೧೮ ಮಂದಿ ವಿರುದ್ದ ಎಫ್.ಐ.ಆರ್ ದಾಖಲು ಸಂಸದ ಮುನಿಸ್ವಾಮಿ ಹೈಕೋರ್ಟಿಗೆ ಮೇಲ್ಮನವಿ

ಕೋಲಾರ,ಸೆ,೧೩:ಕಳೆದ ಶನಿವಾರ ಶ್ರೀನಿವಾಸಪುರ ತಾಲ್ಲೂಕಿನ ಪಾಳ್ಯ ಗ್ರಾಮದಲ್ಲಿ ನಡೆದ ಘಟನೆ ಸಂಬಂಧ ಅರಣ್ಯ ಇಲಾಖೆ ಅಧಿಕಾರಿಗಳು ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಸಂಸದ ಎಸ್.ಮುನಿಸ್ವಾಮಿ ಹಾಗೂ ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ. ವೇಣುಗೋಪಾಲ್ ಸೇರಿದಂತೆ ೧೮ ಮಂದಿಯ ವಿರುದ್ದ ಎಫ್.ಐ.ಆರ್. ಸಂಖ್ಯೆ ೩೨೮/ ೨೦೨೩ ಕ್ರಿಮಿನಲ್ ಪ್ರಕರಣವನ್ನು ದಾಖಲು ಮಾಡಲಾಗಿತ್ತು . ಈ ಪ್ರಕರಣವನ್ನು ರದ್ದು ಪಡೆಸ ಬೇಕೆಂದು ಸಂಸದ ಎಸ್.ಮುನಿಸ್ವಾಮಿ ಅವರು ಹೈಕೋರ್ಟ್‌ಗೆ ಮನವಿ ಅರ್ಜಿಯನ್ನು ಸಲ್ಲಿಸಿದ್ದಾರೆ.
ಸಂಸದ ಎಸ್.ಮುನಿಸ್ವಾಮಿ ಅವರು ಸೋಮವಾರ ಸಲ್ಲಿಸಿರುವ ಅರ್ಜಿಯಲ್ಲಿ ರಾಜ್ಯ ಸರ್ಕಾರವನ್ನು ಪ್ರತಿವಾದಿಯನ್ನಾಗಿಸಿದ್ದರು ಹೈಕೋರ್ಟ್ ಮಂಗಳವಾರ ಅರ್ಜಿಯನ್ನು ಕೈಗೆತ್ತಿ ಕೊಂಡ ನ್ಯಾಯಾಮೂರ್ತಿ ನಾಗಪ್ರಸನ್ನ ಅವರು ವಿಚಾರಣೆಯನ್ನು ಸೆ,೧೫ಕ್ಕೆ ಮುಂದೊಡಿದ್ದಾರೆ. ಈ ಸಂದರ್ಭದಲ್ಲಿ ಅರ್ಜಿದಾರರ ವಿರುದ್ದ ಪ್ರತಿವಾದಿಗಳು ಯಾವೂದೇ ಕ್ರಮಕ್ಕೆ ಮುಂದಾಗ ಬಾರದು ಎಂದು ಸೂಚನೆಯನ್ನು ನೀಡಿದೆ.
