
ರಾಯಚೂರು,ಮಾ.೧೪- ೧೧ ತಿಂಗಳ ವೇತನವನ್ನು ಮಂಜೂರು ಮಾಡಲು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಮುಖಂಡರು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ರಾಯಚೂರು ತಾಲೂಕಿನ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಗಳಲ್ಲಿ ಕೆಲಸ ಮಾಡಿದ ಅಡಿಗೆ ಆಳು ಅಡಿಗೆಯವರು,ಕಾವಲುಗಾರರು ಮತ್ತು ಬರಹಗಾರರು ಸುಮಾರು ೧೧ ತಿಂಗಳುಗಳಿಂದ ವೇತನ ಇಲ್ಲದೇ ಕುಟುಂಬ ನಿರ್ವಹಣೆ ಮಾಡಲು ಸಾಧ್ಯವಾಗುತ್ತಿಲ್ಲ. ಮನೆಗಳಲ್ಲಿ ಶಾಲೆ ಮಕ್ಕಳಿಗೆ ಶುಲ್ಕ ಕಟ್ಟದೇ ಖಾರ, ಉಪ್ಪು, ಎಣ್ಣೆ, ಬೇಳೆ ಕೊಳ್ಳಲು ಹಣವಿಲ್ಲದೇ ಮನೆಯಲ್ಲಿ ಉಪವಾಸ ಇರುವ ಸನ್ನಿವೇಶ ನಿರ್ಮಾಣವಾಗಿದೆ.
ಆದ್ದರಿಂದ ಕೂಡಲೇ ೧೧ ತಿಂಗಳ ಬಾಕಿ ವೇತನವನ್ನು ಮಂಜೂರು ಮಾಡಬೇಕು ಇಲ್ಲವಾದಲ್ಲಿ ಕಚೇರಿ ಮುಂದೆ ಧರಣಿಯನ್ನು ನಡೆಸಲಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಮಹದೇವಪ್ಪ, ಲಕ್ಷ್ಮೀದೇವಿ, ಎಂ. ಈರಣ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು.