೧೦೮ ಸಿಬ್ಬಂದಿಯ ಹೊಸ ಸಹಾಯ

ಸಿರವಾರ.ಡಿ೨೯-ಹೊಸ ವರ್ಷಾಚರಣೆ ವೇಳೆ ರಜೆ ತೆಗೆದುಕೊಂಡು ಮೋಜು ಮಸ್ತಿ ಅನುಭವಿಸಲು ಬಹುತೇಕರು ಇಚ್ಚಿಸುತ್ತಾರೆ, ಆದರೆ ೧೦೮ ಆಂಬುಲೆನ್ಸ್ ಸಿಬ್ಬಂದಿ, ಈ ಎರಡು ದಿನ ನಿರಂತರ ಸೇವೆ ಒದಗಿಸಲು ಯೋಜಿಸುವ ಮೂಲಕ ಇತ್ತರರಿಗೆ ಮಾದರಿಯಾಗಿದಾರೆ. ದೇಶ ಹಾಗೂ ರಾಜ್ಯದಲ್ಲಿ ಹೊಸ ವರ್ಷಾಚರಣೆ ವೇಳೆ ಮದ್ಯಪಾನ ಮಾಡಿ ನಿರ್ಲಕ್ಷದಿಂದ ಸಂಭವಿಸಬಹುದಾದ ಅಪಘಾತಗಳಿಂದ ಉಂಟಾಗುವ ಜೀವ ಹಾನಿ ತಡೆಯುವ ದೃಷ್ಟಿಯಿಂದ೧೦೮ ಆರೋಗ್ಯ ಕವಚ ಆಂಬುಲೆನ್ಸ್ ಸಿಬ್ಬಂದಿ ಸೇವೆಗೆ ಸನ್ನದ್ಧರಾಗಿದ್ದಾರೆ, ಡಿಸೆಂಬರ್೩೧ ಹಾಗೂ
ಜನವರಿ ೧ರಂದು ಎಲ್ಲ ಸಿಬ್ಬಂದಿ ಸಹ ಇಚ್ಛೆಯಿಂದ ರಜೆ ರದ್ದುಗೊಳಿಸಲಾಗಿದೆ, ಸಿಬ್ಬಂದಿ ರಜೆರಹಿತ ಸೇವೆ
ಸಲ್ಲಿಸಲು ಮುಂದಾಗಿದ್ದಾರೆ.
ಎಲ್ಲ ಉಪಕರಣಗಳೊಂದಿಗೆ ಸನ್ನದ್ಧ: ಜಿಲ್ಲೆಯಲ್ಲಿ ನಿತ್ಯವೂ ೫-೬ ರಸ್ತೆ ಅಪಘಾತ ಪ್ರಕರಣಗಳು ಕಂಡುಬರುತ್ತವೆ ತುರ್ತುಪರಿಸ್ಥಿತಿ ನಿರೀಕ್ಷಿಸುವ ಪ್ರದೇಶದಲ್ಲಿ ಅಂಬುಲೆನ್ಸ್ ನಿಯೋಜಿಸಲಾಗುತ್ತಿದೆ ಹೊಸ ವರ್ಷಾಚರಣೆ ವೇಳೆ ಮುನ್ನೆಚ್ಚರಿಕೆ ಕ್ರಮವಾಗಿ ೧೦೮ ಅಂಬುಲೆನ್ಸ್ ಸಿಬ್ಬಂದಿಗಳು ಸಜ್ಜಾಗಿದ್ದಾರೆ,ಹೊಸವರ್ಷದ ನೆಪದಲ್ಲಿ ಸ್ನೇಹಕೂಟದಲ್ಲಿ ಕುಡಿದು ಮೋಜು ಮಸ್ತಿ ಮಾಡಿ ಮನೆಗೆ ಮರಳುವ ವೇಳೆ ಮಧ್ಯದ ಅಮಲಿನಲ್ಲಿ ರಸ್ತೆ ಅಪಘಾತಗಳು ಘಾಟಿಸುತ್ತಿವೆ, ಎಲ್ಲೆಡೆ ಹೊಸವರ್ಷದ ನಿಮಿತ್ತ ವಿಶೇಷ ಪಾರ್ಟಿಗಳನ್ನು ಆಯೋಜಿಸಲಾಗುತ್ತದೆ, ರಾತ್ರಿ ವೇಳೆ
ಸಂಪೂರ್ಣ ನಿದ್ದೆಗೆಟ್ಟು ಬೆಳಗ್ಗೆ ಮನೆಗೆ ಬರುವಾಗಲೂ ಅಪಘಾತ ಸಂಭವಿಸುವ ಆತಂಕವಿದೆ, ಈ ಎಲ್ಲಾ ಕಾರಣಗಳಿಂದ ಹೆಚ್ಚುವರಿ ಸೇವೆಗಾಗಿ ಆಂಬುಲೆನ್ಸ್ ಸಿಬ್ಬಂದಿಯ ಸಾಪ್ತಾಹಿಕ ರಜೆ ರದ್ದುಗೊಳಿಸಲಾಗಿದೆ, ಎಲ್ಲ ಅಂಬುಲೆನ್ಸ್‌ಗಳಲ್ಲಿ ಆಗತ್ಯ ಇಂಧನ ಆಮ್ಲಜನಕ ವೈದ್ಯಕೀಯ ಉಪಕರಣಗಳನ್ನು ಇರಿಸಲು ಯೋಜಿಸಲಾಗಿದೆ, ರಾಯಚೂರು ತಾಲೂಕಿನ.
