೧೭ನೇ ಲೋಕಸಭೆ ವಿಸರ್ಜನೆ

ನವದೆಹಲಿ,ಜೂ.೫:ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟಗೊಂಡ ಹಿನ್ನೆಲೆಯಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರುವ ಹಿನ್ನೆಲೆಯಲ್ಲಿ ೧೭ನೇ ಲೋಕಸಭೆಯನ್ನು ವಿಸರ್ಜಿಸುವಂತೆ ಕೇಂದ್ರ ಸಚಿವಸಂಪುಟ ರಾಷ್ಟ್ರಪತಿಗಳಿಗೆ ಶಿಫಾರಸ್ಸು ಮಾಡಿದೆ.
ದೆಹಲಿಯಲ್ಲಿಂದು ಪ್ರಧಾನಿ ನೇತೃತ್ವದಲ್ಲಿ ನಡೆದ ಕೊನೆಯ ಸಚಿವಸಂಪುಟ ಸಭೆಯಲ್ಲಿ ೧೭ನೇ ಲೋಕಸಭೆಯನ್ನು ವಿಸರ್ಜಿಸುವ ನಿರ್ಣಯ ಕೈಗೊಳ್ಳಲಾಯಿತು. ನಂತರ ಪ್ರಧಾನಿಯವರು ರಾಷ್ಟ್ರಪತಿ ಭವನಕ್ಕೆ ತೆರಳಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿ ೧೭ನೇ ಲೋಕಸಭೆ ವಿಸರ್ಜನೆಗೆ ಮನವಿ ಮಾಡಿದರು.
ಪ್ರಧಾನಿ ಅವರು ಪ್ರಮಾಣವಚನ ಸ್ವೀಕಾರಕ್ಕೆ ವೇದಿಕೆ ಸಜ್ಜುಗೊಂಡಿರುವ ಹಿನ್ನೆಲೆಯಲ್ಲಿ ಲೋಕಸಭೆಯನ್ನು ವಿಸರ್ಜಿಸುವ ತೀರ್ಮಾಣ ಮಾಡಲಾಗಿದೆ. ಹಾಲಿ ಲೋಕಸಭೆಯ ಅವಧಿ ಜೂ. ೧೬ಕ್ಕೆ ಮುಕ್ತಾಯಗೊಳ್ಳಲಿದ್ದು,ಅಷ್ಟರೊಳಗೆನೂತನ ಸರ್ಕಾರ ರಚನೆಯಾಗಬೇಕಿದೆ.
ಸಚಿವ ಸಂಪುಟ ಸಭೆಯ ಬಳಿಕ ಪ್ರಧಾನಿನರೇಂದ್ರ ಮೋದಿ ಅವರು ರಾಷ್ಟ್ರಪತಿ ಭವನಕ್ಕೆ ತೆರಳಿ ದ್ರೌಪದಿಮುರ್ಮು ಅವರಿಗೆ ೧೭ನೇ ಲೋಕಸಭೆ ವಿಸರ್ಜಿಸಿರುವ ಮನವಿಯನ್ನು ಸಲ್ಲಿಸಿದರು. ನೂತನ ಸರ್ಕಾರ ಅಸ್ತಿತ್ವಕ್ಕೆ ಬರುವ ತನಕ ಉಸ್ತುವಾರಿ ಪ್ರಧಾನಿಯಾಗಿ ಕಾರ್ಯನಿರ್ವಹಿಸುವಂತೆ ರಾಷ್ಟ್ರಪತಿಗಳು ಮೋದಿ ಅವರಿಗೆ ಸೂಚಿಸಿದ್ದಾರೆ.ನಿನ್ನೆಯಷ್ಟೇ ಲೋಕಸಭಾ ಚುನಾವಣಾ ಫಲಿತಾಂಶ ಹೊರ ಬಿದ್ದಿದ್ದು, ಬಿಜೆಪಿ ೨೪೦ ಸೇರಿದಂತೆ ಎನ್‌ಡಿಎ ಮೈತ್ರಿಕೂಟ ೨೯೩ ಸ್ಥಾನಗಳನ್ನು ಗಳಿಸಿದರೆ,ಕಾಂಗ್ರೆಸ್ ೯೯ ಸೇರಿದಂತೆ ಇಂಡಿಯಾ ಮೈತ್ರಿಕೂಟ ೨೩೪ ಕ್ಷೇತ್ರಗಳಲ್ಲಿ ಜಯ ಸಾಧಿಸಿದೆ.
೧೬ ಸ್ಥಾನಗಳಿಸಿರುವ ತೆಲುಗುದೇಶಂ ಪಕ್ಷ ಮತ್ತು ೧೨ ಕ್ಷೇತ್ರಗಳಲ್ಲಿ ಗೆದ್ದುಕೊಂಢಿರುವ ಜೆಡಿಯು ಎನ್‌ಡಿಎ ಸರ್ಕಾರ ರಚನೆಗೆ ನಿರ್ಣಾಯಕ ಪಾತ್ರ ವಹಿಸಲಿದೆ.