೧೩೫ ಕೋಟಿ ರೂಪಾಯಿಗೆ ಕಾರ್ತಿಕ್ ಆರ್ಯನ್ ಫಿಲ್ಮ್ ’ಧಮಾಕಾ’ದ ಡಿಜಿಟಲ್ ಹಕ್ಕು ಮಾರಾಟ

ಕೊರೊನಾ ಮಹಾಮಾರಿಯ ಎರಡನೆಯ ಅಲೆಯ ಕಾರಣ ಟಾಕೀಸುಗಳ ಬದಲಿಗೆ ಮತ್ತೆ ಓಟಿಟಿ ಫ್ಲ್ಯಾಟ್ಫಾರ್ಮ್ ನಲ್ಲಿ ಬಾಲಿವುಡ್ ಫಿಲ್ಮ್ ಗಳು ಬಿಡುಗಡೆಯಾಗುತ್ತಿವೆ .
ಇದೀಗ ಕಾರ್ತಿಕ್ ಆರ್ಯನ್ ಅವರ ಫಿಲ್ಮ್ ’ಧಮಾಕಾ’ ಓಟಿಟಿ ಪ್ಲಾಟ್ಫಾರ್ಮ್ ನಲ್ಲಿ ಮಾರಾಟವಾಗಿರುವ ಅತಿ ದುಬಾರಿ ಬಾಲಿವುಡ್ ಫಿಲ್ಮ್ ಎನಿಸಿಕೊಳ್ಳಲಿದೆ.
ಸ್ಪಾಟ್ ಬಾಯ್ ವರದಿಯ ಅನುಸಾರ ’ಧಮಾಕಾ’ದ ಡಿಜಿಟಲ್ ರೈಟ್ಸ್ ನ್ನು ನೆಟ್ ಫ್ಲಿಕ್ಸ್ ೧೩೫ ಕೋಟಿ ರೂಪಾಯಿಗೆ ಖರೀದಿಸಿದೆ .ಇದರ ಜೊತೆಗೆ ನ್ಯೂ ಜನರೇಷನ್ ನಟ ಕಾರ್ತಿಕ್ ಆರ್ಯನ್ ಅವರ ಈ ಫಿಲ್ಮ್ ಲಕ್ಷ್ಮೀ ಮತ್ತು ಕೂಲಿ ನಂಬರ್ ವನ್ ಫಿಲ್ಮ್ ನ್ನು ಹಿಂದಿಕ್ಕಿದೆ. ಧಮಾಕಾದ ಮೊದಲು ಓಟಿಟಿ ಪ್ಲ್ಯಾಟ್ ಫಾರ್ಮಲ್ಲಿ ಮಾರಾಟವಾಗಿರುವ ಕೆಲವು ದುಬಾರಿ ಫಿಲ್ಮ್ ಗಳು ಹೀಗಿವೆ:

’ಲಕ್ಮ್ಮೀ’ ೧೨೫ ಕೋಟಿ ರೂಪಾಯಿ: ಅಕ್ಷಯ್ ಕುಮಾರ್, ಕಿಯಾರಾ ಆಡ್ವಾಣಿ, ಶರದ್ ಕೇಲ್ಕರ್ ಅಭಿನಯದ ’ಲಕ್ಷ್ಮೀ’ ೨೦೨೦ ರಲ್ಲಿ ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ಇದರಲ್ಲಿ ರಿಲೀಸ್ ಆಗಿತ್ತು.ಇದು ದಕ್ಷಿಣಭಾರತದ ಫಿಲ್ಮ್ ನ ಹಿಂದಿ ರೀಮೇಕ್ ಆಗಿತ್ತು. ಇದು ’ಧಮಾಕಾ’ ಫಿಲ್ಮ್ ಗಿಂತ ಮೊದಲು ಅತಿ ಹೆಚ್ಚು ಬೆಲೆಗೆ (೧೨೫ ಕೋಟಿ ರೂ.) ಮಾರಾಟವಾದ ಫಿಲ್ಮ್ ಎನಿಸಿಕೊಂಡಿತ್ತು. ಅನೇಕ ದಾಖಲೆಗಳನ್ನು ಈ ಫಿಲ್ಮ್ ಹಿಂದಿಕ್ಕಿತ್ತು.
ಭುಜ್: ದ ಪ್ರೈಡ್ ಆಫ್ ಇಂಡಿಯಾ:

೧೧೦ ಕೋಟಿ ರೂಪಾಯಿ ಅಜಯ್ ದೇವಗನ್, ಸೋನಾಕ್ಷಿ ಸಿಂಹ, ನೋರಾ ಫತೇಹಿ, ಶರದ್ ಕೇಲ್ಕರ್ ಅಭಿನಯದ “ಭುಜ್” ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ನಲ್ಲಿ ಈ ವರ್ಷ ೨೦೨೧ ರಲ್ಲಿ ರಿಲೀಸ್ ಆಗಿತ್ತು. ಖರೀದಿಯಲ್ಲಿ ಇದು ಎರಡನೇ ಅತಿ ದುಬಾರಿ ಡಿಜಿಟಲ್ ಫಿಲ್ಮ್ ಎನಿಸಿಕೊಂಡಿದೆ. ಫಿಲ್ಮ್ ನ ರೈಟ್ ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ೧೧೦ ಕೋಟಿ ರೂಪಾಯಿಗೆ ಖರೀದಿಸಿತ್ತು.

