೧೫ ದಿನ ಉಚಿತ ಯೋಗ ಶಿಬಿರ ಯಶಸ್ಸು

ಮಾನ್ವಿ,ಏ.೦೬ –
ಯೋಗ ಸನ್ನಿಧಿ ಜ್ಞಾನ ವಿದ್ಯಾಪೀಠ ಟ್ರಸ್ಟ್ ಯೋಗ ಗುರು ಅನ್ನದಾನಯ್ಯ ಇವರ ಸಹಕಾರದೊಂದಿಗೆ ಮಾರ್ಚ್ ೨೧ ರಿಂದ ಎಪ್ರಿಲ್ ೦೬ ರವರೆಗೆ ಒಟ್ಟು ೧೫ ದಿನಗಳವರೆಗೆ ನಿತ್ಯ ಯೋಗಾಭ್ಯಾಸ ಕಾರ್ಯಕ್ರಮವನ್ನು ಬಹಳ ಯಶಸ್ಸಿಯಾಗಿ ಮಾಡಲಾಯಿತು..
ನಂತರ ಯೋಗ ಗುರು ಅನ್ನದಾನಯ್ಯ ಮಾತಾನಾಡಿ ನಿತ್ಯವೂ ಯೋಗ ಮಾಡುವುದರಿಂದ ಜೀವನದ ಒತ್ತಡ ಕಡಿಮೆ ಮಾಡಿಕೊಳ್ಳಲು ಸಹಕಾರಿಯಾಗುತ್ತದೆ ಎಂದರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕನಿಷ್ಠ ೨೫ ಜನರಿಗೆ ಪ್ರಮಾಣಪತ್ರವನ್ನು ವಿತರಣೆ ಮಾಡಲಾಯಿತು..