೧೫ ಲಕ್ಷ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ

ವಿಜಯಪುರ.ಮಾ೧೮:ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿನ ೧೫ ಲಕ್ಷ ರೂಗಳ ಅಭಿವೃದ್ಧಿ ಕಾಮಗಾರಿಗಳಿಗೆ ಪುರಸಭಾ ಅಧ್ಯಕ್ಷೆ ವಿಮಲಾಬಸವರಾಜು ಚಾಲನೆ ನೀಡಿದರು.
ಎಸ್.ಸಿ.ಪಿ ಟಿ.ಎಸ್.ಪಿ ಯೋಜನೆ, ೧೫ ನೇ ಹಣಕಾಸು ಯೋಜನೆ, ಹಾಗೂ ವಿವಿಧ ಯೋಜನೆಗಳಲ್ಲಿ ವಿಜಯಪುರ ಪಟ್ಟಣಕ್ಕೆ ೧೨ ಸೋಲಾರ್ ಸಿ.ಸಿ.ಕ್ಯಾಮರಾ, ೪೧ ಡಸ್ಟ್ ಬಿನ್ ಹಾಗೂ ಕಸ ವಿಂಗಡಣೆ ಘಟಕ , ಸಿ.ಸಿ.ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು.
ಪುರಸಭೆ ವ್ಯಾಪ್ತಿಯ ವಾಲ್ಮೀಕಿ ಪಾರ್ಕ್ ಅಭಿವೃದ್ಧಿ , ಸಿ.ಸಿ ರಸ್ತೆ ಕಾಮಗಾರಿ, ಮತ್ತು ಅನೇಕ ಅಭಿವೃದ್ಧಿ ಕಾಮಗಾರಿಗಳನ್ನು ಚಾಲನೆ ನೀಡಿದ್ದು, ಇದರ ಉಪಯೋಗವನ್ನು ಸಾರ್ವಜನಿಕರು ಪಡೆಯಬೇಕು ಪಟ್ಟಣದ ಅಭಿವೃದ್ಧಿಗೆ ಎಲ್ಲಾ ಸಾರ್ವಜನಿಕರು ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ವಿಜಯಪುರ ಪುರಸಭಾ ಮುಖ್ಯಾಧಿಕಾರಿ ಸಂತೋಷ್ ಕುಮಾರ್ ಮಾತನಾಡಿ, ೨೦ ನೇ ವಾರ್ಡ್ ನಲ್ಲಿ ಕಾಂಕ್ರೀಟ್ ರಸ್ತೆ, ಪಟ್ಟಣ ಸ್ವಚ್ಚವಾಗಿಡುವ ನಿಟ್ಟಿನಲ್ಲಿ ೪೧ ಕಡೆ ಕಸದ ಡಸ್ಟ್ ಬಿನ್ಸ್ ಅಳವಡಿಸುವುದು , ೨ ನೇ ವಾರ್ಡ್ ನಲ್ಲಿ ಕಸ ವಿಂಗಡಣೆ ಘಟಕವನ್ನು ಉದ್ಘಾಟನೆ ಕಾರ್ಯಕ್ರಮ ಮಾಡಲಿದ್ದೇವೆ ಎಂದು ಮಾಹಿತಿ ನೀಡಿದರು.