೧೪ ತಿಂಗಳ ಮಗು ಕಿಡ್ನಾಪ್ ಪತಿ ವಿರುದ್ದ ದೂರು ದಾಖಲಿಸಿದ ಪತ್ನಿ

ಮಂಗಳೂರು, ಜೂ.೮- ಕದ್ರಿಯಲ್ಲಿರುವ ಮನೆಯಿಂದ ೧೪ ತಿಂಗಳ ತನ್ನ ಮಗುವನ್ನು ಮಾ.೨೩ರಂದು ಕಿಡ್ನಾಪ್ ಮಾಡಲಾಗಿದೆ ಎಂದು ಮಹಿಳೆಯೊಬ್ಬರು, ತನ್ನ ಪತಿಯ ವಿರುದ್ಧವೇ ಪೊಲೀಸ್ ದೂರು ದಾಖಲಿಸಿದ್ದಾಳೆ.

೨೬ ಮೇ ರಂದು ಮಹಿಳೆ ಸಲ್ಲಿಸಿದ ದೂರಿನಲ್ಲಿ, “ಪತಿಯೂ ಯಾವುದೇ ಕೆಲಸಕ್ಕೆ ಹೋಗದೆ ಮನೆಯಲ್ಲಿಯೇ ಇದ್ದು, ಆತನ ವಿರುದ್ದ ಕೊಡಗು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೊಲೆ ಯತ್ನ ಪ್ರಕರಣ ಹಾಗೂ ವಿಟ್ಲ ಪೊಲೀಸ್ ಠಾಣೆಯಲ್ಲಿ ಕಳ್ಳತನ ಪ್ರಕರಣ ದಾಖಲಾಗಿದೆ. ಮಾ. ೨೩ ರಂದು ಸಂಜೆ ೪.೧೦ ಕ್ಕೆ ತನ್ನ ಕಾರಿನಲ್ಲಿ ತನ್ನ ಮನೆಗೆ ಬಂದು ೧೪ ತಿಂಗಳ ಹೆಣ್ಣು ಮಗುವನ್ನು ಅಪಹರಿಸಿದ್ದಾನೆ” ಎಂದು ಆರೋಪಿಸಿದ್ದಾಳೆ.

ಮಗುವನ್ನು ಹಣಕ್ಕಾಗಿ ಮಾರಾಟ ಮಾಡುವ ಕ್ರಿಮಿನಲ್ ಉದ್ದೇಶದಿಂದ ಪತಿ ಮಗುವನ್ನು ಅಪಹರಿಸಿದ್ದಾಳೆ ಎಂದು ಮಹಿಳೆ ಆರೋಪಿಸಿದ್ದಾರೆ.

ಅಪರಾಧದಲ್ಲಿ ಪತಿಯ ಸಂಬಂಧಿಕರು ಸಹ ಪತಿಯೊಂದಿಗೆ ಸಹಕರಿಸಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.

ಪೊಲೀಸರು ಸೆಕ್ಷನ್ ೩೬೩, ೩೭೦, ೩೭೩ ಆರ್ / ಡಬ್ಲ್ಯೂ ೧೪೯ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಮೂಲಗಳ ಪ್ರಕಾರ, ಗಂಡ ಮತ್ತು ಹೆಂಡತಿ ಅನ್ಯಕೋಮಿನವರಾಗಿದ್ದು, ದಾಂಪತ್ಯದಲ್ಲಿ ಬಿರುಕು ಮೂಡಿತ್ತು. ಮಾತ್ರವಲ್ಲದೆ ಪತಿ ತಾನು ನಂಬಿದ್ದ ಧರ್ಮವನ್ನು ಅನುಸರಿಸಲು ಹೆಂಡತಿಗೆ ಒತ್ತಡ ಹೇರುತ್ತಿದ್ದ ಎಂದು ತಿಳಿದುಬಂದಿದೆ.