೧೮ ಕಾರ್ಮಿಕರನ್ನು ಕೈಬಿಟ್ಟ ಕಂಪನಿ:ಡಿಸಿ ಮಧ್ಯಸ್ಥಿಕೆ ವಹಿಸದಿದ್ದರೆ ಉಪವಾಸ ಸತ್ಯಾಗ್ರಹ ಎಚ್ಚರಿಕೆ


ರಾಯಚೂರು,ಸೆ.೨- ಸಿರವಾರ ತಾಲೂಕಿನ ತಪ್ಪಲದೊಡ್ಡಿ ಗ್ರಾಮ ಸೇರಿದಂತೆ ೫೦೦ ಎಕರೆಯಲ್ಲಿ ಗಾಳಿ ಮತ್ತು ಸೌರ ವಿದ್ಯುತ್ ಅನ್ನ ಉತ್ಪಾದಿಸುವ ಸಂಸ್ಥೆಯಾದ ಸಿಮೆನ್ಸ ಗಮಿಸಾ ವಿಂಡ್ ಟರ್ಬನ್ ಕಂಪನಿಯಲ್ಲಿ
ಸ್ಥಳೀಯ ೧೮ ಕಾರ್ಮಿಕರನ್ನು ಕೆಲಸ ಕೈಬಿಟ್ಟು ತಮಿಳುನಾಡು ಮೂಲದ ಕಾರ್ಮಿಕರನ್ನು ತೆಗೆದುಕೊಂಡಿರುವುದು ಖಂಡನೀಯ ಕೂಡಲೇ ಜಿಲ್ಲಾಧಿಕಾರಿಗಳು ಮಧ್ಯಸ್ಥಿಕೆ ವಹಿಸಬೇಕು ಇಲ್ಲದಿದ್ದರೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಉಪವಾಸ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಎಸ್ .ಎಸ್ ಹಿರೇಮಠ ಎಚ್ಚರಿಸಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ,ಕಳೆದ ೭ ವರ್ಷದಿಂದ ಕಾರ್ಮಿಕರು ಅದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು.೧೮ ಜನ ಕಾರ್ಮಿಕರು ೮ ಗಂಟೆಗೂ ಹೆಚ್ಚಿನ ಕಾಲ ಕೆಲಸ ಮಾಡಿ ಪ್ಲಾಂಟ್ ಅಳವಡಿಕೆ ಮಾಡುವಲ್ಲಿ ಕೆಲಸ ಮಾಡಿದ್ದಾರೆ.ಆಗ ಕೆಲಸ ಸಿಕ್ಕ ಹಿನ್ನೆಲೆಯಲ್ಲಿ ವಿದ್ಯಭ್ಯಾಸ ಮೊಟಕುಗೊಳಿಸಿ ಕೆಲಸ ಮಾಡುತ್ತಿದ್ದರು. ಏಕಾಏಕಿ ೧೮ ಜನ ಕಾರ್ಮಿಕರನ್ನು ಕೆಲಸದಿಂದ ತೆಗೆದು ಹಾಕಿ ತಮಿಳುನಾಡಿನ ಕಾರ್ಮಿಕರನ್ನು ಕರೆಸಿ ಕೆಲಸ ಮಾಡಿಸುತ್ತಿದ್ದಾರೆ.ಇದರಿಂದ ಸ್ಥಳೀಯ ಕಾರ್ಮಿಕರಿಗೆ ಅನ್ಯಾಯವಾಗುತ್ತಿರುವ ಹಿನ್ನೆಲೆಯಲ್ಲಿ ಈಗಾಗಲೇ ಜಿಲ್ಲಾಧಿಕಾರಿಗಳು ಮತ್ತು ಸಂಬಂಧಪಟ್ಟ ಇಲಾಖೆಗಳಿಗೆ ಮನವಿ ಪತ್ರ ಸಲ್ಲಿಸಲಾಗಿದ್ದು ಕೂಡಲೇ ಕ್ರಮ ಕೈಗೊಂಡು ಯುವಕರಿಗೆ ನ್ಯಾಯ ಒದಗಿಸಬೇಕಿದೆ.ಕಂಪನಿ ವತಿಯಿಂದ ಅನಧಿಕೃತವಾಗಿ ೩ ಎಕರೆ ಜಮಿನಿನಲ್ಲಿ ಪ್ಲಾಂಟ್ ಗಳನ್ನು ಹಾಕಿದ್ದಾರೆ. ಆದರೆ ರೈತ ಇದನ್ನು ಕೇಳಿದರೆ ಪೊಲೀಸ್ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡು ರೈತನ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಜಿಲ್ಲಾಧಿಕಾರಿಗಳು ಜನಪ್ರತಿನಿಧಿಗಳು ಮಧ್ಯಪ್ರವೇಶಿಸಿ ಕೆಲಸದಿಂದ ತೆಗೆದು ಹಾಕಿದ ಕಾರ್ಮಿಕರನ್ನು ಪುನ ಕೆಲಸಕ್ಕೆ ತೆಗೆದುಕೊಳ್ಳುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು.ಅನಧಿಕೃತವಾಗಿ ಪ್ಲಾಂಟ್ ಅಳವಡಿಕೆ ಮಾಡುವವರ ವಿರುದ್ಧ ಜಿಲ್ಲಾಧಿಕಾರಿಗಳು,ಜನಪ್ರತಿನಿಧಿಗಳು ಕ್ರಮ ಕೈಗೊಳ್ಳಬೇಕು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಲಿಂಗರಾಜ್ ಕಂದಗಲ್, ಕಾರ್ಮಿಕರಾದ ಮಹೇಶ,ದೇವರಾಜ್, ಅಮರೇಶ ಉಪಸ್ಥಿತರಿದ್ದರು.