೧೨ ಘಂಟೆಗಳಲ್ಲಿ ಇಬ್ಬರಿಗೆ ಅನುಕಂಪ ಆಧಾರಿತ ನೇಮಕ ಆದೇಶ

ಪೌರ ಕಾರ್ಮಿಕರ ಕುಟುಂಬ ಪರ ಜಿಲ್ಲಾಧಿಕಾರಿ, ಪೌರಾಯುಕ್ತರ ಮಾನವಿಯತೆ
ರಾಯಚೂರು.ನ.೨೫- ನಗರಸಭೆ ಪೌರ ಕಾರ್ಮಿಕ ಎರಡು ಕುಟುಂಬಗಳಿಗೆ ಅನುಕಂಪ ಆಧಾರಿತವಾಗಿ ನೇಮಕ ಆದೇಶವನ್ನು ಕೇವಲ ೧೨ ಘಂಟೆಯಲ್ಲಿ ನೀಡಿದ ದಾಖಲೆ ಜಿಲ್ಲಾಡಳಿತ ಮತ್ತು ನಗರಸಭೆ ಮಾನವಿಯತೆ ಮೆರೆದಿವೆ.
ಅನುಕಂಪ ಆಧಾರಿತ ನೇಮಕಾತಿಗೆ ಕಡತ ಮಂಡಿಸಿದ ೧೨ ಘಂಟೆಗಳಲ್ಲಿ ಮೃತರ ಕುಟಂಬದವರಿಗೆ ಡಿ ದರ್ಜೆಯ ಹುದ್ದೆ ನೇಮಕಾತಿ ನೀಡುವ ಮೂಲಕ ದಾಖಲೆ ಬರೆಯಲಾಗಿದೆ. ನಗರಸಭೆ ಪೌರ ಕಾರ್ಮಿಕರಾಗಿದ್ದ ತಿಮ್ಮಪ್ಪ ಮತ್ತು ಬೋಳಬಂಡೆಪ್ಪ ಅವರು ನಿಧನರಾಗಿದ್ದರು. ಅನುಕಂಪ ಆಧಾರದ ಮೇಲೆ ತಿಮ್ಮಪ್ಪ ಮತ್ತು ಬೋಳಬಂಡೆಪ್ಪ ಅವರ ಕುಟುಂಬಕ್ಕೆ ನೇಮಕಾತಿ ನೀಡುವಂತೆ ಕೋರಲಾಗಿತ್ತು. ಜಿಲ್ಲಾಧಿಕಾರಿಗಳು ನಿನ್ನೆ ಸಂಜೆ ದಿ.ತಿಮ್ಮಪ್ಪ ಅವರ ಪುತ್ರ ಶಿವರಾಜರಿಗೆ ಸಿಂಧನೂರು ನಗರಸಭೆಯಲ್ಲಿ ಖಾಲಿಯಿರುವ ಡಿ ಗ್ರೂಪ್ ಹುದ್ದೆಗೆ ನೇಮಕ ಆದೇಶ ನೀಡಲಾಗಿದೆ. ಬೋಳಬಂಡೆಪ್ಪ ಪತ್ನಿ ರೇಖಾ ಅವರಿಗೆ ಮಸ್ಕಿ ಪಟ್ಟಣ ಪಂಚಾಯತಿಯಲ್ಲಿ ಹುದ್ದೆ ನೀಡಿ, ಆದೇಶಿಸಲಾಗಿದೆ.
ಜಿಲ್ಲೆಯ ಇತಿಹಾಸದಲ್ಲಿ ಕೇವಲ ೧೨ ಘಂಟೆಯಲ್ಲಿ ಅನುಕಂಪ ಆಧಾರಿಸಿ ನೇಮಕಾತಿ ಪ್ರಕ್ರಿಯೆ ನಡೆದ ಮತ್ತೊಂದು ಘಟನೆಯಿಲ್ಲ. ಅನುಕಂಪದ ನೇಮಕಾತಿಗಾಗಿ ಸಂತ್ರಸ್ತ ಕುಟುಂಬ ಕಛೇರಿಗಳಿಗೆ ಅಂಡಲೆದು ಕೋರ್ಟ್, ಕಛೇರಿ ಸುತ್ತಿದ್ದರೂ, ನೇಮಕಾತಿ ದೊರೆಯದ ಪರಿಸ್ಥಿತಿ ಜಿಲ್ಲಾಧಿಕಾರಿಗಳ ಈ ಆದೇಶ ಜಿಲ್ಲೆಯಲ್ಲಿ ಹೊಸ ದಾಖಲೆಯಾಗಿದೆ.
ಈ ಸಂದರ್ಭದಲ್ಲಿ ಸ್ಥಾನಿಕ ಜಿಲ್ಲಾಧಿಕಾರಿ ದುರ್ಗೇಶ, ಯೋಜನಾ ನಿರ್ದೇಶಕರಾದ ಆಶಪ್ಪ ಪೂಜಾರ, ಆಯುಕ್ತರಾದ ಕೆ.ಗುರುಲಿಂಗಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.