೧೩.೫೩ ಕೋಟಿ ಜನರಿಗೆ ಲಸಿಕೆ


ನವದೆಹಲಿ, ಏ.೨೩- ದೇಶದಲ್ಲಿ ಒಂದು ಕಡೆ ಕೋರೊನಾ ಸೋಂಕು ಸಂಖ್ಯೆ ರಾಕೆಟ್ ವೇಗದಲ್ಲಿ ಹೆಚ್ಚಾಗುತ್ತಿದೆ ಮತ್ತೊಂದು ಕಡೆ ದೇಶದಲ್ಲಿ ಇಲ್ಲಿಯವರೆಗೆ ೧೩.೫೩ ಕೋಟಿ ಮಂದಿಗೆ ಕೊರೊನಾ ಸೋಂಕಿನ ಲಸಿಕೆ ಹಾಕಲಾಗಿದೆ.
ದೇಶದಲ್ಲಿ ನೆನ್ನೆ ಸಂಜೆಯತನಕ ೧೩,೫೩,೪೬,೭೨೯ ಮಂದಿಗೆ ಲಸಿಕೆ ಹಾಕಲಾಗಿದೆ ಇದರಲ್ಲಿ ೯೨,೪೧,೩೮೪ ಮಂದಿ ಆರೋಗ್ಯ ಕಾರ್ಯಕರ್ತರು ಮೊದಲ ಡೋಸ್ ಲಸಿಕೆ ಪಡೆದಿದ್ದು ೫೯,೦೩,೩೬೮ ಮಂದಿ ಎರಡನೇ ಡೋಸ್ ಪಡೆದಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ
ದೇಶದಲ್ಲಿ ಕೊರೊನಾ ಸೋಂಕು ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಸೋಂಕು ಹೆಚ್ಚಳವನ್ನು “ರಾಷ್ಟ್ರೀಯ ತುರ್ತು ಪರಿಸ್ಥಿತಿ” ಎಂದು ಕರೆದಿದೆ.
ದೇಶದಲ್ಲಿ ಒಟ್ಟಾರೆ ಲಸಿಕೆ ಪಡೆದವರ ಪೈಕಿ ೧,೧೭,೨೭,೭೦೮ ಮಂದಿ ಮುಂಚೂಣಿ ಕಾರ್ಯಪಡೆಯ ಸಿಬ್ಬಂದಿ ಮೊದಲ ಡೋಸ್ ಹಾಗು ೬೦,೭೩,೬೨೨ ಮಂದಿ ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ ನಿಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ
೪೫ ರಿಂದ ೫೯ ವರ್ಷ ಒಳಗಿನ ೪,೫೫,೧೦,೪೨೬ ಮಂದಿ ಮೊದಲ ಡೋಸ್ ಲಸಿಕೆ ಪಡೆದಿದ್ದು ೧೮,೯೧,೧೬೦ ಮಂದಿ ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ.
೬೦ ವರ್ಷ ದಾಟಿದ ೪,೮೫,೦೧,೯೦೬ ಮಂದಿ ಮೊದಲ ಡೋಸ್ ೬೪,೯೭,೧೫೫ ಮಂದಿ ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ ಎಂದು ಸಚಿವಾಲಯ ಮಾಹಿತಿ ನೀಡಿದೆ