
ಬೆಂಗಳೂರು/ಚೆನ್ನೈ,ಮೇ.೧- ಖ್ಯಾತ ನಿರ್ದೇಶಕ ಮಣಿರತ್ನ ನಿರ್ದೇಶನ ಮಾಡಿರುವ ಪೊನ್ನಿಯನ್ ಸೆಲ್ವಂ-೨ ಬಿಡುಗಡೆಯಾದ ಮೂರೇ ದಿನಗಳಲ್ಲಿ ವಿಶ್ವದಾದ್ಯಂತ ನೂರು ಕೋಟಿ ರೂಪಾಯಿಗೂ ಅಧಿಕ ಹಣ ಸಂಗ್ರಹಿಸುವ ಮೂಲಕ ೧೦೦ ಕೋಟಿ ಕ್ಲಬ್ ಸೇರಿದೆ.
ಕಲ್ಕಿ ಕೃಷ್ಣಮೂರ್ತಿಯವರ ಅದೇ ಹೆಸರಿನ ಕಾದಂಬರಿಯನ್ನು ಆಧರಿಸಿ ಮಣಿರತ್ನಂ ಅವರು ಪೊನ್ನಿಯನ್ ಸೆಲ್ವಂ-೨ ಚಿತ್ರ ಮಾಡಿದ್ದಾರೆ. ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಹಣ ಸಂಗ್ರಹಣೆಯಲ್ಲಿಧೂಳೆಬ್ಬಿಸಿದೆ.
ಕನ್ನಡ,ತಮಿಳು, ಮಲೆಯಾಳಂ,ತೆಲುಗು ಮತ್ತು ಹಿಂದಿ ಭಾಷೆಯಲ್ಲಿ ಚಿತ್ರ ತೆರೆಗೆ ಬಂದಿದ್ದು ಚಿತ್ರದಲ್ಲಿ ಚಿಯಾನ್ ವಿಕ್ರಂ, ಐಶ್ವರ್ಯ ರೈ ಬಚ್ಚನ್, ತ್ರಿಶಾ ಕೃಷ್ಣನ್, ಜಯಂ ರವಿ, ಕಾರ್ತಿ, ಪ್ರಕಾಶ್ ರೈ, ಕಿಶೋರ್, ನಾಜರ್ ಸೇರಿದಂತೆ ದೊಡ್ಡ ತಾರಾಬಳಗವೇ ಚಿತ್ರದಲ್ಲಿದೆ.
ಪೊನ್ನಿಯಿನ್ ಸೆಲ್ವನ್ ೨ ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡುತ್ತಿದೆ. ಮಣಿರತ್ನಂ ಚಿತ್ರ ಜನರ ಹೃದಯ ಮತ್ತು ಗಲ್ಲಾಪೆಟ್ಟಿಗೆಯನ್ನು ಗೆದ್ದಿದೆ. ಪಿಎಸ್-೨ “ವಿಶ್ವದಾದ್ಯಂತ ಹೃದಯಗಳನ್ನು ಗೆಲ್ಲುತ್ತಿದೆ”
ಚಿತ್ರತಂಡ ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ವೀಡಿಯೊದಲ್ಲಿ, ಚಿತ್ರ “೧೦೦ ಪ್ಲಸ್ ಕೋಟಿ ವಿಶ್ವಾದ್ಯಂತ ಒಟ್ಟು” ಸಂಗ್ರಹಿಸಿದೆ ಎಂದು ಹೇಳಿದೆ. ಪಿಎಸ್೨ ಹೃದಯಗಳನ್ನು ಮತ್ತು ಬಾಕ್ಸ್ ಆಫೀಸ್ ಅನ್ನು ಗೆಲ್ಲುತ್ತದೆ ಮಣಿರತ್ನಂ ಅವರ ಕೆಲಸಕ್ಕೆ ವಿಶ್ವದಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ ಎಂದು ಟಿಪ್ಪಣಿ ಬರೆಯಲಾಗಿದೆ.
ಚೋಳ ಸಾಮ್ರಾಜ್ಯದ ಗತವೈಭವ ಸಾರುವ ಈ ಸಿನಿಮಾ ಮೇಕಿಂಗ್, ತಾರಾ ಬಳಗ, ಸಂಗೀತ, ನಟನೆ ಎಲ್ಲದರಲ್ಲಿಯೂ ನೋಡುಗರ ಗಮನಸೆಳೆಯುತ್ತಿದೆ. ಲೈಕಾ ಪ್ರೊಡಕ್ಷನ್ಸ್ ಮತ್ತು ಮದ್ರಾಸ್ ಟಾಕೀಸ್ ಬ್ಯಾನರ್‍ನಡಿ ಈ ಸಿನಿಮಾವನ್ನು ಅದ್ಧೂರಿಯಾಗಿ ನಿರ್ಮಾಣ ಮಾಡಲಾಗಿದೆ.
ಕಳೆ ವರ್ಷ ಸೆಪ್ಟೆಂಬರ್ ೩೦ ರಂದು ಬಿಡುಗಡೆ ಆಗಿದ್ದ ಪೊನ್ನಿಯನ್ ಸೆಲ್ವನ್ ಮೊದಲ ಭಾಗ ಬರೋಬ್ಬರಿ ೫೦೦ ಕೋಟಿ ಲೂಟಿ ಮಾಡಿತ್ತು. ಈಗ ತೆರೆಗೆ ಬಂದಿರುವ ಸಿಕ್ವೇಲ್ ಕೂಡ ಅಭೂತಪೂರ್ವ ಯಶಸ್ಸು ಕಾಣುತ್ತಿದ್ದು, ಬಾಕ್ಸಾಫೀಸ್ ಕೊಳ್ಳೆ ಹೊಡೆಯುತ್ತಿದೆ.