೧೧೫ ಮದ್ಯಪೆಟ್ಟಿಗೆ ಮದ್ಯವಶ

ರಾಜೋಳ್ಳಿ ಗ್ರಾಮದಲ್ಲಿ ಅಬಕಾರಿ ದಾಳಿ
ಮಾನ್ವಿ,ಮಾ.೧೯- ಅಧಿಕೃತ ಮಾಹಿತಿ ಮೇರೆಗೆ ಶನಿವಾರ ಮಧ್ಯರಾತ್ರಿ ಸರಿಸುಮಾರು ೧೧:೪೦ ರ ಸಮಯಕ್ಕೆ ತಾಲೂಕಿನ ರಾಜೋಳ್ಳಿ ಗ್ರಾಮದ ಸಿದ್ದರೂಢ ದೇವಸ್ಥಾನದ ಮುಂಭಾಗದಲ್ಲಿ ಟ್ರ್ಯಾಕ್ಟರ್ ಮೂಲಕ ಅಕ್ರಮವಾಗಿ ೧೧೫ ಪೆಟ್ಟಿಗೆಯಲ್ಲಿ ಮದ್ಯ ಸಾಗಾಟ ಮಾಡುತ್ತಿರುವ ಸಮಯದಲ್ಲಿ ಅಬಕಾರಿ ಪೋಲಿಸರು ದಾಳಿ ಮಾಡಲಾಗಿದ್ದು ಆರೋಪಿಗಳು ಪರಾರಿಯಾಗಿದ್ದಾರೆ ಎಂದು ಅಬಕಾರಿ ನಿರೀಕ್ಷಕರಾದ ಶೈಲಜಾ ನಾಯಕ ಇವರು ಹೇಳಿದರು.
ನಂತರ ಮಾತಾನಾಡಿದ ಅವರು ಮುಂದೆ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಮತದಾರರಿಗೆ ಅಕ್ರಮ ಮದ್ಯ ನೀಡುವ ಉದ್ದೇಶದಿಂದ ಅಕ್ರಮ ಮದ್ಯ ದಾಸ್ತಾನು ಮಾಡುವ ಉದ್ದೇಶದಿಂದ ಸಾಗಾಟ ಮಾಡುತ್ತಿರಬಹುದು ಎನ್ನುವ ಸಂಶಯವಿದ್ದು ಆರೋಪಿಗಳಿಗಾಗಿ ಹುಡುಕಾಟ ನಡೆಯುತ್ತಿದೆ. ಈಗಾಗಲೇ ಇದಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು ಹೆಚ್ಚಿನ ತನಿಖೆ ಕೈಗೊಳ್ಳಲಾಗುತ್ತದೆ. ಈ ದಾಳಿಯಲ್ಲಿ ನಮ್ಮ ಅಬಕಾರಿ ಇಲಾಖೆಯ ಅಧಿಕಾರಿಗಳಾದ ವೀರಮ್ಮ ಎಚ್, ಶಿವಲಿಂಗಯ್ಯ ಸ್ವಾಮಿ, ವೆಂಕೋಬ ಪೇದೆ, ಆಂಜನೇಯ ಪೇದೆ, ಮೆಹಬೂಬ್ ವಾಹನ ಚಾಲಕ ಇದ್ದರು.