
ರಾಯಚೂರು,ಆ.೯- ನಗರಸಭೆ ವ್ಯಾಪ್ತಿಯಲ್ಲಿ ೧೩೦ ಜನರನ್ನು ದಿನಗೂಲಿ ಆಧಾರದ ಮೇಲೆ ತುರ್ತು ಸಂದರ್ಭದಲ್ಲಿ ಕಾಲುವೆ ತೆಗೆಯು ಮತ್ತು ಕಸ ಗಿಡಿಸುವ ಸಲುವಾಗಿ ತೆಗೆದುಕೊಂಡು ೩ ತಿಂಗಳು ಕಳೆದರೂ ಸಂಬಳ ಪಾವತಿ ಮಾಡದೇ ೧೩೦ ಜನರನ್ನು ಕೆಸದಿಂದ ತೆಗೆದುಹಾಕಿ ವಂಚನೆ ಮಾಡಿದ್ದಾರೆ ಎಂದು ದಲಿತ ಸೇನೆ ಗೌರವಾಧ್ಯಕ್ಷ ವಿ.ಬಾಬುರಾವ್ ಹೇಳಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ,ರಾಯಚೂರು ಸ್ವಚ್ಛತೆಗಾಗಿ ನಗರಸಭೆ ಪೌರಾಯುಕ್ತ ಕೆ.ಗುರುಲಿಂಗಪ್ಪ ಅವರು ೧೩೦ ಜನರನ್ನು ದಿನಗೂಲಿ ಆಧಾರದ ಮೇಲೆ ಕೆಲಸಕ್ಕೆ ತೆಗೆದುಕೊಂಡು ೩ ತಿಂಗಳ ವೇತನ ನೀಡದೇ ಏಕಾಏಕಿ ಅವರನ್ನು ಕೆಸಲದಿಂದ ತೆಗೆದು ಹಾಕಿದ್ದಾರೆ ಇದರಿಂದ ದಿನಗೂಲಿ ಕಾರ್ಮಿಕರು ಕಂಗಾಲಾಗಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರು ಕೂಡ ಬಗೆಹರಿಯುತ್ತಿಲ್ಲ.ಆದ್ದರಿಂದ ಕೂಡಲೇ ೧೩೦ ದಿನಗೂಲಿ ಕಾರ್ಮಿಕರನ್ನು ಪುನ ಕೆಲಸಕ್ಕೆ ತೆಗೆದುಕೊಂಡು ಬಾಕಿ ೩ ತಿಂಗಳ ವೇತನವನ್ನು ನೀಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಶ್ರೀನಿವಾಸ್, ಮಂಚಾಲ ಕೃಷ್ಣ ಇದ್ದರು.