೧೮೯ ಕೋಟಿ ಕಾಮಗಾರಿ ನೀರಲ್ಲಿ ಹೋಮ ಗುತ್ತೆದಾರರ ಕರಾಮತ್ತು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಕಳಪೆ.!! ಅಧಿಕಾರಿಗಳ ದಿವ್ಯಾ ನಿರ್ಲಕ್ಷ್ಯ

ಲಿಂಗಸುಗೂರು.ಜೂ.೧೫-
ದುರುಗಪ್ಪ ಹೊಸಮನಿ
ರಸ್ತೆಗಳ ಅಭಿವೃದ್ಧಿ ಪಟ್ಟಣಗಳ ಅಭಿವೃದ್ಧಿ ಸಂಕೇತ. ಅಲ್ಲದೇ ಸುಗಮ ಸಂಚಾರಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಸರ್ಕಾರ ಸಾವಿರಾರು ಕೋಟಿ ರೂ.ಗಳ ಅನುದಾನವನ್ನು ಬಿಡುಗಡೆಮಾಡಿದ್ದು ಗುತ್ತಿಗೆದಾರರ ಹಾಗೂ ಅಧಿಕಾರಿಗಳ ಅನಧಿಕೃತ ಒಳ ಒಪ್ಪಂದ ರಾಷ್ಟ್ರೀಯ ೧೫೦ ಹೆದ್ದಾರಿ ಕಾಮಗಾರಿ ಕಳಪೆಯಾಗಿದೆ.
ರಸ್ತೆ ಅಭಿವೃದ್ಧಿ ಪ್ರಾಧಿಕಾರ ಅಧಿಕಾರಿಗಳು ನಿರ್ಲಕ್ಷ್ಯದಿಂದ ಮತ್ತು ಕಾಮಗಾರಿ ಪರಿಶೀಲನೆ ಮಾಡದೆ ಇದ್ದುದು ನೋಡಿದರೆ ಬಹುಶಃ ಈ ಹೆದ್ದಾರಿ ರಸ್ತೆ ಅಗಲೀಕರಣ ಸಂಪೂರ್ಣವಾಗಿ ಕಳಪೆ ಗುಣಮಟ್ಟ ಕಾಮಗಾರಿ ಮಾಡುತ್ತಿದ್ದಾರೆ ಎಂಬುದನ್ನು ಈಗಾಗಲೇ ಸಾರ್ವಜನಿಕರು ಅದಿಕಾರಿಗಳ ಮೇಲೆ ಹಾಗೂ ಗುತ್ತೆದಾರರ ವಿರುದ್ಧ ಆರೋಪಗಳ ಸುರಿಮಳೆ ಗೈದು ಸಾರ್ವಜನಿಕರ ತೆರಿಗೆ ಹಣ ಲೂಟಿ ಮಾಡುವ ಮುಖಾಂತರ ರೈತರಿಗೆ ಪರಿಹಾರ ನೀಡದೆ ಅನ್ಯಾಯ ಮಾಡಿದ್ದಾರೆ ಎಂಬುದು ಆಕ್ರೋಶ ವ್ಯಕ್ತವಾಗಿದೆ.
ಸುಮಾರು ೨೦೦ ಕೋಟಿ ವೆಚ್ಚದಲ್ಲಿ ಜಿಎಸ್‌ಟಿ ಕಟ್ಟಾಗಿ ೧೮೯ ಕೋಟಿ ರೂಪಾಯಿಯ ಹೆದ್ದಾರಿ ರಸ್ತೆ ೧೫೦ಎ ಮಾರ್ಗ ಲಿಂಗಸುಗೂರಿನಿಂದ ಮುದಬಾಳ ಕ್ರಾಸ್‌ವರೆಗೆ ೧೨ ಮೀಟರ್ ಅಗಲವಾದ ರಸ್ತೆಯನ್ನು ಅಭಿವೃದ್ಧಿ ಪಡಿಸಲು ಎಸ್‌ಹೆಚ್ ಅಮ್ಮಾಪೂರು ಗುತ್ತಿಗೆ ಪಡೆದಿದ್ದು, ಕಳೆದ ೪-೫ ತಿಂಗಲಿನಿಂದ ರಸ್ತೆ ಕಾಮಗಾರಿ ಮಂದಗತಿಯಲ್ಲಿ ನಡೆದಿದೆ.
