೧೦೮ ಆಂಬುಲೆನ್ಸ್ ನಲ್ಲೇ ಗಂಡು ಮಗುವಿಗೆ ಜನನ

ರಾಯಚೂರು,ನ.೩೦- ತಾಲೂಕಿನ ಆಯೀಜಪುರ ಗ್ರಾಮದ ಹೆರಿಗೆ ನೋವಿನಿಂದ ಬಳಲುತ್ತಿದ್ದ ಮಹಿಳೆ ರಾಯಚೂರು ತಾಲೂಕು ಆಸ್ಪತ್ರೆಗೆ ಕರೆದೊಯ್ಯಲು ಬಂದಿದ್ದ ಆರೋಗ್ಯ ಕವಚ ೧೦೮ ವಾಹನದಲ್ಲಿಯೇ, ಹೆರಿಗೆಯಾದ ಘಟನೆ ಇಂದು ಬೆಳಗ್ಗೆ ನಡೆದಿದೆ.
ರಾಯಚೂರು ತಾಲೂಕಿನ ಆಯೀಜಪುರ ನಿವಾಸಿ ಶಾರದಾ ಗಂಡ ತಾಯಪ್ಪ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ, ಹೆರಿಗೆ ನೋವಿನಿಂದ ಬಳಲುತ್ತಿದ್ದ ಹಿನ್ನಲೆಯಲ್ಲಿ, ಕುಟುಂಬಸ್ಥರು ೧೦೮ ಆಂಬುಲೆನ್ಸ್ ಗೆ, ಕರೆ ಮಾಡಿದ್ದರು, ರಾಯಚೂರು ತಾಲೂಕು ಆರೋಗ್ಯ ಕವಚ ೧೦೮ ಗುಂಜಾಳ್ಳಿ ಆಂಬುಲೆನ್ಸ್ ಆಯೀಜಪುರ ಗ್ರಾಮಕ್ಕೆ ತೆರಳಿ ಹೆರಿಗೆ ನೋವಿನಿಂದ ಬಳಲುತ್ತಿದ್ದ ಮಹಿಳೆಯನ್ನು ಆಂಬುಲೆನ್ಸ್ ಮೂಲಕ, ಮಾವಿನ ಕೆರೆ ಆಸ್ಪತ್ರೆಗೆ ಕರೆದುಕೊಂಡು ಬರುವಾಗ, ಹೆರಿಗೆ ನೋವು ಹೆಚ್ಚಾಗಿ ಕಾಣಿಸಿಕೊಂಡ ಹಿನ್ನಲೆಯಲ್ಲಿ ಶುಶ್ರೂಷಕ ಶಿವಯೋಗಿ ಅವರು ಮಾರ್ಗ ಮದ್ಯ ಆಂಬುಲೆನ್ಸ್ ನಲ್ಲೇ ಮಹಿಳೆಗೆ ಸುರಕ್ಷಾತ ಹೆರಿಗೆ ಮಾಡಿಸಿ ನಂತರ ತಾಯಿ ಮಗುವನ್ನು ರಾಯಚೂರು ತಾಲೂಕು ಮಾವಿನ ಕೆರೆ ಅರ್ಬನ್ ಮೆಟ್ರೋನೆಟ್ ಸೆಂಟರ್ ಆಸ್ಪತ್ರೆಗೆ ದಾಖಲಿಸಲಾಗಿದೆ,೧೦೮ ವಾಹನದ ಸಿಬ್ಬಂದಿಗಳಿಗೆ ಕುಟುಂಬಸ್ಥರು ಅಭಿನಂದನೆ ಸಲ್ಲಿಸಿದ್ದಾರೆ ಚಾಲಕ ಶಶಿಕಾಂತ್, ಶುಶ್ರೂಷಕ, ಶಿವಯೋಗಿ ಅವರಿಗೆ ಕುಟುಂಬಸ್ಥರು ಅಭಿನಂದಿಸಿದ್ದಾರೆ.