ನವದೆಹಲಿ,ಏ.೧- ದೇಶದಲ್ಲಿ ೨೦೨೨-೨೩ರಲ್ಲಿ ೧೫,೯೨೦ ಕೋಟಿ ಮೌಲ್ಯದ ರಕ್ಷಣಾ ಸಾಮಗ್ರಿಗಳನ್ನು ರಫ್ತು ಮಾಡಲಾಗಿದೆ ಎಂದು ರಕ್ಷಣಾ ಸಚಿವಾಲಯ ರಾಜನಾಥ್ ಸಿಂಗ್ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಸ್ಫೂರ್ತಿದಾಯಕ ನಾಯಕತ್ವದಲ್ಲಿ ನಮ್ಮ ರಕ್ಷಣಾ ರಫ್ತು ಬೆಳೆಯುತ್ತಲೇ ಇದೆ. ದೇಶದಲ್ಲಿ ಇದು ಸಾರ್ವಕಾಲಿಕ ದಾಖಲೆಯಾಗಿದೆ ಎಂದು ಅವರು ತಿಳಿಸಿದ್ದಾರೆ
ಈ ಕುರಿತು ಟ್ವೀಟ್ ಮಾಡಿರುವ ಅವರು ೨೦೨೧-೨೨ ರಲ್ಲಿ ೧ ೨,೮೧೪ ಕೋಟಿ ಮೌಲ್ಯದ ರಕ್ಷಣಾ ಪರಿಕರಗಳು ರಫ್ತಾಗಿದ್ದರೆ, ೨೦೨೦-೨೧ರಲ್ಲಿ ಇದರ ಪ್ರಮಾಣ ೮,೪೩೪ ಕೋಟಿ ರೂಪಾಯಿ, ೨೦೧೯-೨೦ ರಲ್ಲಿ ೯,೧೧೫ ಕೋಟಿ ಮೌಲ್ಯದಷ್ಟು ಮತ್ತು ೨೦೧೮-೧೯ರಲ್ಲಿ ೧೦,೭೪೫ ಕೋಟಿ ಮೌಲ್ಯದಷ್ಟು ರಕ್ಷಣಾ ಪರಿಕರಗಳನ್ನು ಭಾರತ ಮಾರಾಟ ಮಾಡಿತ್ತು ಎಂದು ಮಾಹಿತಿ ನೀಡಿದ್ದಾರೆ.
೨೦೨೪-೨೫ರ ವೇಳೆಗೆ ೧,೭೫,೦೦೦ ಕೋಟಿಯ ರಕ್ಷಣಾ ಸಾಗ್ರಿಗಳ ಉತ್ಪಾದನೆ ಹಾಗೂ ೩೫,೦೦೦ ಕೋಟಿ ರೂಪಾಯಿ ಮೊತ್ತದ ರಫ್ತು ಮಾಡುವ ಗುರಿ ಹಾಕಿಕೊಳ್ಳಲಾಗಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ದೇಶದಲ್ಲಿ ವರ್ಷದಿಂದ ವರ್ಷಕ್ಕೆ ರಫ್ತು ಪ್ರಮಾಣ ಹೆಚ್ಚಾಗುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಹೇಳಿರುವ ಅವರು ಪ್ರಧಾನಿ ನರೇಂದ್ರ ಮೋದಿ ನಾಯಕತ್ವಕ್ಕೆ ಸಂದ ಜಯ ಎಂದು ಅವರು ತಿಳಿಸಿದ್ದಾರೆ