೧೪.೨ ಕೋಟಿ ರೂ, ಹೆರಾಯಿನ್ ವಶ

ಹೈದರಾಬಾದ್ ,ಜು.೪-ಇಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೈದರಾಬಾದ್ ತೆರಿಗೆ ವಿಭಾಗದ ಅಧಿಕಾರಿಗಳು ತಮ್ಮ
ವಿಶೇಷ ಕಾರ್ಯಾಚರಣೆಯಲ್ಲಿ ನೈರೋಬಿಯಾದ ಮಹಿಳೆಯನ್ನು ಬಂಧಿಸಿ ಸುಮಾರು ೧೪.೨ ಕೋಟಿ ರೂ.ಮೌಲ್ಯದ ಸುಮಾರು ಎರಡು ಕೆಜಿ ಹೆರಾಯಿನ್ ವಶಪಡಿಸಿಕೊಂಡಿದ್ದಾರೆ.
ನೈರೋಬಿಯಾದಿಂದ ಹೈದರಾಬಾದ್ ಗೆ ಜುಲೈ ೨ರ ಭಾನುವಾರ ಆಗಮಿಸಿದ ವಿದೇಶಿ ಮಹಿಳಾ ಪ್ರಜೆಯನ್ನು ನಿರ್ದಿಷ್ಟ ,ಖಚಿತ ಮಾಹಿತಿ ಆಧಾರದ ಮೇಲೆ ಬಂಧಿಸಿ ಅಪಾರ ಪ್ರಮಾಣದ ಮಾದಕ ದ್ರವ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಯನ್ನು ಎನ್ಡಿಪಿಎಸ್ ಕಾಯ್ದೆ ೧೯೮೫ರ ಅಡಿಯಲ್ಲಿ ಬಂಧಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.