೧೦ನೇ ವರ್ಷದ ವೈಭವದ ಶರನ್ನವರಾತ್ರಿ ಮಹೋತ್ಸವ

ರಾಯಚೂರು.ಅ.೧೬- ತಾಲೂಕಿನ ಸುಕ್ಷೇತ್ರ ಮಮದಾಪುರ ಶ್ರೀ ಮಾತಾ ಗಧಾರ ಮಾರಿಕಾಂಬಾ ದೇವಸ್ಥಾನದಲ್ಲಿ ನವರಾತ್ರಿ ಪ್ರಯುಕ್ತ ೧೦ ನೇ ವರ್ಷದ ವೈಭವದ ಶರನ್ನವರಾತ್ರಿ ಮಹೋತ್ಸವ ಅಂಗವಾಗಿ ರವಿವಾರ ರಂದು ಬೆಳಿಗ್ಗೆ ಭಾಜಾ ಭಾಜಂತ್ರಿ, ಕಳಸ ಕನ್ನಡಿ, ಡೊಳ್ಳು ಕುಣಿತ, ಶ್ರೀ ವೀರಯ್ಯ ಸ್ವಾಮಿ ಹಿರೇಮಠ ವೀರಗಾಸೆ (ಶಸ್ತ್ರಧಾರಿಗಳ ಕುಣೀತ) ಕಲಾವಿದರು, ಬೂದುಗುಂಪ, ಕಾರಟಗಿ, ನಂದಿಕೋಲು ಕುಣಿತದೊಂದಿಗೆ ಪಲ್ಲಕ್ಕಿ ಸೇವೆಯನ್ನು ಗಂಗಾ ಪೂಜೆಯ ಮುಖಾಂತರ ಪ್ರಾರಂಭಿಸಿ ದೇವಿ ಸನ್ನಿಧಿಯಲ್ಲಿ ಸರ್ವಭಕ್ತರ ಸಾಮೂಹಿಕ ಪ್ರಾರ್ಥನೆ, ಭಜನೆ ಹಾಗೂ ಯುವಕರ ಮಾಲಾಧಾರಣೆ ನಂತರ ಮಹಾಮಂಗಳಾರುತಿ ನಡಿಯುತ್ತು ಹಾಗೂ ಮಧ್ಯಾಹ್ನ ೨.೦೦ ಗಂಟೆಗೆ ದೇವಿ ಘಟಸ್ಥಾಪನೆ ವಿಶೇಷ ಪ್ರಸಾದದ ವ್ಯವಸ್ಥೆ ನಡಿಯುತ್ತು.
ಸಾಯಂಕಾಲ ೬ ಗಂಟೆಯಿಂದ ೮ ಗಂಟೆಯವರೆಗೆ ನರೇಶ ಕುಮಾರ ದುರ್ವಾ, ರಾಯಚೂರು ಇವರ ನೇತೃತ್ವದಲ್ಲಿ ದಾಂಡಿಯ ಕಾರ್ಯಕ್ರಮ ಸಣ್ಣ ಹುಲಿಗೆಮ್ಮ ಕೊನಿಂಟಿ ಮಾರೆಪ್ಪ, ಮಮದಾಪೂರು ದಾಸೋಹ ಕಾರ್ಯಕ್ರಮವನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ಮುಖ್ಯ ಅರ್ಚಕರು ಹಾಗೂ ಮಮದಾಪುರ ಗ್ರಾಮದ ಹಿರಿಯರು ಮಹಿಳೆಯರು ಯುವಕರು ವಿವಿಧ ಸಂಘಟನೆಗಳು ದೇವರಿಗೆ ಕೃಪೆಗೆ ಪಾತ್ರರಾದರು.