
ಮಾನ್ವಿ,ಜು.೦೪- ಮುಂಗಾರು ಸಮಯದಲ್ಲಿ ರೈತರು ಬೀಜವನ್ನು ಬಿತ್ತನೆ ಮಾಡುವ ಮೊದಲು ಮಾಗಿ ಉಳುಮೆಯನ್ನು ಮಾಡಿ ಜಮೀನನ್ನು ಸಿದ್ದಗೊಳ್ಳಿಸುತ್ತಾರೆ.
ನಂತರ ಮಳೆಯಾಗಿ ಭೂಮಿ ಹಸಿಯಾದ ನಂತರ ತೇವಂಶವನ್ನು ನೋಡಿಕೊಂಡು ಬಿತ್ತಾನೆ ಮಾಡುತ್ತಾರೆ ಒಂದು ಜೋಡಿ ಎತ್ತುಗಳು ಒಂದು ದಿನದಲ್ಲಿ ಎರಡರಿಂದ ಮೂರು ಎಕರೆಯಷ್ಟು ಉಳುಮೆ ಮಾಡುವುದು ಸಾಮಾನ್ಯ ಆದ್ದರೆ ತಾಲೂಕಿನ ಮೂಷ್ಟುರು ಗ್ರಾಮದಲ್ಲಿ ರೈತ ಯಂಕಪ್ಪರವರ ಒಂದು ಜೊತೆ ಸೀಮೆ ತಳಿಯ ಎತ್ತುಗಳೊಂದಿಗೆ ರೈತರಾದ ಬಸವರಾಜ ಮತ್ತು ಪೂಜಾರಿ ಶರಣಪ್ಪ ನಿರಂತರವಾಗಿ ೧೧ ಗಂಟೆಯಲ್ಲಿ ೧೮ ಎಕರೆಯನ್ನು ಉಳುಮೆ ಮಾಡಿ ನೂತನ ದಾಖಲೆ ಮಾಡಿದ್ದು ಗ್ರಾಮದ ರೈತರು ಹಾಗೂ ಮುಖಂಡರು ರೈತರಾದ ಬಸವರಾಜ, ಪೂಜಾರಿ ಶರಣಪ್ಪ ಹಾಗೂ ಸೀಮೆ ಜೊಡಿ ಎತ್ತುಗಳಿಗೆ ಗುಲಾಲು ಎರಚಿ ಅಭಿನಂದಿಸಿದರು.