’ಕೂಲಿ ನಂ.೧’: ೯೦ ಕೋಟಿ ರೂಪಾಯಿ: ವರುಣ್ ಧವನ್, ಸಾರಾ ಅಲೀ ಖಾನ್, ಶಿಖಾ ತಲ್ಸಾನಿಯಾ, ರಾಜ್ ಪಾಲ್ ಯಾದವ್,ಪರೇಶ್ ರಾವಲ್ ಅಭಿನಯದ ’ಕೂಲಿ ನಂಬರ್ ೧’ ಅಮೆಜಾನ್ ಪ್ರೈಮ್ ನಲ್ಲಿ ಡಿಸೆಂಬರ್ ೨೫ರಂದು ಬಿಡುಗಡೆಗೊಂಡಿತ್ತು. ೯೦ ಕೋಟಿ ರೂಪಾಯಿಗೆ ಈ ಫಿಲ್ಮ್ ಖರೀದಿಸಲ್ಪಟ್ಟಿತ್ತು. ಇದು ೧೯೯೫ ರಲ್ಲಿ ಬಂದ ಕೂಲಿ ನಂಬರ್ ವನ್ ಇದರ ರಿಮೇಕ್ ಆಗಿತ್ತು.ಇದರ ನಿರ್ದೇಶಕರಾಗಿದ್ದರು ಡೇವಿಡ್ ಧವನ್.

’ಸಡಕ್ ೨’: ೭೦ ಕೋಟಿ ರೂಪಾಯಿ: ಸಂಜಯ್ ದತ್ತ್, ಆಲಿಯಾ ಭಟ್, ಆದಿತ್ಯ ರಾಯ್ ಕಪೂರ್, ಪೂಜಾ ಭಟ್ ಅಭಿನಯದ ’ಸಡಕ್೨’ ೨೮ ಅಕ್ಟೋಬರ್ ೨೦೨೦ ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ನಲ್ಲಿ ಬಿಡುಗಡೆಗೊಂಡಿತ್ತು. ಇದರ ಡಿಜಿಟಲ್ ರೈಟ್ಸ್ ೭೦ ಕೋಟಿ ರೂಪಾಯಿಗೆ ಖರೀದಿಸಲ್ಪಟ್ಟಿತ್ತು.

ರಿಚಾ ಚಡ್ಡಾ ಬಾಯ್ ಫ್ರೆಂಡ್ ಅಲೀ ಫಜಲ್ ಗೆ ’ಥ್ಯಾಂಕ್ಯೂ’ ಅಂದಳು

ನಟಿ ರಿಚಾ ಚಡ್ಡಾ ಇತ್ತೀಚೆಗೆ ಕಾಲಿಗೆ ಗಾಯ ಮಾಡಿಕೊಂಡಿದ್ದರು. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಅವರು ತನ್ನ ಕಾಲಿನ ಫೋಟೋವನ್ನು ಪೋಸ್ಟ್ ಮಾಡುತ್ತಾ ತನ್ನ ಬಾಯ್ ಫ್ರೆಂಡ್ ಅಲೀ ಫಜಲ್ ಗೆ ’ಥ್ಯಾಂಕ್ಯೂ’ ಎಂದಿದ್ದಾರೆ.
ರಿಚಾ ಈ ಫೋಟೋದಲ್ಲಿ ಸೋಫಾದ ಮೇಲೆ ಕೂತು ಕಾಲನ್ನು ಎತ್ತಿ ನಿಲ್ಲಿಸಿದ್ದಾರೆ.ಅವರು ಸೋಫಾ ಬದಿಗೆ ನೋವಾಗಿರುವ ಪಾದವನ್ನು ಇಟ್ಟಿದ್ದಾರೆ. ಫೋಟೋದಲ್ಲಿ ಅವರು ಟೀಶರ್ಟ್ ಧರಿಸಿದ್ದಾರೆ.