ಕಳೆದ ೨೦ ದಿನಗಳಿಂದ ಶ್ರೀನಿವಾಸಪುರ ತಾಲ್ಲೂಕಿನ ವಿವಿಧ ಕಡೆ ಅರಣ್ಯ ಇಲಾಖೆಯು ೧೦೦೦ ಎಕರೆಗೂ ಹೆಚ್ಚು ಜಮೀನುಗಳ ಒತ್ತುವರಿಯ ಕಾರ್ಯಚರಣೆಯನ್ನು ಮಾಡಲಾಗಿತ್ತು. ಸೆ, ೯ರಂದು ಪಾಳ್ಯದ ಗೋಪಾಲರೆಡ್ಡಿ ಎಂಬುವರ ಜಮೀನಿನ ಒತ್ತುವರಿಗೆ ತೆರಳಿದ್ದ ಸಂದರ್ಭದಲ್ಲಿ ಸಂಸದ ಎಸ್.ಮುನಿಸ್ವಾಮಿ ಮತ್ತು ಅವರ ಬೆಂಬಲಿಗರು ಅರಣ್ಯ ಇಲಾಖೆಯ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ ಪಡೆಸಿದ್ದಲ್ಲದೆ ಅವಾಚ್ಯವಾಗಿ ನಿಂದಿಸಿ. ಒತ್ತುವರಿ ತೆರವಿಗೆ ಮುಂದಾಗಿ ಜೆ.ಸಿ.ಬಿ.ಗಳ ಮೇಲೆ ಕಲ್ಲುಗಳನ್ನು ತೋರಿ ಜಖಂ ಮಾಡಿ ಪ್ರಾಣ ಬೆದರಿಕೆ ಹಾಕಿ ಒತ್ತುವರಿ ತೆರವಿಗೆ ಅಡ್ಡಿ ಪಡೆಸುತ್ತಿದ್ದರು. ಗ್ರಾಮಾಸ್ಥರನ್ನು ಗಲಭೆಗೆ ಪ್ರಚೋದನೆ ಮಾಡುತ್ತಿದ್ದರು ಎಂದು ದೂರಿದ್ದು ಪ್ರಕರಣ ದಾಖಲು ಮಾಡಲಾಗಿದೆ.
ಪಾಳ್ಯ ವ್ಯಾಪ್ತಿಯ ನಂದೂರಲಹಳ್ಳಿ ಸರ್ವೆ ೧೦೧ರ ಜಮೀನು ಒತ್ತುವರಿ ತೆರವು ಮಾಡಲು ಮುಂದಾಗಿದ್ದ ಸಂದರ್ಭದಲ್ಲಿ ಸಂಸದ ಎಸ್.ಮುನಿಸ್ವಾಮಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ. ವೇಣುಗೋಪಾಲ್, ಬಂಗಾರಪೇಟೆ ಚಂದ್ರರೆಡ್ಡಿ , ಸಂದೀಪ್, ಶ್ರೀನಿವಾಸಪುರ ಶಿವಾಮೂರ್ತಿ ಪಾಳ್ಯದ ಗೋಪಾಲ್‌ರೆಡ್ಡಿ, ಶಾಮಲ, ಹರೀಶ್, ಲಕ್ಷ್ಮಣರೆಡ್ಡಿ, ರೋಣೂರು ಚಂದ್ರಶೇಖರ್, ನರಮಾಕಲ ಹಳ್ಳಿ ನಾಗರಾಜ್,ಹೆಬ್ಬಟೆ ಆನಂದ್, ದ್ಯಾವಸಂದ್ರ ಮುನಿವೆಂಕಟರೆಡ್ಡಿ, ನಾಗೇನಹಳ್ಳಿ ಮಧು, ನರಮಾಕಲಹಳ್ಳಿ ಮಧು, ಕೇತಗನಹಳ್ಳಿ ಶಿವಾ,ಅರುಣ್ ಅರಮಾಕಲಹಳ್ಳಿ ಮುನಿಸ್ವಾಮಿ ಸೇರಿಂದತೆ ಒಟ್ಟು ೧೮ ಮಂದಿಯ ವಿರುದ್ದ ಅರಣ್ಯ ಇಲಾಖೆ ಅಧಿಕಾರಿಗಳು ಪ್ರಕರಣವನ್ನು ದಾಖಲು ಮಾಡಿದ್ದರು,
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಲಕ್ಷ್ಮಣಗೌಡ ಸೇರಿದಂತೆ ಹಲವರನ್ನು ಬೆಂಗಳೂರಿನ ಪರಪ್ಪ ಆಗ್ರಹಾರದ ಜೈಲಿಗೆ ಕಳುಹಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ,