೧೮ ತಿಂಗಳ ಮಗುವಿನ ಮೇಲೆ ೪೫ ವರ್ಷದ ಕಾಮುಕ ಅತ್ಯಾಚಾರಕ್ಕೆ ಯತ್ನ

ಪೂರ್ವ ಗೋದಾವರಿ (ಆಂಧ್ರ ಪ್ರದೇಶ), ಮಾ. ೩೧: ಇಡೀ ಮನುಕುಲವೇ ತಲೆತಗ್ಗಿಸುವ ಹೀನಕೃತವೊಂದು ಆಂಧ್ರ ಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯಲ್ಲಿ ನಡೆದಿದೆ. ೧೮ ತಿಂಗಳ ಹೆಣ್ಣು ಹಸುಗೂಸಿನ ಮೇಲೆ ೪೫ ವರ್ಷದ ಕಾಮುಕ ವ್ಯಕ್ತಿಯೊಬ್ಬ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ.
ಮಗುವಿನ ಮೇಲೆ ಹೀನ ಕೃತ ಎಸಗಿದ ವ್ಯಕ್ತಿಯನ್ನು ಪರಿಮಿ ವೆಂಕಟಸುಬ್ಬರಾವ್ (೪೫) ಎಂದು ಗುರುತಿಸಲಾಗಿದೆ. ಈತ ಪೂರ್ವ ಗೋದಾವರಿ ಜಿಲ್ಲೆಯ ಪೊಲವರಾಂ ಮಂಡಲ ವ್ಯಾಪ್ತಿಯ ವೇಮವರಾಂ ಗ್ರಾಮದ ನಿವಾಸಿಯಾಗಿದ್ದಾನೆ.
ಈ ಪಾಪಿ, ಮೊನ್ನೆ ಮಾರ್ಚ್ ೨೮ರಂದು ಗ್ರಾಮದ ೧೮ ತಿಂಗಳ ಮಗುವನ್ನು ತೆಂಗಿನ ತೋಟಕ್ಕೆ ಕರೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಕೊನೆಗೆ ಆ ಹಸುಗೂಸು ಮನೆಗೆ ಬಂದು ತಮ್ಮ ಪೋಷಕರಿಗೆ ವಿಷಯ ತಿಳಿಸಿದೆ. ಬಳಿಕ ಘಟನೆಯ ಬಗ್ಗೆ ಪೋಷಕರು, ಸಮೀಪದ ಪೊಲವರಾಂ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ.
ಆರೋಪಿ ವಿರುದ್ಧ ಪೋಸ್ಕೊ ಮತ್ತಿತರ ಕೇಸುಗಳನ್ನು ದಾಖಲಿಸಿಕೊಂಡಿರುವ ಪೊಲೀಸರು ಈಗಾಗಲೇ ಆರೋಪಿಯನ್ನು ಬಂಧಿಸಿದ್ದಾರೆ. ಇಂದು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಸಂತ್ರಸ್ಥ ಮಗುವನ್ನು ಕಾಕಿನಡ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲು ಮಾಡಿ, ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಪೊಲವರಾಂ ಪೊಲೀಸ್ ಠಾಣೆ ಸಬ್ ಇನ್ಸ್ ಪೆಕ್ಟರ್ ರಾಮು ಹೇಳಿದ್ದಾರೆ.