ರಿಚಾ ಅವರು ಫೋಟೋದಲ್ಲಿ ಕ್ಯಾಪ್ಶನ್ ಬರೆಯುತ್ತಾ- ಅನಾರೋಗ್ಯ ಮತ್ತು ಆರೋಗ್ಯ ಎರಡರಲ್ಲೂ ಒಬ್ಬರು ಇನ್ನೊಬ್ಬರಿಗೆ ಸಹಾಯ ಮಾಡಬೇಕು. ಥ್ಯಾಂಕ್ಯು, ಎಲ್ಲಕ್ಕಿಂತ ಉತ್ತಮ ಸ್ನೇಹಿತ ನನ್ನ ಈ ಕಾಲು ನೋವಿಗೆ ಗುಣವಾಗಲು ಗಮನಹರಿಸಿದರು ಎಂದಿರುವರು.
ರಿಚಾ ಕೆಲವುದಿನ ಮೊದಲು ತನ್ನ ಎಕ್ಸ್-ರೇ ಮತ್ತು ಗಾಯಗೊಂಡ ಕಾಲಿನ ಫೋಟೋವನ್ನು ಕೂಡಾ ಪೋಸ್ಟ್ ಮಾಡಿದ್ದರು. ಫೋಟೋದ ಕೆಳಗಡೆ ಬರೆದಿದ್ದರು ’ಸಹನ ಶಕ್ತಿ’ ಎಂದು. ರಿಚಾ ಚಡ್ಡಾ ಏಪ್ರಿಲ್ ೨೦೨೦ ರಲ್ಲಿ ಬಾಯ್ ಫ್ರೆಂಡ್ ಅಲೀ ಫಜಲ್ ಜೊತೆ ವಿವಾಹ ಬಂಧನಕ್ಕೊಳಗಾಗುವವರಿದ್ದರು.ಕೊರೊನಾ ವೈರಸ್ ನ ಲಾಕ್ಡೌನ್ ಕಾರಣ ತನ್ನ ವಿವಾಹವನ್ನು ಪೋಸ್ಟ್ ಫೋನ್ ಮಾಡಿದ್ದರು.

”ಥ್ಯಾಂಕ್ ಗಾಡ್’ ಫಿಲ್ಮ್ ನಲ್ಲಿ ಯಮಲೋಕದ ಕತೆ: ಅಜಯ್ ದೇವಗಣ್ ಯಮದೂತನಂತೆ!

ಅಜಯ್ ದೇವಗಣ್, ಸಿದ್ಧಾರ್ಥ ಮಲೋತ್ರಾ, ಮತ್ತು ರಕುಲ್ ಪ್ರೀತ್ ಸಿಂಗ್ ಅಭಿನಯದ ’ಥ್ಯಾಂಕ್ ಗಾಡ್’ ಫಿಲ್ಮ್ ಈಗ ಸುದ್ದಿ ಮಾಡಿದೆ. ಇದರ ನಿರ್ದೇಶಕರಾಗಿದ್ದಾರೆ ಇಂದ್ರಕುಮಾರ್. ಇದನ್ನು ಭೂಷಣ್ ಕುಮಾರ್ ಮತ್ತು ಆನಂದ್ ಪಂಡಿತ್ ಪ್ರೊಡ್ಯೂಸ್ ಮಾಡುತ್ತಿದ್ದಾರೆ.


ಫಿಲ್ಮ್ ನಲ್ಲಿ ಯಮಲೋಕದ ಕಥೆ ಇದೆಯಂತೆ. ಇದರಲ್ಲಿ ಅಜಯ್ ದೇವಗಣ್ ಯಮದೂತ ನ ಪಾತ್ರವನ್ನು ನಿರ್ವಹಿಸಲಿದ್ದಾರೆ.ಫಿಲ್ಮ್ ನ ಫಸ್ಟ್ ಶೆಡ್ಯೂಲ್ ಪೂರ್ಣಗೊಂಡಿದೆ.


ಕೊರೊನಾ ಸಂಕಟ ಕಾಲ ಮುಗಿದ ನಂತರ ಫಿಲ್ಮ್ ನ ಸೆಕೆಂಡ್ ಶೆಡ್ಯೂಲ್ ನ ಶೂಟಿಂಗ್ ಆರಂಭಿಸಲಿದ್ದಾರೆ.
ಈ ಫಿಲ್ಮ್ ನಲ್ಲಿ ಸಿದ್ಧಾರ್ಥ್ ಮಲೋತ್ರಾ ಮತ್ತು ರಕುಲ್ ಪ್ರೀತ್ ಸಿಂಗ್ ಅವರ ಲವ್ ಸ್ಟೋರಿ ಇದೆ .ಫಿಲ್ಮ್ ನಲ್ಲಿ ನಾಲ್ಕು ಹಾಡುಗಳಿವೆ. ಈ ಫಿಲ್ಮ್ ನ ಕಥೆ ಮುನ್ನಾಭಾಯಿ ಎಂಬಿಬಿಎಸ್ ಮತ್ತು ೩ ಈಡಿಯೆಟ್ಸ್ ರೀತಿಯಲ್ಲಿ ಗಮನ ಸೆಳೆಯಲಿದೆಯಂತೆ . ಇನ್ನೂ ೩೫ರಿಂದ ೪೦ ದಿನಗಳ ಕಾಲ ಫಿಲ್ಮ್ ನ ಶೂಟಿಂಗ್ ಬಾಕಿ ಇದೆ.