ರಾಯಚೂರು ಆಊ ಮಾವಿನಕೆರೆ, ಕಲ್ಮಲಾ, ಗುಂಜಳ್ಳಿ, ಮಠಮಾರಿ, ಶಕ್ತಿನಗರ. ದೇವದುರ್ಗ ತಾಲೂಕಿನ. ದೇವದುರ್ಗ ಖಿಐಊ ಅರಕೇರಾ, ಗಬ್ಬುರು. ಮಾನ್ವಿ ತಾಲೂಕಿನ. ಮಾನ್ವಿ ಖಿಐಊ, ಸಿರವಾರ, ಕವಿತಾಳ, ಪೋತ್ನಾಳ. ಸಿಂಧನೂರು ತಾಲೂಕಿನ. ಸಿಂಧನೂರು ಖಿಐಊ, ಸಾಲುಗುಂದ, ತುರ್ವಿಹಾಳ, ಬಳಗಾನೂರು. ಲಿಂಗಸೂಗೂರ ತಾಲೂಕಿನ. ಲಿಂಗಸೂಗೂರ ಖಿಐಊ, ಮುದುಗಲ್, ಮಸ್ಕಿ ,ಗುರುಗುಂಟಾ ಗ್ರಾಮದ ಸರಕಾರಿ ಆಸ್ಪತ್ರೆಗಳಲ್ಲಿ ಆಂಬುಲೆನ್ಸ್ ಗಳು ಹೇಗೆ ಸಜ್ಜಾಗಿವೆ, ಪೊಲೀಸ್ ಆರೋಗ್ಯ ಇಲಾಖೆ ಹಾಗೂ ಅಗ್ನಿಶಾಮಕದಳದೊಂದಿಗೆ ನಿರಂತರ ಸಂಪರ್ಕ ಹೊಂದಲಾಗಿದೆ,೧೦೮ ಸಿಬ್ಬಂದಿಯ ಈ ಕ್ರಮ ಅವಘಡ ತಪ್ಪಿಸಲು ನೆರವಾಗಲಿದೆ ಎಂಬ ವಿಶ್ವಾಸ ವ್ಯಕ್ತವಾಗಿದೆ.
ಸಿಬ್ಬಂದಿಗಳ ವಿವರ:- ೨೩ಆಂಬುಲೆನ್ಸ್ ಮೀಸಲು ಜಿಲ್ಲೆಯಲ್ಲಿ ೨೩ ಆಂಬುಲೆನ್ಸ್ ಗಳಿದ್ದು ೪೪ನರ್ಸ್, ಚಾಲಕ ೪೯, ಒಳಗೊಂಡಿದ್ದಾರೆ. ಜೆಲ್ಲೆಯಲ್ಲಿ ೨೩ ಆಂಬುಲೆನ್ಸ್‌ಗಳನ್ನು ಅಗತ್ಯ ತಜ್ಞ ಸಿಬ್ಬಂದಿಯೊಂದಿಗೆ ನಿಯೋಜಿಸಲಾಗಿದೆ ತುರ್ತು ಪರಿಸ್ಥಿತಿಯಲ್ಲಿ ಸಾರ್ವಜನಿಕರು೧೦೮ ಕ್ಕೆ ಉಚಿತ ಕರೆ ಮಾಡಬಹುದಾಗಿದೆ, ಸಾವು-ನೋವು ಹಾಗೂ ಅನಾಹುತ ಮಾಹಿತಿಯನ್ನು ಪೊಲೀಸ್ ಅಗ್ನಿಶಾಮಕ ಆರೋಗ್ಯ ಇಲಾಖೆಯೊಂದಿಗೆ ಹಂಚಿಕೊಳ್ಳಲಾಗುವುದ ಎಂದು ತಿಳಿಸಿದ್ದಾರೆ.