೧೦೦ಕ್ಕೂ ಅಧಿಕ ತಾಲಿಬಾನ್‌ ಉಗ್ರರ ಹತ್ಯೆ

ಕಾಬೂಲ್‌, ಜೂ.೪- ಅಫ್ಘಾನಿಸ್ತಾನದಲ್ಲಿ ಭದ್ರತಾ ಪಡೆ ದೇಶದಾದ್ಯಂತ ನಡೆಸಿದ ಕಾರ್ಯಾಚರಣೆಗಳಲ್ಲಿ 100ಕ್ಕೂ ಹೆಚ್ಚು ತಾಲಿಬಾನ್ ಭಯೋತ್ಪಾದಕರನ್ನು ಹೊಡೆದುರುಳಿಸಲಾಗಿದೆ ಎಂದು ಅಫ್ಘಾನ್ ರಕ್ಷಣಾ ಸಚಿವಾಲಯ ತಿಳಿಸಿದೆ.

ಖಮಾ ಪ್ರೆಸ್ ಪ್ರಕಾರ, ಭದ್ರತಾ ಪಡೆ ಮತ್ತು ತಾಲಿಬಾನ್ ನಡುವಿನ ಸೆಣಸಾಟದಲ್ಲಿ 100 ಕ್ಕೂ ಹೆಚ್ಚು ಭಯೋತ್ಪಾದಕರನ್ನು ಮೃತಪಟ್ಟಿದ್ದಾರೆ. ಕಾರ್ಯಾಚರಣೆಯ ಸಮಯದಲ್ಲಿ, 50 ಭಯೋತ್ಪಾದಕರು ಗಾಯಗೊಂಡಿದ್ದು, ಹಲವಾರು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ ಇದಲ್ಲದೆ ಉಗ್ರರ ಅಪಾರ ಪ್ರಮಾಣದ ಮದ್ದುಗುಂಡುಗಳನ್ನು ನಾಶಪಡಿಸಲಾಗಿದೆ ಎಂದು ಸಚಿವಾಯ ತಿಳಿಸಿದೆ ಎಂದು ಅಲ್ಲಿನ ಮಾಧ್ಯಮ ಖಮಾ ಪ್ರೆಸ್ ವರದಿ ಮಾಡಿದೆ. ಕಳೆದ 24 ಗಂಟೆಗಳಲ್ಲಿ ಅಫ್ಘಾನಿಸ್ತಾನದ ಲಾಗ್ಮನ್, ಕುನಾರ್, ನಂಗರ್ಹಾರ್, ಘಜ್ನಿ, ಪಕ್ತಿಯಾ, ಮೈದಾನ್ ವಾರ್ಡಾಕ್, ಖೋಸ್ಟ್, ಜಾಬುಲ್, ಬದ್ಗಿಸ್, ಹೆರಾತ್, ಫರಿಯಾಬ್, ಹೆಲ್ಮಾಂಡ್ ಮತ್ತು ಬಾಗ್ಲಾನ್ ಪ್ರಾಂತ್ಯಗಳಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಅಫ್ಘಾನಿಸ್ತಾನದಲ್ಲಿ ಹಿಂಸಾಚಾರ ಮತ್ತು ದಂಗೆ ಇತ್ತೀಚೆಗೆ ಹೆಚ್ಚಾಗಿದೆ, ಆದಾಗ್ಯೂ, ತಾಲಿಬಾನ್ ಇನ್ನೂ ಅಧಿಕೃತವಾಗಿ ತಾವು ಕಾರಣಕರ್ತರೆಂಪು ಒಪ್ಪಿಕೊಂಡಿಲ್ಲ, ಆದರೆ ಪ್ರಾಯೋಗಿಕವಾಗಿ ಅವರು ದೇಶಾದ್ಯಂತ ಹಲವಾರು ಸ್ಥಳಗಳಲ್ಲಿ ಭದ್ರತಾ ಚೆಕ್‌ಪೋಸ್ಟ್‌ಗಳು ಮತ್ತು ಬೆಂಗಾವಲುಗಳ ಮೇಲೆ ದಾಳಿ ಮಾಡಲು ಪ್ರಾರಂಭಿಸಿದ್ದಾರೆ ಎಂದು ವರದಿ ತಿಳಿಸಿದೆ.