ಬೆಂಗಳೂರು,ಮಾ.೨೯:ವಿಧಾನಸಭೆ ಚುನಾವಣೆಗೆ ಮತ ಚಲಾಯಿಸಲು ಮತದಾರರ ಗುರುತಿನ ಚೀಟಿ ತೋರಿಸಿಸ ಮತದಾನ ಮಾಡಬಹುದಾಗಿದ್ದು, ಗುರುತಿನ ಚೀಟಿ ಇಲ್ಲದಿದ್ದರೆ ಇತರ ೧೨ ಗುರುತಿನ ಪತ್ರಗಳನ್ನು ತೋರಿಸಿ ಮತ ಚಲಾಯಿಸಲು ಚುನಾವಣಾ ಆಯೋಗ ಅವಕಾಶ ಮಾಡಿಕೊಟ್ಟಿದೆ.
ಆಧಾರ್‌ಕಾರ್ಡ್, ನರೇಗಾ ಜಾಬ್ ಕಾರ್ಡ್, ಭಾವಚಿತ್ರ ಹೊಂದಿರುವ ಬ್ಯಾಂಕ್ ಹಾಗೂ ಪೋಸ್ಟ್ ಆಫೀಸ್‌ನ ಪಾಸ್‌ಬುಕ್,ಕಾರ್ಮಿಕ ಇಲಾಖೆ ವಿತರಿಸುವ ಆರೋಗ್ಯ ಸ್ಮಾರ್ಟ್‌ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಪಾನ್‌ಕಾರ್ಡ್, ಎನ್‌ಪಿಆರ್ ಅಡಿ ಅರ್‌ಜಿಐ ವಿತರಿಸಿರುವ ಸ್ಮಾರ್ಟ್‌ಕಾರ್ಡ್, ಪಾಸ್‌ಪೋರ್ಟ್, ಭಾವಚಿತ್ರ ಹೊಂದಿರುವ ಪಿಂಚಣಿ ದಾಖಲೆ, ಕೇಂದ್ರ, ರಾಜ್ಯಸರ್ಕಾರ, ಸಾರ್ವಜನಿಕ ಉದ್ದಿಮೆಗಳು ವಿತರಿಸಿರುವ ಗುರುತಿನ ಪತ್ರ, ಎಂಪಿ, ಎಂಎಲ್‌ಎ, ಮತ್ತು ವಿಧಾನ ಪರಿಷತ್ ಸದಸ್ಯರುಗಳಿಗೆ ವಿತರಿಸಿರುವ ಗುರುತಿನ ಪತ್ರ, ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಇಲಾಖೆ ವಿತರಿಸಿರುವ ವಿಶಿಷ್ಟ ದಿವ್ಯಾಂಗ ಗುರುತಿನ ಪತ್ರ ಇವುಗಳನ್ನು ತೋರಿಸಿ ಮತದಾನ ಮಾಡಬಹುದಾಗಿದೆ.