೧೪ ಗ್ರಾ.ಪಂ ಅಧ್ಯಕ್ಷರಿಂದ ತಾ.ಪಂ ಪ್ರಭಾರಿ ಕಾರ್ಯನಿರ್ವಾಹಕ ಶರ್ಪುನ್ನಿಸ್ ಬೇಗಂ ವರ್ಗಾವಣೆಗೆ ಒತ್ತಾಯ

ಸಿರವಾರ.ಮಾ೪- ಸಿರವಾರ ತಾಲೂಕ ಪಂಚಾಯತ ಪ್ರಬಾರಿ ಕಾರ್ಯನಿರ್ವಾಹಕ ಶರ್ಫು ನ್ನಿಸ್ ಬೇಗಂ ಇವರನ್ನು ವರ್ಗಾವಣೆ ಮಾಡಬೇಕು ಎಂದು ತಾಲೂಕಿನ ೧೪ ಗ್ರಾ.ಪಂ ಅದ್ಯಕ್ಷರುಗಳು ಜಿಲ್ಲಾ ಪಂ ಚಾಯತ ಉಪ ಕಾರ್ಯದರ್ಶಿಗೆ ಇತ್ತಿಚೇಗೆ ಮನವಿ ಸಲ್ಲಿಸುವ ಮೂಲಕ ಒತ್ತಾಯಿಸಿದ್ದಾರೆ. ಪ್ರಬಾರಿ ಕಾರ್ಯನಿರ್ವಾಹಕ ಅಧಿಕಾರಿ ಶರ್ಫುನ್ನಿಸ್ ಬೇಗಂ ಅವರು, ಕಳೆದ ೫ ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು, ಸಿರವಾರ ತಾಲೂಕಿನ ಎಲ್ಲಾ ಪಂಚಾ ಯತಿಯ ಎಫ್‌ಟಿಓ ಅನ್ನು ಸೇವೆ ಮಾಡದೇ ಅವರು ಕೆಲವು ಸೇವೆ ಮಾಡಿದ ಎಫ್‌ಟಿಓ ಗಳನ್ನು ಗೂಗಲ್ ಫಾರ್ಮೆಟ್‌ನಲ್ಲಿ ನಮೂ ದಿಸಿರುವುದಿಲ್ಲ ಹಾಗೂ ಈಗಾಗಲೇ ೨ ಸಲ ಎಫ್‌ಟಿಓಗಳನ್ನು ತೆರವುಗೊಳಿಸಿದ್ದಾರೆ. ಶರ್ಪುನ್ನಿಸ್ ಬೇಗಂ ವರ್ಗಾವಣೆಗೆ ಒತ್ತಾಯ
ಎಂದು ದೂರಿದರು. ಗ್ರಾಮ ಪಂಚಾಯತಿ ಅಧ್ಯಕ್ಷರಿಗೆ ಹಾಗೂ ಸದಸ್ಯರಿಗೆ ಗೌರವ ನೀಡದೇ ಅಗೌರವದಿಂದ ನಡೆದುಕೊಳ್ಳುತ್ತಿದ್ದಾರೆ. ಪಂಚಾಯತಿಯ ಅಭಿವೃದ್ಧಿಗಾಗಿ ಹೊಸ ಕಾಮಗಾರಿಗಳಿಗೆ ಅನು ಮೋದನೆ ನೀಡುತ್ತಿಲ್ಲ, ಪಂಚಾಯತಿ ಅಭಿವೃದ್ಧಿಗಾಗಿ ಕಾರ್ಯನಿರ್ವಹಿಸುತ್ತಿಲ್ಲ. ಕೂಡಲೇ ಸಿರವಾರ ತಾಲೂಕ ಪಂಚಾಯತ ಪ್ರಬಾರಿ ಕಾರ್ಯನಿರ್ವಾಹಕ ಶರ್ಫುನ್ನಿಸ್ ಬೇಗಂ ಇವರನ್ನು ವರ್ಗಾವಣೆ ಮಾಡಬೇಕು, ಪಂಚಾಯತಿಗಳ ಅಭಿವೃದ್ಧಿಗೆ ಅನುಕೂಲಕರ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಗಣದಿನ್ನಿ ಗ್ರಾಪಂ ಅಧ್ಯಕ್ಷ ಸೂಗುರಯ್ಯ ಹಿರೇಮಠ, ಬಾಗಲವಾಡ ಗ್ರಾಪಂ ಅಧ್ಯಕ್ಷ ಪಿ.ತಿಪ್ಪಣ್ಣ ವಕೀಲ, ಮಲ್ಲಟ್ ಗ್ರಾಪಂ ಅಧ್ಯಕ್ಷ ಹನುಮಂತ, ನವಲಕಲ್ ಗ್ರಾಪಂ ಅಧ್ಯಕ್ಷ ದುರುಗಮ್ಮ ದುರುಗಪ್ಪ, ಕಲ್ಲೂರು ಗ್ರಾಪಂ ಅಧ್ಯಕ್ಷ ಸಂಗಪ್ಪಗೌಡ, ಹರವಿ ಗ್ರಾಪಂ ಅಧ್ಯಕ್ಷ ಶರಣಬಸವ, ಹೀರಾ ಗ್ರಾಪಂ ಅಧ್ಯಕ್ಷ ಪಾರ್ವತಮ್ಮ ಬಸವರಾಜಗೌಡ.ಪೋ.ಪಾ., ಮಾಡಗಿರಿ ಗ್ರಾಪಂ ಅಧ್ಯಕ್ಷೆ ತಾರಮ್ಮ ಜಯಂತ, ಹಿರೇಹಣಿಗಿ ಗ್ರಾಪಂ ಅಧ್ಯಕ್ಷೆ ದೇವಮ್ಮ ದುರುಗಪ್ಪ, ಅತ್ತನೂರು ಗ್ರಾಪಂ ಅಧ್ಯಕ್ಷ ಪಾರ್ವತಮ್ಮ ವಿರುಪಯ್ಯಸ್ವಾಮಿ, ಚಿಂಚರಕಿ ಗ್ರಾಪಂ ಅಧ್ಯಕ್ಷ ಹುಲಿಗೆಮ್ಮ ಅಮರಯ್ಯ ಸೇರಿದಂತೆ ಅನೇಕರು ಇದ್ದರು.