ರಸ್ತೆ ಸಂಪೂರ್ಣ ಕಳಪೆ ಗುಣಮಟ್ಟದಿಂದ ಕೂಡಿದ್ದು, ಅಧಿಕಾರಿಗಳು ಮಾತ್ರ ಹೆದ್ದಾರಿ ರಸ್ತೆ ಕಾಮಗಾರಿ ಟೆಂಡರ್ ಪ್ರಕಾರ ಗುಣಮಟ್ಟದಿಂದ ಪರಿಶೀಲಿಸಬೇಕು ಆದರೆ ಅಧಿಕಾರಿಗಳು
ಕಛೇರಿಯಲ್ಲಿ ಕುಳಿತು ಕಾಮಗಾರಿ ಪರಿಶೀಲಿಸುತ್ತಿದ್ದಾರೆಂಬ ಆರೋಪಗಳು ಕೇಳಿ ಬರುತ್ತಿವೆ.
!!ಅಂದಾಜು ಪತ್ರಿಕೆಯ ಪ್ರಕಾರ ಕಾಮಗಾರಿ ನಡೆಯುತ್ತಿಲ್ಲ ನಾಗರಿಕರ ಆರೋಪ.!!
ಈ ಹೆದ್ದಾರಿಯಲ್ಲಿ ಚಿಕ್ಕ ಸೇತುವೆ ತಡೆಗೋಡೆ: ನಿರ್ಮಾಣ ಮಾಡಿ ರಸ್ತೆ ಅಪಘಾತಗಳು ಸಂಭವಿಸುತ್ತಿವೆ ಕೂಡಲೇ ರಸ್ತೆ ಅಭಿವೃದ್ಧಿ ಪ್ರಾಧಿಕಾರ ಅಧಿಕಾರಿಗಳು ಎಚ್ಚೆತ್ತುಕೊಂಡು ಅಂದಾಜು ಪತ್ರಿಕೆಯ ಪ್ರಕಾರ ಕಾಮಗಾರಿ ಮಾಡಲು ಮುಂದಾಗಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.
ಅಂದಾಜು ಪತ್ರಿಕೆಯಂತೆ ಸೇತುವೆಗಳ ತಡೆಗೋಡೆಯನ್ನು ಸಂರ್ಪೂಣ ಸೇತುವೆ ಕೊನೆಯವರೆಗೆ ತಡೆಗೋಡೆಯನ್ನು ನಿರ್ಮಿಸಬೇಕು. ಆದರೆ ಗುತ್ತಿಗೆದಾರರು ಸೇತುವೆ ನಡುವೆ ಕೇವಲ ೩-೪ ಅಡಿ ಅಗಲವಷ್ಟೇ ತಡೆಗೋಡೆಯನ್ನು ನಿರ್ಮಿಸಲಾಗುತ್ತಿದೆ. ಇದರಿಂದಾಗಿ ವಾಹನ ಸವಾರರಿಗೆ ಬಹಳಷ್ಟು ತೊಂದರೆಯಾಗುತ್ತದೆ.
ಸೇತುವೆ ಚಿಕ್ಕದಿದೆ ಎಂದು ಸೇತುವೆ ಪಕ್ಕಕ್ಕೆ ವಾಹನ ಚಲಿಸಿದರೆ ಹಳ್ಳದಲ್ಲಿ ಬೀಳುವುದು ಗ್ಯಾರಂಟಿ ಮಣ್ಣು ಮಶ್ರಿತ ಮರಂ ಬಳಕೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಉತ್ತಮ್ಮ ಗುಣಮಟ್ಟದ ಮರಂ ಬಳಕೆ ಮಾಡಬೇಕು ಆದರೆ ಗುತ್ತೆದಾರರ ಕರಾಮತ್ತು ರಾಷ್ಟ್ರೀಯ ಹೆದ್ದಾರಿ ಕಳಪೆ ಕಾಮಗಾರಿ ಮಾಡುತ್ತಿದ್ದಾರೆ ಇಷ್ಟೇಲ್ಲಾ ಕಳಪೆ ನಡೆಯುತ್ತಿದ್ದರೂ ಪ್ರಾಧಿಕಾರ ಅಧಿಕಾರಿಗಳು ಕಣ್ಣು ಮುಚ್ಚಿಕೊಂಡು ಕುಳಿತು ಕಳಪೆ ಕೆಲಸಕ್ಕೆ ಕೈ ಜೋಡಿಸಿದ್ದಾರೆ ಎಂಬುದು ಅನುಮಾನ ಮೂಡುತ್ತದೆ.
