ಹೈದರಾಬಾದ್,ಜೂ.೧೨-ಸಿಟಾಡೆಲ್ ವೆಬ್ ಸೀರೀಸ್ ಇಂಡಿಯಾ ಪ್ರಿಯಾಂಕಾ ಚೋಪ್ರಾ ಮತ್ತು ರಿಚರ್ಡ್ ಮ್ಯಾಡೆನ್ ಅವರ ಸಿಟಾಡೆಲ್ ರೂಪಾಂತರ ವೆಬ್ ಸೀರೀಸ್ ಆಗಿದ್ದು ಇದನ್ನು ರಾಜ್ ಮತ್ತು ಡಿ. ಕೆ. ನಿರ್ಮಿಸುತ್ತಿದ್ದಾರೆ .ಭಾರತೀಯ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಇದೇ ಮೊದಲ ಬಾರಿಗೆ ಸಮಂತಾ ಮತ್ತು ವರುಣ್ ತೆರೆ ಹಂಚಿಕೊಂಡಿದ್ದಾರೆ. ಸಮಂತಾ ಮತ್ತು ವರುಣ್ ಈ ಬೇಸಿಗೆಯಲ್ಲಿ ಲಂಡನ್ನಿನಲ್ಲಿ ಪ್ರಿಯಾಂಕಾ ಚೋಪ್ರಾ ಅವರೊಂದಿಗೆ ಸರಣಿಯ ಜಾಗತಿಕ ಪ್ರೀಮಿಯರ್ ನಲ್ಲಿ ಭಾಗವಹಿಸಿದ್ದರು.
ದಿ ಫ್ಯಾಮಿಲಿ ಮ್ಯಾನ್ ೨ ರ ಅದ್ಭುತ ಯಶಸ್ಸಿನ ನಂತರ ಮತ್ತು ಅಲ್ಲು ಅರ್ಜುನ್ ಅಭಿನಯದ ಪುಷ್ಪಾ ಚಿತ್ರದ ವಿಶೇಷ ಗೀತೆ ಊ ಅಂತವಾ ನಂತರ ಹೆಚ್ಚುತ್ತಿರುವ ಬೇಡಿಕೆಯಿಂದಾಗಿ ಸಮಂತಾ ರುತ್ ಪ್ರಭು ಅವರು ತಮ್ಮ ಮುಂಬರು ಚಿತ್ರಗಳಿಗೆ ಸಂಭಾವನೆಯನ್ನು ಹೆಚ್ಚಿಸಿದ್ದಾರೆ ಎಂದು ಈಗ ವರದಿಯಾಗಿದೆ.
ವರದಿಯ ಪ್ರಕಾರ, ಪ್ಯಾನ್-ಇಂಡಿಯಾ ಪ್ರಾಜೆಕ್ಟ್‌ಗಾಗಿ ಸಮಂತಾ ೧೦ ಕೋಟಿ ರೂಪಾಯಿಗಳ ಸಂಭಾವನೆಗೆ ಬೇಡಿಕೆ ಇಟ್ಟಿದ್ದಾರೆ.ಎಲ್ಲರಿಗೂ ತಿಳಿದಿರುವಂತೆ ಸಿಟಾಡೆಲ್ ಸಮಂತಾಗೆ ಪ್ಯಾನ್-ಇಂಡಿಯಾ ಪ್ರಾಜೆಕ್ಟ್ ಆಗಿದ್ದು ಅದು ಬಹು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಈ ಸುದ್ದಿ ಚಿತ್ರ ನಿರ್ಮಾಪಕರು ಮತ್ತು ಅಭಿಮಾನಿಗಳಲ್ಲಿ ಸಾಕಷ್ಟು ಚರ್ಚೆಯನ್ನು ಹುಟ್ಟು ಹಾಕಿದೆ ಎಂದು ವರದಿ ತಿಳಿಸಿದೆ. ವರದಿಯ ಸತ್ಯಾಸತ್ಯತೆ ಬಗ್ಗೆ ಖಚಿತವಿಲ್ಲ.
ಸಿಟಾಡೆಲ್ ಇಂಡಿಯಾ ಚಿತ್ರೀಕರಣಕ್ಕಾಗಿ ಸಮಂತಾ ಪ್ರಸ್ತುತ ಬೆಲ್‌ಗ್ರೇಡ್‌ನಲ್ಲಿದ್ದಾರೆ. ಅವರು ಇತ್ತೀಚೆಗೆ ತಮ್ಮ ಚಿತ್ರೀಕರಣದ ಚಿತ್ರಗಳ ಸರಣಿಯನ್ನು ತಮ್ಮ ಅಧಿಕೃತ ಜಾಲತಾಣದಲ್ಲಿ , ಹಂಚಿಕೊಂಡಿದ್ದಾರೆ. ಒಂದು ಚಿತ್ರದಲ್ಲಿ ಸಮಂತಾ ಸೋಫಾದಲ್ಲಿ ವಿಶ್ರಾಂತಿ ಪಡೆಯುತ್ತಿರುವುದನ್ನು ಕಾಣಬಹುದು, ಮತ್ತೊಂದು ಚಿತ್ರದಲ್ಲಿ
ಹೋಟೆಲ್ ಕೋಣೆಯಿಂದ ಬೆರಗುಗೊಳಿಸುವ ಮುಸ್ಸಂಜೆಯ ನೋಟವನ್ನು ಸೆರೆಹಿಡಿಯಲಾಗಿದೆ.
ಅಲ್ಲಿಂದ ಬೆಲ್‌ಗ್ರೇಡ್‌ನಲ್ಲಿನ ಬೃಹತ್ ಗಗನಚುಂಬಿ ಕಟ್ಟಡಗಳನ್ನು ನೋಡಬಹುದು. ಮೂರನೆಯ ಚಿತ್ರದಲ್ಲಿ ಸಮಂತಾ ತಮ್ಮ ಸಿಟಾಡೆಲ್ ಪಾತ್ರದ ಬಟ್ಟೆಗಳನ್ನು ಧರಿಸಿದ್ದಾರೆ, ಅವರ ಚಿತ್ರೀಕರಣದ ಸೆಟ್‌ನಲ್ಲಿ ನಿರ್ದೇಶಕ ರಾಜ್ ನಿಡಿಮೋರು ಜೊತೆಗೆ ಇದ್ದು ಅದಕ್ಕೆಮೂಡ್ ಶೀರ್ಷಿಕೆ ನೀಡಿದ್ದಾರೆ.