೧೦ ದಿನದಲ್ಲಿ ೮ ಬಾರಿ ಪೆಟ್ರೋಲ್ ಡೀಸೆಲ್ ಬೆಲೆ ಹೆಚ್ಚಳ


ನವದೆಹಲಿ, ಮೇ ೧೪- ಕೊರೊನಾ ಎರಡನೇ ಅಲೆ ತಾರಕ್ಕೇರಿರುವ ಸಂಕಷ್ಟದ ನಡುವೆಯೂ ಪೆಟ್ರೋಲ್ ಡೀಸೆಲ್ ಬೆಲೆಯು ಮೇ ೪ರಿಂದ ಒಂದೇ ಸಮನೇ ಹೆಚ್ಚಳವಾಗುತ್ತಿದೆ.ಇಂದು (ಮೇ ೧೪)ರಂದು ಪ್ರತಿ ಲೀಟರ್ ಪೆಟ್ರೋಲ್ ಮೇಲೆ ೨೨ ಪೈಸೆ ಹಾಗೂ ಪ್ರತಿ ಲೀಟರ್ ಡೀಸೆಲ್ ಮೇಲೆ ೩೭ ಪೈಸೆ ಏರಿಕೆ ಮಾಡಿದೆ. ಭೂಪಾಲ್‌ನಲ್ಲಿ ಪೆಟ್ರೋಲ್ ಬೆಲೆ ಶತಕ ಬಾರಿ ಸಿದರೆ, ಬೆಂಗಳೂರಿನಲ್ಲಿ ೯೫ ರೂ. ದಾಟಿದೆ.
ಬೆಂಗಳೂರು: ಪೆಟ್ರೋಲ್ ೯೫.೪೧ ರೂ., ಡೀಸೆಲ್ ೮೭.೯೪ ರೂ ಭೂಪಾಲ್: ಪೆಟ್ರೋಲ್ ೧೦೦.೩೮ ರೂ., ಡೀಸೆಲ್ ೯೧.೩೧ ರೂ. ಮುಂಬೈ: ಪೆಟ್ರೋಲ್ ೯೮.೮೨ ರೂ., ಡೀಸೆಲ್ ೯೦.೧೯ ರೂ ಆಗಿದ್ದರೆ,ಜೈಪುರ: ಪೆಟ್ರೋಲ್ ೯೮.೭೭ ರೂ., ಡೀಸೆಲ್ ೯೧.೫೭ ರೂಗಳಾಗಿದೆ. ಚೆನ್ನೈ: ಪೆಟ್ರೋಲ್ ೯೪.೦೯ ರೂ., ಡೀಸೆಲ್ ೮೭.೮೧ ರೂ ಗಳಾಗಿದ್ದರೆ, ಕೋಲ್ಕತ್ತಾ: ಪೆಟ್ರೋಲ್ ೯೨.೪೪ ರೂ., ಡೀಸೆಲ್ ೮೫.೭೯ ರೂ ಹೆಚ್ಚಳ ಕಂಡಿದೆ. ದೆಹಲಿ: ಪೆಟ್ರೋಲ್ ೯೨.೩೪ ರೂ., ಡೀಸೆಲ್ ೮೨.೯೫ ರೂ.ರಾಂಚಿ ಪೆಟ್ರೋಲ್ ೮೯.೩೯ ರೂ., ಡೀಸೆಲ್ ೮೭.೬೨ ರೂಗಳಿಗೆ ತಲುಪಿದೆ. ಮೇ ತಿಂಗಳಲ್ಲಿ ಒಟ್ಟು ಏಂಟು ಬಾರಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಸ
ಲಾಗಿದೆ. ಪ್ರತಿ ಪೆಟ್ರೋಲ್ ಮೇಲೆ ೧.೯೪ ರೂಪಾಯಿ ಹಾಗೂ ಪ್ರತಿ ಲೀಟರ್ ಡೀಸೆಲ್ಮೇ ಲೆ ೨.೨೨ ರೂಪಾಯಿ ಹೆಚ್ಚಳ ಮಾಡಲಾಗಿದೆ.ಮೇ ೫ರಂದು ಪ್ರತಿ ಪೆಟ್ರೋಲ್ ಮೇಲೆ ೧೩ ಪೈಸೆ ಮತ್ತು ಪ್ರತಿ ಡೀಸೆಲ್ ಮೇಲೆ ೨೧ ಪೈಸೆ, ಮೇ ೬ರಂದು ಪ್ರತಿ ಪೆಟ್ರೋಲ್ ಮೇಲೆ ೧೮ ಪೈಸೆ ಮತ್ತು ಪ್ರತಿ ಡೀಸೆಲ್ ಮೇಲೆ ೩೧ ಪೈಸೆ ಹಾಗೂ ಮೇ ೭ರಂದು ಪ್ರತಿ ಪೆಟ್ರೋಲ್ ಮೇಲೆ ೨೫ ಪೈಸೆ ಮತ್ತು ಪ್ರತಿ ಡೀಸೆಲ್ ಮೇಲೆ ೩೩ ಪೈಸೆ ಬೆಲೆ ಹೆಚ್ಚಿಸಿತ್ತು.ಎರಡು ದಿನ ಮಾತ್ರ ವಿರಮಿಸಿದ್ದ ಕೇಂದ್ರ ಸರ್ಕಾರ ಬಳಿಕ ಮೇ ೧೦ರಂದು ಪ್ರತಿ ಲೀಟರ್ ಪೆಟ್ರೋಲ್ ಮೇಲೆ ೨೩ ಪೈಸೆ ಮತ್ತು ಪ್ರತಿ ಲೀಟರ್ ಡೀಸೆಲ್ ಮೇಲೆ ೩೫ ಪೈಸೆ, ಮೇ ೧೧ರಂದು ಪ್ರತಿ ಲೀಟರ್ ಪೆಟ್ರೋಲ್ ಮೇಲೆ ೨೪ ಪೈಸೆ ಹಾಗೂ ಪ್ರತಿ ಲೀಟರ್ ಡೀಸೆಲ್ ಮೇಲೆ ೩೨ ಪೈಸೆ, ಮೇ ೧೨ರಂದು ಪ್ರತಿ ಲೀಟರ್ ಪೆಟ್ರೋಲ್ ಮೇಲೆ ೨೦ ಪೈಸೆ ಹಾಗೂ ಪ್ರತಿ ಲೀಟರ್ ಡೀಸೆಲ್ ಮೇಲೆ ೨೭ ಪೈಸೆ ಏರಿಕೆ ಮಾಡಿತ್ತು.ಈಗ ಮೇ ೧೪ರಂದು ಪ್ರತಿ ಲೀಟರ್ ಪೆಟ್ರೋಲ್ ಮೇಲೆ ೨೨ ಪೈಸೆ ಹಾಗೂ ಪ್ರತಿ ಲೀಟರ್ ಡೀಸೆಲ್ ಮೇಲೆ ೩೭ ಪೈಸೆ ಹೆಚ್ಚಳ ಮಾಡಿದೆ.