ಅಂದಾಜು ಪತ್ರಿಕೆಯಲ್ಲಿದೆ. ಆದರೆ ಅತ್ಯಂತ ಕಳಪೆಮಟ್ಟದ ಮಣ್ಣ ಮಿಶ್ರಿತ ಮರಂನ್ನು ಹೆದ್ದಾರಿ ಕಾಮಗಾರಿಗೆ ಬಳಸಲಾಗುತ್ತಿದೆ. ಇದರಿಂದ ಹೆದ್ದಾರಿ ಹೆಚ್ಚುದಿನ ಬಾಳಕೆ ಬರುವುದಿಲ್ಲ ಎಂಬುವುದನ್ನು ತಿಳಿದು ಸಹ ಗುತ್ತಿಗೆದಾರರು ಕಳಪೆ ಮರಂ ಬಳಕೆ
ಮಾಡುತ್ತಿದ್ದಾರೆ.
ಹೆದ್ದಾರಿ ನಿರ್ಮಾಣ ಮಾಡಬೇಕಾದರೆ ಹಳೆಯ ರಸ್ತೆಯನ್ನು ಸಂಪೂರ್ಣವಾಗಿ ಅಗೆದು ಗುಣಮಟ್ಟದ ಮರಂ ಹಾಕಿ ಗಟ್ಟಿಗೊಳಿಸಿದ ನಂತರ ೪೦ ಎಂ.ಎಂ.. ಕಂಕರ್ ಸೋಲಿಂಗ್ ಹಾಕಬೇಕು. ಇದಾದಮೇಲೆ ಪುನಃ ಸಣ್ಣ ಕಂಕರ್ ಸೋಲಿಂಗ್ ಹಾಕಿ ನಂತರ ಟಾರ್ ಹಾಕಬೇಕು ಆದರೆ, ಗುತ್ತಿಗೆದಾರರು ಯಾವ ನಿಯಮಗಳನ್ನು ಪಾಲನೆ ಮಾಡದೇ ಹಳೆಯ ರಸ್ತೆಯ ಮೇಲೆ ಸ್ವಲ್ಪ ಅಗೆದಂತೆ ಮಾಡಿ ಮರಂ ಹಾಕದೇ ಕಂಕರ್ ಸೋಲಿಂಗ್ ಹಾಕಿ ಡಾಂಬರ್ ಹಾಕಿ ಮುಚುತ್ತಿದ್ದಾರೆ.
ಹಳೆಯ ಡಾಂಬರಸ್ತಿಯನ್ನು ತೆಗೆದು ಒಂದು ಕಡೆ ಸಂಗ್ರಹಿಸಿ ನಂತರ ಅದನ್ನು ಯಂತ್ರಗಳ ಸಹಾಯದಿಂದ ಕಂಕರಅನ್ನು ಬೇರ್ಪಡಿಸಿ ಅದನ್ನು ಉಪಯೋಗಿಸುತ್ತಿದ್ದಾರೆ. ಕಾಮಗಾರಿ ನೆಡೆಯುತ್ತಿರುವ ಸ್ಥಳದಲ್ಲಿ ನಾಮ ಫಲಕಗಳನ್ನು ಅಳವಡಿಸುವುದು. ಇದ್ದರಿಂದ ವಾಹನ ಸವಾರರು ಎಚ್ಚರಿಕೆಯಿಂದ ವಾಹನ ಚಲಾಯಿಸುತ್ತಾರೆ. ಆದರೆ ಯಾವುದೇ ನಾಮಪಾಲಕಗಳನ್ನು ಅಳವಡಿಸದೆ ಕಾಮಗಾರಿ ಮಾಡುತ್ತಿರುವುದು ಇದ್ದರಿಂದ ಕಾಮಗಾರಿ ಗುಣಮಟ್ಟ ಯಾವ ರೀತಿಯಲ್ಲಿ ಇದೆ ಎಂದು ಸಾರ್ವಜನಿಕರ ಆರೋಪವಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಕಾಮಗಾರಿಯನ್ನು ಪರಿಶೀಲಿಸಿ ತನಿಖೆ ಕೈಗೊಂಡು ಅಧಿಕಾರಿ ಹಾಗೂ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕೆಂಬುವುದು ಸಾರ್ವಜನಿಕರ ಆಶಯವಾಗಿದೆ.