಕೆ ; ಗೊಂದಲ ಬೇಡ

ಹೊನ್ನಾಳಿ.ಜೂ.೯ : ಯುವಕರು ದೇಶದ ಸಂಪತ್ತು, ಜೂನ್ 21 ರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತವಾಗಿ ಲಸಿಕೆ ನೀಡಲಿದ್ದು ಯಾರೂ ಗೊಂದಲಕ್ಕೆ ಎಡೆ ಮಾಡಿಕೊಡುವುದು ಬೇಡ ಎಂದ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.ನಗರದ ಅಂಬೇಡ್ಕರ್ ಭವನದಲ್ಲಿನ ಲಸಿಕಾ ಕೇಂದ್ರಕ್ಕೆ ಭೇಟಿ ನೀಡಿ, ಯುವಕರಿಗೆ ಲಸಿಕೆ ಬಗ್ಗೆ ಜಾಗೃತಿ ಮೂಡಿಸಿ, ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕರು, 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಹಾಕುತ್ತಿದ್ದು,ಜೂನ್ 21 ರಿಂದ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಹಾಕಲಿದ್ದು ಸಹಕಾರ ನೀಡುವಂತೆ ಮನವಿ ಮಾಡಿದರು.ನಾನು ಕೊರೊನಾ ವಿಚಾರವಾಗಿ ರಾಜಕಾರಣ ಮಾಡುವುದಿಲ್ಲಾ, ಚುನಾವಣೆ ಬಂದಾಗ ರಾಜಕಾರಣ ಮಾಡೋಣ, ಈಗ ನನಗೆ ಅವಳಿ ತಾಲೂಕಿನ ಜನರ ಆರೋಗ್ಯ ಮುಖ್ಯ ಎಂದ ಶಾಸಕರು, ಈ ನಿಟ್ಟಿನಲ್ಲಿ ಹಗಲಿರುಳು ಸೇವೆ ಮಾಡುತ್ತಿದ್ದೇನೆ ಎಂದರು.ಕೋವಿಡ್ ಕೇರ್ ಸೆಂಟರ್‌ನಲ್ಲಿರುವ ಸೋಂಕಿತರಿಗೆ ಆತ್ಮಸ್ಥೆöÊರ್ಯ ತುಂಬಿ ಅವರಲ್ಲಿ ಮನೋಬಲ ಹೆಚ್ಚಿಸುವ ನಿಟ್ಟಿನಲ್ಲಿ ಅಲ್ಲೇ ವಾಸ್ತವ್ಯ ಮಾಡುತ್ತಿದ್ದು, ಸೋಂಕಿತರು ಗುಣಮುಖರಾಗಿ ಹೋಗುವವರೆಗೂ ಕೋವಿಡ್ ಕೇರ್ ಸೆಂಟರ್‌ನಲ್ಲೇ ವಾಸ್ತವ್ಯ ಮಾಡಲು ಸಂಕಲ್ಪ ಮಾಡಿದ್ದೇನೆ ಎಂದರು.ಉಪಹಾರ ವಿತರಣೆ : ಆಸ್ಪತ್ರೆಯಲ್ಲಿನ ಸೋಂಕಿತರು, ಆಸ್ಪತ್ರೆ ಸಿಬ್ಬಂದಿಗಳು, ಪೊಲೀಸರು, ಎಪಿಎಂಸಿಯಲ್ಲಿನ ಕಾರ್ಮಿಕರು, ಲಸಿಕೆ ಹಾಕಿಸಿಕೊಳ್ಳಲು ಬರುವ ಸಾರ್ವಜನಿಕರಿಗೆ ಪ್ರತಿನಿತ್ಯ ಬೆಳಗಿನ ಉಪಹಾರ ಹಾಗೂ ಮದ್ಯಾಹ್ನದ ಊಟವನ್ನು ಶಾಸಕರು ನೀಡುತ್ತಿದ್ದು ಇಂದೂ ಕೂಡ ಉಪಹಾರ ಹಾಗೂ ಊಟದ ವ್ಯವಸ್ಥೆ ಕಲ್ಪಿಸಿದ್ದರು. ಶಾಸಕರ ಸಹೋದರ ಎಂ.ಪಿ.ರಮೇಶ್ ನೇತೃತ್ವದಲ್ಲಿ ಎಲ್ಲರಿಗೂ ಉಪಹಾರ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಪುರಸಭಾದ್ಯಕ್ಷ ಕೆ.ವಿ.ಶ್ರೀಧರ್,ಮುಖಂಡರಾದ ಇಂಚರ ಮಂಜು,ಲಿಂಗಾಪುರ ದೇವರಾಜ್ ಮತ್ತೀತರರಿದ್ದರು.