೧೫೮ ನೇ ದಿನಕ್ಕೆ ಕಾಲಿಟ್ಟ ಅನ್ನದಾತರ ಹೋರಾಟ

ಮಸ್ಕಿ.ಏ.೨೭-೫ಎ ಕಾಲುವೆ ನೀರಾವರಿ ಯೋಜನೆ ಅನುಷ್ಟಾನಕ್ಕೆ ಒತ್ತಾಯಿಸಿ ತಾಲೂಕಿನ ಬುದ್ದಿನ್ನಿ ಗ್ರಾಮ ಬಳಿ ಅನ್ನದಾತರು ನಡೆಸುತ್ತಿರುವ ಹೋರಾಟ ೧೫೮ ನೇ ದಿನಕ್ಕೆ ಕಾಲಿಟ್ಟಿದೆ ಯೋಜನೆ ವ್ಯಾಪ್ತಿಯ ನಾನಾ ಹಳ್ಳಿಗಳ ರೈತರು ಹೋರಾಟದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
೧೫೮ ನೇ ದಿನದ ಹೋರಾಟದಲ್ಲಿ ಕರ್ನಾಟಕ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಬಸವರಾಜಪ್ಪ ಗೌಡ ಹರ್ವಾಪೂರ ಮಾತನಾಡಿ ಸರಕಾರ ೫ಎ ಕಾಲುವೆ ಅನುಷ್ಟಾನದ ಖಚಿತ ಭರವಸೆ ನೀಡುವ ತನಕ ಹೋರಾಟ ಮುಂದು ವರೆಯಲಿದೆ ಕೋವಿಡ್ ನಿಯಮ ಪಾಲನೆ ಹಿನ್ನೆಲೆ ಯಲ್ಲಿ ಕಡಿಮೆ ಸಂಖ್ಯೆ ಯಲ್ಲಿ ರೈತರು ಪಾಲ್ಗೊಂಡಿದ್ದಾರೆ ಎಂದರು. ಹೋರಾಟ ಸಮಿತಿ ಮುಖಂಡರಾದ ಶಿವನಗೌಡ ವಟಗಲ್, ನಾಗ ರೆಡ್ಡೆಪ್ಪ ದೇವರ ಮನಿ ಮಾತನಾಡಿದರು ತಾಪಂ. ಸದಸ್ಯ ಮೌನೇಶ ಬುದ್ದಿನ್ನಿ,ಮಲ್ಲಪ್ಪ ನಗಲಾಪೂರ, ಗಂಗಪ್ಪ ಅಮೀನಗಡ, ಯಮನಪ್ಪ ಮುದಬಾಳ ಸೇರಿದಂತೆ ಅನೇಕ ರೈತರು ಪಾಲ್ಗೊಂಡಿದ್ದರು.