೧೪ನೇ ಹಣಕಾಸಿನಲ್ಲಿ ೯ಲಕ್ಷ ದುರ್ಬಳಕೆ-ಶಿವರಾಜ್ ಆರೋಪ

ಮಾನ್ವಿ.ಏ.೦೧-ತಾಲೂಕಿನ ಜಾನೇಕಲ್ ಗ್ರಾಮ ಪಂಚಾಯಿತಿಯಲ್ಲಿ ೧೪ನೇ ಉಳಿತಾಯ ಹಣಕಾಸಿನಲ್ಲಿ ೯ಲಕ್ಷ ನಿಯಮ ಬಾಹಿರವಾಗಿ ದುರ್ಬಳಕೆ ಮಾಡಿದ್ದಾರೆ ಎಂದು ಶಿವರಾಜ ಜಾನೇಕಲ್ ಆರೋಪಿಸಿದರು.
ಪಟ್ಟಣದ ಪತ್ರಿಕಾಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಮಾನ್ವಿ ತಾಲೂಕಿನಲ್ಲಿ ಜಾನೇಕಲ್ ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷರು ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ೧೪ ನೇ ಉಳಿತಾಯ ಹಣಕಾಸಿನಲ್ಲಿ ನಿಯಮ ಬಾಹಿರವಾಗಿ ೯ಲಕ್ಷ ಹಣವನ್ನು ದುರ್ಬಳಕೆ ಮಾಡಿದ್ದಾರೆ.
೧೪ನೇ ಹಣಕಾಸಿನಲ್ಲಿ ಉಳಿತಾಯ ಹಣಕಾಸಿನಲ್ಲಿ ಬಿಲ್ ಮಾಡಬೇಕಾದರೆ ೪ಸಾವಿರದ ೯ನೂರ ೯೯ ರೂಪಾಯಿಗಳು ಮಾತ್ರ ವೋಚರ್ ಮುಖಾಂತರ ಹಣ ತೆಗೆಯಬಹುದಾಗಿತ್ತು ಆದರೆ ಇವರುಗಳು ನಿಯಮ ಬಾಹಿರವಾಗಿ ವೋಚರ್ ನಂಬರ್ ಎಫ್ ಎಫ್ ಸಿ/೨೦೨೦-೨೧/ಪಿ/೩೦ ರಲ್ಲಿ ೭೦೦೦೦ ಸಾವಿರ ಹಾಗೂ ೪೦ ರಲ್ಲಿ ೨ಲಕ್ಷದ ಐವತ್ತು ಸಾವಿರ ರೂಪಾಯಿಗಳ ವೋಚರ್ ಗಳನ್ನು ಸೃಷ್ಟಿ ಮಾಡಿ ಇದರಂತೆ ೯ಲಕ್ಷ ರೂಪಾಯಿಗಳು ಲಪಟಾಯಿಸಿದ್ದಾರೆ.
೧೪ ನೇ ಉಳಿತಾಯ ಹಣವನ್ನು ಖರ್ಚು ಮಾಡಬೇಕಾದರೆ ಸಾಮಾನ್ಯ ಸಭೆ ಕರೆದು ಆ ಸಭೆಯಲ್ಲಿ ೧೪ ನೇ ಹಣಕಾಸಿನ ಬಗ್ಗೆ ಚರ್ಚಿಸಿ ಕ್ರಿಯಾ ಯೋಜನೆ ತಯಾರಿಸಿ ಆ ಕ್ರಿಯೆ ಯೋಜನೆ ತಾಲ್ಲೂಕು ಪಂಚಾಯಿತಿಯಲ್ಲಿ ಅನುಮೋದನೆ ಪಡೆದ ನಂತರ ಟೆಂಡರ್ ಕರೆದು ಹಣವನ್ನು ಖರ್ಚು ಮಾಡಬೇಕಾಗಿತ್ತು.
ಜಾನೇಕಲ್ ಪಂಚಾಯಿತಿಗೆ ಒಳಪಡುವ ಹಳ್ಳಿಗಳಲ್ಲಿ ಕುಡಿಯುವ ನೀರಿನ ಕೆರೆಗಳು ಅಭಿವೃದ್ದಿ ಇಲ್ಲದೆ ಬಿಕೋ ಎನ್ನುತ್ತಿವೆ ನೀರು ಕೂಡ ಕೆರೆಗಳಲ್ಲಿ ತುಂಬಿಸಿಲ್ಲ ಸರಿಯಾದ ಕೆರೆಗಳಿಗೆ ಮುಳ್ಳುತಂತಿ ಇಲ್ಲ ೧೪ ನೇ ಉಳಿತಾಯ ಹಣಕಾಸನ್ನು ಕುಡಿಯುವ ನೀರಿಗೆ ಬಳಕೆ ಮಾಡಬೇಕಾಗಿತ್ತು.ಆದರೆ ಜಾನೇಕಲ್ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಅಧ್ಯಕ್ಷರು ಸೇರಿಕೊಂಡು ೯ಲಕ್ಷ ಹಣವನ್ನು ದೋಚಿದ್ದಾರೆ.
೧೪ನೇ ಉಳಿತಾಯ ಹಣಕಾಸಿನ ಹಣ ೯ಲಕ್ಷ ದೋಚಿದ್ದು ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ತನಿಖೆ ಮಾಡಿ ಹಿಂಪಡೆಯಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ನರಸಪ್ಪ ಜೂಕುರು,ಬಸವರಾಜ್ ನಾಯಕ್ ಜಾನೆಕಲ್, ಮಂಜುನಾಥ್ ಜಾನೇಕಲ್, ಬಸವ ಜಾನೇಕಲ್ , ಉಪಸ್ಥಿತರಿದ್ದರು.