೧೦೮ ಮಹಿಳಾ ಅಧಿಕಾರಿಗಳಿಗೆ ಕರ್ನಲ್ ಹುದ್ದೆಗೆ ಬಡ್ತಿ

ನವದೆಹಲಿ,ಜ.೨೧-ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ೧೦೮ ಮಹಿಳಾ ಅಧಿಕಾರಿಗಳನ್ನು ವಿಶೇಷ ಆಯ್ಕೆ ಮಂಡಳಿ ಶೀಘ್ರದಲ್ಲಿ ಕರ್ನಲ್ (ಆಯ್ಕೆ ದರ್ಜೆ) ಹುದ್ದೆಗೆ ಬಡ್ತಿ ನೀಡುವ ಮೂಲಕ ಕಮಾಂಡ್ ಪಾತ್ರ ನಿರ್ವಹಿಸಲು ಸಜ್ಜಾಗಿದ್ದಾರೆ.

ಭಾರತೀಯ ಸೇನೆಯಲ್ಲಿ ಮಹಿಳಾ ಕಮಾಂಡರ್ ಗಳ ಜವಾಬ್ದಾರಿ ನಿರ್ವಹಿಸುತ್ತಿರುವುವುದು ಮಹಿಳಾ ನಾಯಕತ್ವ ಮತ್ತು ಕೌಶಲ್ಯ ಪ್ರದರ್ಶನಕ್ಕೆ ಸಾಕ್ಷಿಯಾಗಿದೆ

೨೪೪ ಮಹಿಳಾ ಆಧಿಕಾರಿಗಳಿಗೆ ಬಡ್ತಿ ನೀಡಲು ನಿರ್ಧರಿಸಿದ್ದು ಅದರಲ್ಲು ೧೦೮ ಮಂದಿ ಭಾರತೀಯ ವಾಯುಸೇನೆಗೆ ಸೇರಿದವರಾಗಿದ್ದಾರೆ. ಕೆಲವು ಮಹಿಳಾ ಆಧಿಕಾರಿಗಳಿಗೆ ಲೆಪ್ಟಿನೆಂಟ್ ಕರ್ನಲ್ ನಿಂದ ಕರ್ನಲ್ ಹುದ್ದೆಗೆ ಬಡ್ತಿ ನೀಡಲಾಗುತ್ತಿದೆ.

ಬಡ್ತಿಗೆ ಆಯ್ಕೆಯಾಗಿರುವ ೨೪೪ ಮಹಿಳಾ ಆಧಿಕಾರಿಗಳು ೧೯೯೨ ರಿಂದ ೨೦೦೬ ರ ತಂಡದಲ್ಲಿ ಸೇರ್ಪಡೆಗೊಂಡ ಅಧಿಕಾರಿಗಳಾಗಿದ್ದಾರೆ.

ಮೊದಲ ಬಾರಿಗೆ, ಮಹಿಳಾ ಅಧಿಕಾರಿಗಳು ಭಾರತೀಯ ಸೇನೆಯಲ್ಲಿ ಪಡೆಗಳಿಗೆ ಕಮಾಂಡ್ ಮಾಡಲು ಸಾಧ್ಯವಾಗಿದೆ. ಅವರ ನಾಯಕತ್ವದ ಕೌಶಲ್ಯಕ್ಕಾಗಿ ಮೌಲ್ಯಮಾಪನ ಮಾಡಲಾಗುತ್ತದೆ ಭಾರತೀಯ ವಾಯುಸೇನೆ ತಿಳಿಸಿದೆ.

೨೦೨೨ರ ಮಾರ್ಚ್ ತಿಂಗಳಲ್ಲಿ ನವದೆಹಲಿಯಲ್ಲಿ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಮಾಧ್ಯಮ ಸಭೆಯಲ್ಲಿ ಭಾರತೀಯ ಸೇನೆಯ ಮಹಿಳಾ ಅಧಿಕಾರಿಗಳು ಪಾಲ್ಗೊಂಡಿದ್ದರು.

ಮಹಿಳಾ ಆಧಿಕಾರಿಗಳಿಗೆ ಆಯುಧಗಳು ಮತ್ತು ಸೇವೆಗಳಲ್ಲಿ ಕಮಾಂಡ್ ಘಟಕಗಳು ಮತ್ತು ಸೇನಾಪಡೆಗಳಿಗೆ ಮಹಿಳಾ ಅಧಿಕಾರಿಗಳಿಗೆ ಬಡ್ತಿ ನೀಡುವ ಜೊತೆಗೆ ಮುಂಚೂಣಿಯಲ್ಲಿ ನಿಯೋಜಿಸಲು ನಿರ್ಧರಿಸಲಾಗಿದೆ.

ಭಾರತೀಯ ರಕ್ಷಣಾ ಪಡೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪಡೆಗಳಿಗೆ ಅದರಲ್ಲಿಯೂ ಮಹಿಳಾ ಆಧಿಕಾರಿಗಳನ್ನುಆಯಕಟ್ಟಿನ ಸ್ಥಳಗಳಲ್ಲಿ ನಿಯೋಜಿಸಲು ಕೂಡ ನಿರ್ಧರಿಸಲಾಗಿದೆ.