೧೭ ಎಕರೆ ಪ್ರದೇಶಲ್ಲಿ ಸ್ವಾಮಿ ವಿವೇಕಾನಂದರ ೧೦೮ ಅಡಿ ಶಿಲಾ ವಿಗ್ರಹ ಸ್ಥಾಪನೆ- ಪಿ.ವೇಣುಗೋಪಾಲ

ರಾಯಚೂರು,ಡಿ.೨೨- ತಮ್ಮ ಭಾಷಣದ ವಿಶ್ವದ ಗಮನಸೆಳದ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ ಹಿಂದಿನ ಶಕ್ತಿ ಆದ್ಯ ಶಕ್ತಿ ಶ್ರೀಮಾತೆ ಶಾರಾದ ದೇವಿಯವರು ಎಂದು ರಾಮಕೃಷ್ಣ ವಿವೇಕಾನಂದ ಆಶ್ರಮ ಸಂಚಾಲಕ ಪಿ.ವೇಣು ಗೋಪಾಲ ಹೇಳಿದರು.
ಅವರು ನಗರದ ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ವೀರ ಸಂನ್ಯಾಸಿ ಸ್ವಾಮಿ ವಿವೇಕಾನಂದರ ಗುರುಗಳಾದ ಶ್ರೀ ರಾಮಕೃಷ್ಣರ ಧರ್ಮ ಪತ್ನಿ ಶ್ರೀ ಮಾತೆ ಶಾರದಾ ದೇವಿಯವರ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ಸ್ವಾಮಿ ವಿವೇಕಾನಂದರು ಸರ್ವಧರ್ಮ ಸಮ್ಮೇಳನದಲ್ಲಿ ಮಾಡಿದ ಕೇವಲ ಎರಡು ನಿಮಿಷದ ಭಾಷಣ ಇಡೀ ವಿಶ್ವದ ಚಿತ್ರಣವೇ ಬದಲಿಸಿದೆ ಎಂದರೆ ಅದು ಅವರ ಹಿಂದಿರುವ ದೇವಿ ಶಕ್ತಿ ರೂಪವಾದ ಆದ್ಯ ಶಕ್ತಿ ಶ್ರೀಮಾತೆ ಶಾರಾದ ದೇವಿರಾಗಿದ್ದಾರೆ. ಅನೇಕ ಜನರಿಗೆ ಸ್ವಾಮಿ ವಿವೇಕಾನಂದರು ಮತ್ತು ರಾಮಕೃಷ್ಣ ಪರಮಹಂಸರ ಪರಿಚಯವಿದೆ ಆದರೆ ಶ್ರೀಮಾತೆ ಶಾರದಾ ದೇವಿಯವರ ಕುರಿತು ತಿಳಿದಿಲ್ಲ. ಶ್ರೀಮಾತೆ ಶಾರದಾ ದೇವಿಯವರು ಗುಪ್ತವಾಗಿ ಅವತಾರವಾದ ಆದ್ಯ ಶಕ್ತಿಯಾಗಿದ್ದಾರೆ. ತನ್ಮೂಲಕವೇ ಸ್ವಾಮಿ ವಿವೇಕಾನಂದರು ಅಂದು ಭಾಷಣ ಮಾಡದರು ಎಂದರು.
ರಾಮಕೃಷ್ಣ ಆಶ್ರಮಕ್ಕಾಗಿ ೧೭ ಎಕರೆ ಪ್ರದೇಶ ಜಮೀನು ಖರೀದಿಸಲಾಗಿದ್ದು, ಇದರಲ್ಲಿ ಸ್ವಾಮಿ ವಿವೇಕಾನಂದರ ೧೦೮ ಅಡಿಯ ಶಿಲಾ ವಿಗ್ರಹ ಪ್ರತಿಷ್ಠಾಪಿಸಲಾಗುವುದು. ನಂತರ ಒಂದು ವಿದ್ಯಾಲಯ, ವಸತಿ ಮತ್ತು ಅಧ್ಯಾತ್ಮಿಕ ಕೇಂದ್ರ ಸ್ಥಾಪಿಸುವ ಮಹಾ ಸಂಕಲ್ಪ ಹೊಂದಲಾಗಿದೆ ಎಂದರು.
ಈ ಸಂದರ್ಭದಲ್ಲಿ ಕೊಂಡಾ ಕೃಷ್ಣಮೂರ್ತಿ, ಗ್ರೀನ್ ರಾಯಚೂರ್ ನ ರಾಜೇಂದ್ರ ಕುಮಾರ್, ಶಿವಾಳೆ, ಬಿಜೆಪಿ ಬಹುಬಾಷ ಸಂಚಾಲಕ ಕಿರಣ್ ಕುಮಾರ್, ನಿವೃತ್ತ ನೌಕರ ರಾಮುಲು, ವೈ.ವಿ.ಸತ್ಯನಾರಾಯಣ, ಡಿ.ರಾಮ್ ಮಹದೇವ್, ಬಿ.ಆರ್.ಬಿ ಕಾಲೇಜು ಪ್ರಾಂಶುಲಾಪ ದೇವರೆಡ್ಡಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.