
ದಕ್ಷಿಣ ಕೊರಿಯಾ,ಏ.೨೬-ದಕ್ಷಿಣ ಕೊರಿಯಾದ ಖ್ಯಾತ ಗಾಯಕ ಜಿಮಿನ್ ರೀತಿ ತಾನೂ ಕಾಣಬೇಕೆಂಬ ಹುಚ್ಚು ಆಸೆಯಿಂದ ಸೇಂಟ್ ವಾನ್ ಕೊಲುಸಿ ಎಂಬ ಯುವಕ ೧೨ ಬಾರಿ ಪ್ಲಾಸ್ಟಿಕ್ ಸರ್ಜರಿ ಮಾಡಿಕೊಂಡು ಈಗ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾನೆ.
ಸಂಗೀತ ಕ್ಷೇತ್ರದಲ್ಲಿ ತಾನು ಬಹುದೊಡ್ಡ ಸಾಧನೆ ಮಾಡಬೇಕೆಂಬ ಕನಸು ಹೊತ್ತಿದ್ದ ಸೇಂಟ್ ವಾನ್ ಕೊಲುಸಿ ಇದಕ್ಕಾಗಿಯೇ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡು ತನ್ನಿಷ್ಟದ ಗಾಯಕ ಜಿಮಿನ್ ರೀತಿ ಕಾಣಿಸಿಕೊಳ್ಳುವ ಆಸೆ ಹೊಂದಿದ್ದ. ಆದರೆ ವಿಧಿಯಾಟವೇ ಬೇರೆಯಾಗಿತ್ತು. ಕೊಲುಸಿ ಪ್ಲಾಸ್ಟಿಕ್ ಸರ್ಜರಿಯಿಂದಲೇ ತನ್ನ ೨೨ನೇ ವಯಸ್ಸಿಗೆ ಮೃತಪಟ್ಟಿದ್ದಾನೆ.
೧೨ ಬಾರಿ ಪ್ಲಾಸ್ಟಿಕ್ ಸರ್ಜರಿ ಮಾಡಿದ ನಂತರ ಸೇಂಟ್ ವಾನ್ ಕೊಲುಸಿ ಆರೋಗ್ಯದಲ್ಲಿ ಏರುಪೇರಾಗಿತ್ತು. ಹೀಗಾಗಿ ಆರೋಗ್ಯ ಹದಗೆಟ್ಟ ಕಾರಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸೇಂಟ್ ವಾನ್ ಕೊಲುಸಿ ಮೃತಪಟ್ಟಿದ್ದು, ಅವರ ಸಾವಿಗೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದೇ ಕಾರಣ ಎಂದು ತಿಳಿದು ಬಂದಿದೆ.
ಮೃತ ಕೊಲುಸಿ ೧೨ ಬಾರಿ ಪ್ಲಾಸ್ಟಿಕ್ ಸರ್ಜರಿಗಾಗಿ ೨೨೦,೦೦೦ ಡಾಲರ್ ಅಂದರೆ ೧,೮೦,೨೨,೧೮೦ ಖರ್ಚು ಮಾಡಿದ್ದರು. ಸರ್ಜರಿಯ ನಂತರ ಅಮೆರಿಕದಲ್ಲಿ ಪ್ರಸಾರದಲ್ಲಿರುವ ‘ಕೆ ಪಾಪ್ ಸ್ಟಾರ್’ ಸೀರಿಸ್‌ನಲ್ಲಿ ನಟಿಸಲು ಬಯಸಿದ್ದರು. ಕಳೆದ ನವೆಂಬರ್‌ನಲ್ಲಿ ದವಡೆಯ ಕಸಿಯನ್ನು ತೆಗೆದು ಹಾಕಲು ಆತ ಆಸ್ಪತ್ರೆಗೆ ಸೇರಿದ್ದರು. ಆದರೆ ಶಸ್ತ್ರಚಿಕಿತ್ಸೆ ನಂತರ ಆತನಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಇದು ಉಲ್ಬಣವಾಗಿ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.
ಇನ್ನು ಕೊಲುಸಿಗೆ ತನ್ನ ರೂಪದ ಬಗ್ಗೆ ಕೀಳರಿಮೆ ಇತ್ತು. ತುಂಬಾ ಅಗಲವಾದ ದವಡೆ ಮತ್ತು ಗಲ್ಲವನ್ನು ಹೊಂದಿದ್ದರಿಂದ ಆಕಾರವನ್ನು ಇಷ್ಟಪಟ್ಟಿರಲಿಲ್ಲ. ಹೀಗಾಗಿ ಏಷ್ಯನ್ನರಂತೆ ವಿ ಆಕಾರದ ಮುಖವನ್ನು ಬಯಸಿದ್ದ ಕೊಲುಸಿ ಕಳೆದ ವರ್ಷ ಮಹತ್ವದ ದವಡೆ ಸರ್ಜರಿಗೆ ಒಳಗಾಗಿದ್ದರು