೧೪ ತಿಂಗಳ ವೇತನವಿಲ್ಲದೆ ಪೌರ ನೌಕರರು ಕಂಗಾಲು

ಮುದಗಲ್,ಜೂ.೧೩-
ಕಳೆದ ೧೪ ತಿಂಗಳಿಂದ ಸಂಬಳ ಇಲ್ಲದೆ, ದಿನವಿಡೀ ದುಡಿದು ನೀರು ಕುಡಿದು ಮಲಗುವ ಸ್ಥಿತಿ ಬಂದಿದೆ. ತಕ್ಷ ಣ ಸಂಬಳ ನೀಡಿ ನಮ್ಮ ಸಂಸಾರ ಉಳಿಸಿ ಕೊಡಿ ಎಂದು ಮುದಗಲ್ ಪುರಸಭೆ ದಿನಗೋಲಿ ನೀರು ಸರಬರಾಜು ಪೌರ ನೌಕರರು ನಮ್ಮ ಸಮಸ್ಯೆ ಅರಿಯ ಬೇಕೆಂದರೆ ನಮ್ಮ ಮನೆಗಳಿಗೆ ಬಂದು ಪರಿಶೀಲಿಸಬೇಕು.
ಊರಲ್ಲಿ ಕಿರಾಣಿ ಉದ್ರಿ ಕೊಡುತ್ತಿಲ್ಲ ನಯಾ ಪೈಸೆ ಸಾಲ ನೀಡುತ್ತಿಲ್ಲ ನಾವು ಬದುಕು ವುದಾದರೂ ಹೇಗೆ? ನಮ್ಮ ಕಷ್ಟಗಳನ್ನು ಅರಿತುಕೊಂಡು ಸಂಬಳ ನೀಡಬೇಕು. ನಮ್ಮ ಮಕ್ಕಳ ಶಾಲೆಯ ಸುಂಕ (ಡೊನೇಶನ್ ) ಕಟ್ಟಲು ಇಲ್ಲದೆ ಪರದಾಡುವ ಸ್ಥಿತಿ ಬಂದಿದೆ. ಕಳೆದ ೧೪ ತಿಂಗಳುದಿಂದ ಜೀವನ ಸಾಗಿಸಲು ಉದ್ರಿ ಕೊಟ್ಟ ಕಿರಾಣಿ ಅಂಗಡಿ ಮಾಲೀಕರು ಸೇರಿದಂತೆ ಸಾಲ ನೀಡಿದವರ ಕಿರುಕುಳ ತಡೆಯಲಾಗುತ್ತಿಲ್ಲ ಹೇಗೆ ಬದುಕುಬೇಕು? ವಯಸ್ಸಾದ ತಂದೆ, ತಾಯಿ ಹೇಗೆ ಸಾಕಬೇಕು ಒಂದೂ ತಿಳಿಯದೆ ಆಪತ್ತಿನಲ್ಲಿದ್ದೇವೆ. ಕನಿಷ್ಠ ೧೦ ತಿಂಗಳು ಸಂಬಳ ಕೊಟ್ಟು ನಮ್ಮನ್ನ ಕಾಪಾಡಿ. ಸದ್ಯದ ಕಷ್ಟದ ಪರಸ್ಥಿತಿಯಿಂದ ಪಾರಾಗುತ್ತೇವೆ. ಇಲ್ಲವಾದರೆ ಬೀದಿಪಾಲಾಗುತ್ತೇವೆ ಅದಷ್ಟು ಬೇಗನೆ ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಹಾಗೂ ಜನಪ್ರತಿನಿಧಿ ಗಮನಿಸಿ ಸಮಸ್ಯೆ ಬಗೆ ಹರಿಸಬೇಕು ಎಂದು ಅಳಲು ತೋಡಿಕೊಂಡ ದಿನಗೋಲಿ ನೀರು ಸರಬರಾಜು ಪೌರ ನೌಕರನಾದ ಅಮರೇಶ ಅವರು ಪತ್ರಿಕೆ ಮಾಹಿತಿ ನೀಡಿದರು.