೧೦ ವರ್ಷ ಜನಪರ ಆಡಳಿತ : ಡಾ.ಎಸ್.ಎಸ್ ಪಾಟೀಲ್

ರಾಯಚೂರು,ಮೇ.೦೫- ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಇಂದು ನಗರದ ತಿನ್ ಕಂದಿಲ್ ನಲ್ಲಿ ಬಿಜೆಪಿ ಅಭ್ಯರ್ಥಿ ಹಾಲಿ ಶಾಸಕರಾದ ಡಾ.ಶಿವರಾಜ್ ಎಸ್ ಪಾಟೀಲ್ ಅವರು ಭರ್ಜರಿ ಪ್ರಚಾರ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಿವರಾಜ್ ಪಾಟೀಲ್ ಅವರು ನನ್ನ ೧೦ವರ್ಷದಲ್ಲಿ ಜನಪರ ಆಡಳಿತ ಮಾಡಿದ್ದೇನೆ, ಜನರಿಗೆ ಅನುಕೂಲವಾಗುವ ವಾತಾವರಣ ಸೃಷ್ಟಿಯಾಗಿದೆ. ಇನ್ನು ಕ್ಷೇತ್ರವನ್ನ ಅಭಿವೃದ್ಧಿ ಮಾಡಬೇಕ್ಕಾಗಿದೆ ಅದರಿಂದ ನನಗೆ ಮತ್ತೊಮ್ಮೆ ಅವಕಾಶ ಮಾಡಿಕೊಡಿ ಎಂದು ಹೇಳಿದರು.
ತಿನ್ ಕಂದಿಲ್‌ನಲ್ಲಿ ಹಣ್ಣು ಮಾರಾಟಗಾರರ ಅಸೋಸಿಯನ್ ವತಿಯಿಂದ ಎಲ್ಲಾ ಸದಸ್ಯರು, ಹಣ್ಣು ಮಾರಾಟಗಾರರು ಶಾಸಕರನ್ನು ಬೆಂಬಲಿಸುವುದಾಗಿ ತಿಳಿಸಿದರು.
ಪಕ್ಷದ ಮುಖಂಡರು ಕಾರ್ಯಕರ್ತರು ಪ್ರಚಾರದಲ್ಲಿ ಭಾಗವಹಿಸಿದ್ದರು.