೧೩ ದ್ವಿಚಕ್ರ ವಾಹನ ಕಳ್ಳರ ಬಂಧನ

ಎಸ್.ಪಿ.ಯವರಿಂದ ಶ್ಲಾಘನೆ, ಬಹುಮಾನ ಘೋಷಣೆ
ಸಿರವಾರ,ನ.೨೫-ಕಳೆದ ಕೆಲದಿನಗಳ ಹಿಂದೆ ೨ ಪ್ರಕರಣಗಳು ದಾಖಲಾಗಿತ್ತು, ಅದರಲ್ಲಿ ೧೩ ದ್ವಿಚಕ್ರ ವಾಹನ ಕಳ್ಳತನವಾದ ಬಗ್ಗೆ ತನಿಖೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಬಿ. ನಿಖಿಲ್, ಹೆಚ್ಚುವರಿ ಎಸ್.ಪಿ. ಆರ್. ಶಿವಕುಮಾರ, ಸಿಂಧನೂರ ಡಿಎಸ್‌ಪಿ ವೆಂಕಟಪ್ಪ ನಾಯಕ ಅವರ ಮಾರ್ಗದರ್ಶನದಲ್ಲಿ ಸಿಪಿಐ ಶಶಿಕಾಂತ ಎಂ. ನೇತೃತ್ವದಲ್ಲಿ ಪಿಎಸ್‌ಐ ಗೀತಾಂಜಲಿ ಶಿಂಧೆ ಅವರ ತಂಡ ರಚಿಸಿ ಬಿರುಸಿನ ಕಾರ್ಯಾಚರಣೆ ನಡೆಸಿ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
೧೩ ದ್ವಿಚಕ್ರ ವಾಹನಗಳ ಕಳ್ಳತನ ಮಾಡಿದ ಇಬ್ಬರು ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿ ಹಾಗೂ ಈ ಹಿಂದೆ ೧೬ ಕುರಿಗಳನ್ನು ಕಳ್ಳತನ ಮಾಡಿದ ಮೂವರು ಆರೋಪಿತರನ್ನು ಬಂಧಿಸುವಲ್ಲಿ ಯಶಸ್ವಿಯಾದ ಈ ಕಾರ್ಯಾಚರಣೆಗೆ ಜಿಲ್ಲಾ ವರಿಷ್ಠಾಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿ ಬಹುಮಾನ ಘೋಷಣೆ ಮಾಡಿದ್ದಾರೆ ಎಂದು ಪಿಎಸ್‌ಐ ಗೀತಾಂಜಲಿ ಶಿಂಧೆ ಅವರು ಹೇಳಿದರು.
ಈ ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಸುರೇಶ, ವಿಜಯ, ಅಮರೇಶ, ಇಸ್ಮಾಯಿಲ್ ಭಾಗವಹಿಸಿದ್ದರು.
ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ಕರೆದುಕೊಂಡು ಹೋದ ಅತಿಥಿ ಶಿಕ್ಷಕನ ಬಂಧನ
ಕಳೆದ ಎರಡು ಹಿಂದೆ ತಾಲೂಕಿನ ಮಾಚನೂರು ಗ್ರಾಮದ ಸ.ಹಿ.ಪ್ರಾ.ಶಾಲೆಯ ೧೩ವರ್ಷದ ವಿದ್ಯಾರ್ಥಿನಿಯನ್ನು ಅತಿಥಿ ಶಿಕ್ಷಕ ಪಾಲೇಶ ಬಾಲಕಿಯನ್ನು ಪುಸಲಾಯಿಸಿ ಕರೆದುಕೊಂಡು ಹೋಗಿರುವ ಕುರಿತು ಪೋಕ್ಸೋ ಪ್ರಕರಣ ದಾಖಲಾಗಿದ್ದು ಆರೋಪಿಯನ್ನು ೪೮ ಗಂಟೆಗಳಲ್ಲಿಯೇ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಸಿರವಾರ ಪಿಎಸ್‌ಐ ಗೀತಾಂಜಲಿ ಶಿಂಧೆ ಅವರು ತಿಳಿಸಿದ್ದಾರೆ.