೧೨ರಂದು ಬಿಜೆಪಿ ಜನಪ್ರತಿನಿಧಿಗಳ ಸಮಾವೇಶ

ರಾಯಚೂರು,ಜ.೮- ಜಿಲ್ಲೆಯಲ್ಲಿ ಇದೇ ಜ.೧೨ರಂದು ನಗರದ ಹರ್ಷಿತಾ ಗಾರ್ಡನ್ ನಲ್ಲಿ ಸಚಿವ ಜಗದೀಶ ಶೆಟ್ಟರ್ ಅವರ ನೇತೃತ್ವದಲ್ಲಿ ಜನಪ್ರತಿನಿದಿಗಳ ಸಮಾವೇಶ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಎನ್.ಶಂಕ್ರಪ್ಪ ವಕೀಲ್ ತಿಳಿಸಿದರು.
ಅವರು ನಮ್ಮ ಪ್ರತಿನಿಧಿಯೊಂದಿಗೆ ಮಾತನಾಡಿ ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಹಮ್ಮಿಕೊಳ್ಳಲಾದ ಜನಪ್ರತಿನಿದಿಗಳ ಸಮಾವೇಶದ ಪೂರ್ವಾಭಾವಿ ಸಭೆಯಲ್ಲಿ ಇದೇ ಜ.೧೨ ರಂದು ಜನಪ್ರತಿನಿದಿಗಳ ಸಮಾವೇಶ ಜಿಲ್ಲಾ ಪಂಚಾಯತ, ತಾಲೂಕ ಪಂಚಾಯತಿ, ಗ್ರಾಮ ಪಂಚಾಯತಿ ಸದಸ್ಯರು ಸೇರಿದಂತೆ ಎಲ್ಲಾ ಜನಪ್ರತಿನಿದಿಗಳನ್ನು ಕರೆಯಲಾಗುವುದು ಮತ್ತು ಈ ಸಭೆಗೆ ಸಚಿವ ಜಗದೀಶ ಶೆಟ್ಟರ್ ನೇತೃತ್ವದಲ್ಲಿ ರಾಜ್ಯ ಮಟ್ಟದ ತಂಡ ಆಗಮಿಸಲಿದೆ ಎಂದರು.